ಸಿನಿಮಾ

ಕಿಚ್ಚ ಸುದೀಪ್ ಗೆ ಯಶಸ್ಸು ಸುಲಭವಾಗಿ ಸಿಕ್ಕಿದ್ದಲ್ಲ!ಅವರ ಪರಿಶ್ರಮ, ಛಲ ಶ್ರದ್ದೆಯಿಂದ ಸಿಕ್ಕಿದ್ದು!

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ನಟನೆಯ ಮೂಲಕ ಚಿತ್ರರಸಿಕರ ಮನಗೆದ್ದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಜನುಮ ದಿನದ ಸಂಭ್ರಮ! ಸುದೀಪ್‍ಗೆ ಸಮಸ್ತ ಚಿತ್ರರಸಿಕರ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು!

ಸುದೀಪ್ ಅಂದ ತಕ್ಷಣ ನಮಗೆ ನೆನಪಾಗುವುದು ಹುಚ್ಚ, ಆಟೋಗ್ರಾಪ್, ನಂದಿ, ರನ್ನ ಇನ್ನೂ ಹತ್ತು ಹಲವಾರು ಚಿತ್ರಗಳು, ಜೊತೆಗೆ ಅವರ ನಿರೂಪಣೆಯಲ್ಲಿ ಅತ್ಯದ್ಭುತವಾಗಿ ಮೂಡಿಬರುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ! ಹೌದು ಸುದೀಪ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು ಕಾರಣ ಅವರ ಮಾತಿನ ಶೈಲಿ ಮತ್ತು ಅವರ ನಟನೆ! ನಿಮಗೆ ಆಶ್ಚರ್ಯವಾಗಬಹುದು ಸುದೀಪ್ ಸುಲಭವಾಗಿ ಚಿತ್ರರಂಗದಲ್ಲಿ ಹೆಸರನ್ನು ಪಡೆದವರಲ್ಲ! ಅವರ ಪರಿಶ್ರಮ, ಛಲ ಶ್ರದ್ದೆ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ!

ಸಂಜೀವ್ ,ಸರೋಜ ದಂಪತಿಯ ಮಗ ಸುದೀಪ್ ಹುಟ್ಟಿದ್ದು ಶಿವಮೊಗ್ಗದಲ್ಲಿ. ಸುದೀಪ್‍ಗೆ ಬಾಲ್ಯದಲ್ಲಿ ಕ್ರಿಕೇಟ್ ಆಟದ ಬಗ್ಗೆ ಆಸಕ್ತಿಯಿತ್ತು. ತಂದೆ ಬೆಂಗಳೂರಿನ ಹೋಟೇಲ್ ಉದ್ಯಮ ನಡೆಸುತ್ತಿದ್ದರು. ದಯಾನಂದ ಸಾಗರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಓದಿರುವ ಸುದೀಪ್‍ಗೆ ಮಾಡೆಲ್ ಲೋಕ ಆಕರ್ಷಿಸಿತು. ನಂತರ ಸಿನಿಮಾ ಗೀಳನ್ನು ಅಂಟಿಸಿಕೊಂಡ ಸುದೀಪ್ ನಟನೆಯ ತರಬೇತಿಗೆ ಸೇರಿ ಅಭಿನಯವನ್ನು ಕರಗತ ಮಾಡಿಕೊಂಡರು. ತಾಯವ್ವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಸುದೀಪ್ ಮುಂಚೆ ಧಾರವಾಹಿಗಳಲ್ಲಿಯೂ ನಟಿಸಿದ್ದರು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದೆ ಸುದೀಪ್ ಹುಚ್ಚ ಚಿತ್ರದ ತಮ್ಮ ಅಭಿನಯದ ಮೂಲಕ ಕನ್ನಡದ ಚಿತ್ರರಸಿಕರ ಹೃದಯದಲ್ಲಿ ಶಾಶ್ವತವಾಗಿ ಕಿಚ್ಚ ಸುದೀಪನಾಗಿ ಉಳಿದುಬಿಟ್ಟರು.

ತಾಯವ್ವ ಸಿನಿಮಾ ಬಿಡುಗಡೆಯಾದಗ ಆಟೋಗ್ರಾಪ್ ಕೇಳುತ್ತಾರೆಂದು ಪೆನ್ನನ್ನು ತೆಗೆದುಕೊಂಡು ಹೋಗಿದ್ದ ಸುದೀಪ್‍ಗೆ ನಿರಾಶೆ ಆಗಿತ್ತು! ಅವರ ಬಳಿ ಒಬ್ಬರು ಆಟೋಗ್ರಾಫ್ ಪಡೆದಿರಲಿಲ್ಲವಂತೆ! ಬದುಕೇ ಹಾಗೆ ಅಂದು ಸೋತಿದ್ದ ಸುದೀಪ್ ಇವತ್ತು ದೊಡ್ಡ ಸ್ಟಾರ್. ಬಹುಭಾಷಾ ನಟ! ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಸುದೀಪ್ ನಿರೂಪಣೆಯಂತು ಸೂಪರ್! ಅವರ ಮಾತುಗಳನ್ನು ಕೇಳಲೇಂದೇ ಎಷ್ಟೋ ಜನ ಶನಿವಾರ ಮತ್ತು ಭಾನುವಾರ ಕಾಯುತ್ತಿರುತ್ತಾರೆ. ಸುದೀಪ್ ಅಭಿನಯದ ವಿಲನ್ ಚಿತ್ರ ತೆರೆಕಾಣಲು ಸಿದ್ದವಾಗಿದೆ ಹ್ಯಾಟ್ರಿಕ್ ಹಿರೋ ಶಿವಣ್ಣ ಜೊತೆ ಮೊಟ್ಟಮೊದಲ ಬಾರಿಗೆ ಅಭಿನಯಿ
ಸಿರುವ ಚಿತ್ರವಿದು.

ಸುದೀಪ್ ಮತ್ತಷ್ಟು ಬೆಳೆಯಲಿ, ಅವರ ಚಿತ್ರಗಳು ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತೇನೆ.


-ನವೀನ್ ರಾಮನಗರ, ಬದುಕಿಗೊಂದು ಭರವಸೆಯ ಮಾತು!

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!