ಸಿನಿಮಾ

ಪ್ರತಿಭಾನ್ವಿತ ನಟ ರಮೇಶ್ ಅರವಿಂದ್‍ಗೆ ಜನುಮ ದಿನದ ಸಂಭ್ರಮ!

ಭಾರತೀಯ ಚಿತ್ರರಂಗದ ಬಹುಭಾಷಾ ಪ್ರತಿಭಾನ್ವಿತ ಸಜ್ಜನ ನಟ ರಮೇಶ್ ಅರವಿಂದ್‍ಗೆ ಇಂದು ( 10.09.2018) ಜನುಮ ದಿನದ ಸಂಭ್ರಮ! ಸಮಸ್ತ ಕನ್ನಡ ಚಿತ್ರರಸಿಕರ ಪರವಾಗಿ ರಮೇಶ್ ಅರವಿಂದ್‍ರವರಿಗೆ ಜನುಮ ದಿನದ ಶುಭಾಶಯಗಳು.

ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ, ರಮೇಶ್ ಅರವಿಂದ್ ಒಬ್ಬ ಪ್ರತಿಭಾನ್ವಿತ ಕಲಾವಿದ,  ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೊದರೆ ಅವರ ಬಹುಮುಖ ಪ್ರತಿಭೆ ಅನಾವರಣಗೊಳ್ಳುತ್ತಾ ಹೊಗುತ್ತದೆ. ರಮೇಶ್ ಕೆ. ಬಾಲಚಂದರ್ ರವರ ಗರಡಿಯಲ್ಲಿ ಬೆಳೆದ ಪ್ರತಿಭೆ, ಸುಂದರ ಸ್ವಪ್ನಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಇವರು ಇಲ್ಲಿಯವರೆಗೂ 100ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜೊತೆ ತಮಿಳು, ತೆಲುಗು, ಹಿಂದಿ ಮಲಯಾಳಂ, ಚಿತ್ರಗಳಲ್ಲೂ ನಟಿಸಿ ಸಹಿ ಎನಿಸಿಕೊಂಡಿರುವ ಇವರ ಟಿ.ವಿ. ಶೋಗಳು ಎಲ್ಲರಿಗೂ ಅಚ್ಚು ಮೆಚ್ಚು! ಕುಟುಂಬ ಸಮೇತರಾಗಿ ನೋಡಬಹುದಾದ ಉತ್ತಮ ಕಾರ್ಯಕ್ರಮಗಳು ಪ್ರೀತಿಯಿಂದ ರಮೇಶ್, ರಾಜಾ ರಾಣಿ ರಮೇಶ್ ಮತ್ತು ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮಗಳು ಕನ್ನಡಿಗರ ಹೃದಯ ಗೆದ್ದಿವೆ. ಇವರ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ತಪ್ಪದೇ ನೋಡುತ್ತಾರೆ. ಇವರ ಮಾತಿನ ಶೈಲಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.

ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಅಮೃತವರ್ಷಿಣಿ, ಅನುರಾಗ ಸಂಗಮ, ಹೀಗೆ ಹಲವಾರು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದಿರುವ ರಮೇಶ್ ಅರವಿಂದ್ ತ್ಯಾಗರಾಜನೆಂದೆ ಖ್ಯಾತಿ ಪಡೆದಿದ್ದಾರೆ. ಸ್ವತ: ನಿರ್ದೇಶನದ ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ, ವೆಂಕಟ್ ಇನ್ ಸಂಕಟ್ ಚಿತ್ರಗಳು ಅತ್ಯತ್ತಮವಾಗಿ ಮೂಡಿಬಂದಿವೆ. ಚಿತ್ರಗಳಿಗೆ ಕಥೆ ಬರೆಯುವ ಮೂಲಕ ಕಥೆಗಾರನಾಗಿಯೂ ರಮೇಶ್ ಹೆಸರು ಮಾಡಿದ್ದಾರೆ. ಇವರ ಪ್ರತಿಭೆಗೆ ಹಲವಾರು ಪ್ರಶಸ್ತಿಗಳು ಸಂದಿವೆ.


ರಮೇಶ್ ಅರವಿಂದ್ ಪತ್ನಿ ಶ್ರೀಮತಿ ಅರ್ಚನಾ, ಮಗಳು ನಿಹಾರಿಕಾ ಮಗ ಅರ್ಜುನ್. ಸದಾ ಲವಲವಿಕೆಯಿಂದ ಇರುವ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದ ಸರಳ ಸಜ್ಜನ ನಟ ಎಂದರೆ ತಪ್ಪಾಗಲಾರದು. ರಮೇಶ್ ಅರವಿಂದ್‍ರವರು ಮತ್ತಷ್ಟು ಚಿತ್ರರಂಗದಲ್ಲಿ ಹೆಸರು ಮಾಡಲಿ. ಅವರ ಪ್ರತಿಭೆ ಇನ್ನಷ್ಟು ಪ್ರಜ್ವಲಿಸಲಿ ಎಂದು ಈ ಮೂಲಕ ಹಾರೈಸುತ್ತೇನೆ.

-ನವೀನ್ ರಾಮನಗರ

PC: Google

ಬದುಕಿಗೊಂದು ಭರವಸೆಯ ಮಾತು! ಅಧಿಕೃತ ಯೂ ಟ್ಯೂಬ್ ಚಾನೆಲ್ ಚಿಗುರು ಕನ್ನಡ ಟಿ.ವಿ.

Subscribe ಆಗಿ ಪ್ರೋತ್ಸಾಹಿಸಿ youtube subscribe: chiguru kannada tv

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!