ಸಿನಿಮಾ

ಗುಲಾಲ್ .ಕಾಂ ಚಿತ್ರ ನಾಳೆ (ನವೆಂಬರ್ 5) ರಾಜ್ಯಾದ್ಯಂತ ಬಿಡುಗಡೆ

ಉತ್ತರ ಕರ್ನಾಟಕದ ಪ್ರತಿಭೆ ಶಿವು ಜಮಖಂಡಿ ರವರ ನಿರ್ದೇಶನದ ಗುಲಾಲ್ .ಕಾಂ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಪ್ರೇಮಿಗಳು ಈ ಚಿತ್ರವನ್ನು ನೋಡಿ

ಸಾರಾಂಶ:
ಕಾಸು ಇದ್ರೆ ಕನಸು ಅನ್ನೋ ಕಾಲದಲ್ಲಿ 6 ಮನಸುಗಳು ಸೇರಿಕೊಂಡು ಸಿನಿಮಾ ಮಾಡೋ ಕನಸನ್ನು ನನಸು ಮಾಡಲಿಕ್ಕೆ ಪಡೋ ಕಷ್ಟಕಾರ್ಪಣ್ಯಗಳು, ಏಳುಬೀಳಿನ ಬಣ್ಣ ತುಂಬಿರೋ ರಂಗೆ gulal.com. ಮಂಡ್ಯಕ್ಕೂ ಸಿನಿಮಾಕ್ಕೂ ಅವಿನಾಭಾವ ಸಂಬಂಧ , ನಮ್ಮ ನಾಯಕ ಮೂಲತಹ ಮಂಡ್ಯದ ಹಳ್ಳಿ ಗೌಡ್ರು ಮಗ, ಗೌಡಂಗೆ ಮಗನ ಮದುವೆ ಚಿಂತೆ ಆದರೆ ನಮ್ಮ ನಾಯಕನಿಗೆ ಸಿನಿಮಾ ಮಾಡೋ ಚಿಂತೆ. ಏನಾದರೂ ಸಾಧಿಸಬೇಕಾದರೆ ಸಾಧನೆ ಮಾಡಬೇಕು ಅನ್ನೋ ಹುಚ್ಚರ ಸಹವಾಸ ಮಾಡಬೇಕಂತೆ ಹಾಗೆ ನಮ್ಮ ನಾಯಕನ ಕನಸಿಗೆ ಐದು ಜನ ಸ್ನೇಹಿತರು ಸಾತ್ ಕೊಡುತ್ತಾರೆ. ಮನೆ ಕಟ್ಟಬಹುದು, ಮದುವೆ ಮಾಡಬಹುದು ಆದರೆ ಸಿನಿಮಾ ಮಾಡೋದು ತುಂಬಾ ಕಷ್ಟ , ಈ ಕಷ್ಟಾನೆ ನಮ್ಮ ನಾಯಕನಿಗೆ ಇಷ್ಟ ಆದ್ದರಿಂದ ಹಠಛಲ ಬಿಡದೆ ,ಕಣ್ಣಿಗೆ ಕಾಣಿಸೋ ದೇವರಿಗೆಲ್ಲಾ ಕೈಮುಗಿದು . ಪ್ರೊಡ್ಯೂಸರ್ ಹುಡುಕೊ ಪಯಣ ಶುರು ಮಾಡ್ತಾರೆ . ಆದರೆ ಏನು ಮಾಡೋದು ಅಂದುಕೊಂಡ ಹಾಗೆ ಏನು ಆಗಲ್ಲ ಚಪ್ಲಿ ಸವೆದರು ಪ್ರೊಡ್ಯೂಸರ್ ಸಿಗಲ್ಲ . ಇದೇ ಸಮಯದಲ್ಲಿ ಎಲ್ಲರಿಗೂ ವೈಯಕ್ತಿಕ ಕೌಟುಂಬಿಕ ತೊಂದರೆ ಅನುಭವಿಸುತ್ತಾರೆ ಇವೆಲ್ಲ ಕಷ್ಟಗಳ ನಡುವೆ ಸಿನಿಮಾ ಮಾಡುವ ಕನಸು ಕೂಡ ಕ್ಷೀಣಿಸುತ್ತದೆ. ಇವರಿಗೆ ತಬಲಾನಾಣಿ ಗುರುಗಳು ಮಾರ್ಗದರ್ಶನ ಮಾಡುತ್ತಿರುತ್ತಾರೆ. ಇದೇ ಸಮಯದಲ್ಲಿ ನಾಯಕನ ಸ್ನೇಹಿತರಲ್ಲಿ ಒಬ್ಬ gulaal.com ನಲ್ಲಿ ಕೆಲಸ ಮಾಡಿದರೆ ಕೈತುಂಬ ಹಣ ಸಿಗುತ್ತದೆ ಅವಾಗ ಸಿನಿಮಾ ಮಾಡಬಹುದು ನಮ್ಮ ಕಷ್ಟವನ್ನು ತಿರಿಸಬಹುದು ಎಂಬ ಐಡಿಯಾ ಕೊಡುತ್ತಾನೆ. ಎಲ್ಲರೂ ಇದಕ್ಕೆ ಒಲ್ಲದ ಮನಸಿನಿಂದ ಒಪ್ಪುತ್ತಾರೆ. ಏನದು ಗುಲಾಲ್.ಕಾಮ್ ಅವರು ಸೇರಿದ್ದು ಸರಿನಾ ತಪ್ಪಾ?? ಎನ್ನುವ ಕಥಾ ತಿರುಳೆ ಈ ಚಿತ್ರ. ಅಡ್ಡದಾರಿ ಅಪಾಯಕಾರಿ ಎನ್ನುವ ಸಂದೇಶವೇ ಈ ಕಥೆಯ ಬೆನ್ನೆಲುಬು.ಹೀಗೆ gulal.com ಗೆ ಲಾಗಿನ್ ಆಗಿ ಲಾಗ್ ಔಟು ಆಗುವುದೇ ನಮ್ಮ ಸಿನಿಮಾದ ಕಥೆಯ ಸಾರಾಂಶ.


ನಿರ್ಮಾಪಕರು : ಡಾ ಗೋಪಾಲಕೃಷ್ಣ ಹವಾಲ್ದಾರ್, ಕಾರ್ಯಕಾರಿ ನಿರ್ಮಾಪಕರು: ಧನಂಜಯ ಎಚ್, ನಿರ್ದೇಶನ: ಶಿವು ಜಮಖಂಡಿ, ಛಾಯಾಗ್ರಹಣ: ಮುಂಜಾನೆ ಮಂಜು, ಸಾಹಸ ನಿರ್ದೇಶನ: ಬಂಡೆ ಚಂದ್ರು, ಸಂಕಲನ: ಲಕ್ಷ್ಮಿ ರಾಜ್ ಶೆಟ್ಟಿ, ವರ್ಣಾಲಂಕಾರ: ರಮಣ
ನೃತ್ಯ: ಹೈಟ್ ಮಂಜು, ಕಲಾವಿದರ ವರ್ಗ: ತಬಲಾ ನಾಣಿ, ಶೋಭರಾಜ್ , ಮೋಹನ್ ಜುನೇಜ,ಬಿಗ್ ಬಾಸ್ ದಿವಾಕರ್, ನೇತ್ರಾ ಗಗನ್ , ಸದಾನಂದ ಕಲಿ, ಮಲ್ಲು ಜಮಖಂಡಿ, ಜೋಕರ್ ಹನುಮಂತ, ಬಿಗ್ ಬಾಸ್ ಸೋನು ಪಾಟೀಲ್, ಸೂರ್ಯ ಮಲ್ಲೇಶಗೌಡ, ಪ್ರಶಾಂತ್ ನಟನಾ,ಶಂಕರ ಅಂಬಿಗೆರ್, ಸಹನಾ ಚಂದ್ರಶೇಖರ್, ಮಜಾ ಟಾಕೀಸ್ ರಘು, ಕಾಮಿಡಿ ಕಿಲಾಡಿ ಮಿಂಚು, ರಾಜೇಶ್ವರಿ, ಪೂಜಾ ಮೈಸೂರು, ಅನಿತಾ ಸೂರ್ಯವಂಶಿ, ಶಿವಾನಂದ ಸಿಂದಗಿ, ಅನಿಲ್ ಪಾಟೀಲ್,ಎಲ್ ಆರ್ ಶೆಟ್ಟಿ, ಕ್ಯಾಬ್ ಶ್ರೀನಿವಾಸ್ ಬೀರೂರು, ಚಿದಂಬರಂ ನೀನಾಸಂ, ಹಳೆ ಬೇವಾರ್ಸಿ, ಶ್ರೀದೇವಿ, ಗುರು ಕೊಪ್ಪ, ಪೃಥ್ವಿರಾಜ್, ಸಂತೋಷ್ ಕೊಪ್ಪ, ಶ್ರೀನಿವಾಸಗೌಡ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!