ಸಿನಿಮಾ

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೊಡಿಯ ಲವ್ ಮಾಕ್ಟೇಲ್ 2 ಫೆಬ್ರವರಿ 11ಕ್ಕೆ ರಾಜ್ಯಾದ್ಯಂತ ಬೆಳ್ಳಿ ತೆರೆಗೆ

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪ್ರೀತಿಸಿ ಮದುವೆಯಾದ ಸಿನಿ ಜೊಡಿ ಈ ಮುದ್ದಾದ ಜೊಡಿ ಈಗಾಗಲೇ ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದು, ಲವ್ ಮಾಕ್ಟೇಲ್ ಚಿತ್ರ ಭರ್ಜರಿ ಯಶಸ್ಸನ್ನು ಗಳಿಸಿತ್ತು. ಹಾಡುಗಳು, ಡೈಲಾಗ್, ಕಥೆ , ನಟನೆ ಸಂಗೀತ ಹೀಗೆ ಚಿತ್ರದ ಪ್ರತಿಯೊಂದನ್ನು ಪ್ರೇಕ್ಷಕ ಮಹಾ ಪ್ರಭು ಮೆಚ್ಚಿಕೊಂಡಿದ್ದ, ಇದೀಗ ಇದೇ ಜೊಡಿಯ ಲವ್ ಮಾಕ್ಟೇಲ್ 2 ಚಿತ್ರ ಫೆಬ್ರವರಿ 11ರಂದು ರಾಜ್ಯಾದ್ಯಂತ ಬೆಳ್ಳಿ ತೆರೆಗೆ ಬರುತ್ತಿದೆ. ಪ್ರೇಕ್ಷಕರು ಕೂಡ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದು, ಈಗಾಗಲೇ ಪ್ರೀಮಿಯರ್ ಶೋ ಟಿಕೇಟ್‍ಗಳು ಸೋಲ್ಡ್ ಔಟ್ ಆಗುವ ಮೂಲಕ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರದ ಟ್ರೈಲರ್ ಈಗಾಗಲೇ ಸಕತ್ ಸಕ್ಸಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಮೂರು ಮಿಲಿಯನ್ ವೀಕ್ಷಣೆಯಾಗಿದೆ. ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. ಕೊರೊನಾ 3ನೇ ಅಲೆ ಕೂಡ ತಣ್ಣಗಾಗಿದ್ದು, ಚಿತ್ರಪ್ರೇಮಿಗಳು ನಿಶ್ಚಿಂತೆಯಿಂದ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಬಹುದಾಗಿದೆ. ಲವ್ ಮಾಕ್ಟೇಲ್ 2 ಯಶಸ್ಸನ್ನು ಕಾಣಲಿ ಕನ್ನಡ ಸಿನಿಮಾಗಳು ಗೆಲ್ಲಲಿ ಎಂದು ಹಾರೈಸೋಣ.

 

ತಾರಗಣದಲ್ಲಿ: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ರಾಚೆಲ್, ಅಮೃತ ಅಯ್ಯಂಗರ್, ರಚನಾ, ಅಭಿಲಾಶ್ ಹಾಗೂ ಇತರರು ಅಭಿನಯಿಸಿದ್ದಾರೆ. ಚಿತ್ರ ನಿರ್ಮಾಪಕರು ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಕಥೆ-ನಿರ್ದೇಶನ ಡಾರ್ಲಿಂಗ್ ಕೃಷ್ಣ, ಚಿತ್ರಕ್ಕೆ ಸಂಗೀತ ನೀಡಿದ್ದಾರೆ ನಕುಲ್ ಅಭಯಂಕರ್, ಸಿನಿಮಾಟೋಗ್ರಾಪರ್ ಶ್ರೀಕ್ರೇಜಿಮೈಂಡ್ಸ್.

-Naveen Ramanagara

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!