ಸಿನಿಮಾ ಸ್ಫೂರ್ತಿಯಾನ

ಅರಳುವ ಮುನ್ನವೇ ಬಾಡಿದ ಹೂ ಸಮನ್ವಿ

ವಯಸ್ಸು ಆರು ಪಟ ಪಟನೇ ಮಾತನಾಡುವ ಪುಟ್ಟ ಹುಡುಗಿ, ಇತ್ತಿಚೇಗೆ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದ ಪುಟ್ಟ ಬಾಲ ಪ್ರತಿಭೆ ಸಮನ್ವಿ.  ಅಮ್ಮ ಅಮೃತ ನಾಯ್ಡು ಜೊತೆ ಸ್ಕೂಟಿಯಲ್ಲಿ ಹೊಗಬೇಕಾದರೆ ಹಿಂದೆಯಿಂದ ಯಮಸ್ವರೂಪಿಯಾಗಿ ಬಂದ ಟಿಪ್ಪರ್ ಲಾರಿ ತಗುಲಿ ವಿಧಿವಶಳಾದಳು.

ಹೇ ವಿಧಿಯೇ ನಿನ್ನ ಕ್ರೂರ ಕಣ್ಣು ಈ ಪುಟ್ಟ ಹುಡುಗಿ ಮೇಲೆ ಏಕೆ ಬಿತ್ತು! ಇನ್ನೂ ಪ್ರಪಂಚವನ್ನೆ ನೋಡದ ಪುಟ್ಟ ಕಂದಮ್ಮನನ್ನು ಏಕೆ ಕರೆದುಕೊಂಡೆ, ನಿಜಕ್ಕೂ ದೇವರು ಇದ್ದಾನಾ?! ಈ ಮಾತುಗಳನ್ನು ಈ ಸಾವಿನ ಸುದ್ದಿ ತಿಳಿದ ಪ್ರತಿಯೊಬ್ಬರೂ ಹೇಳಿಕೊಂಡಿರುತ್ತಾರೆ. ಮನುಷ್ಯ ಹುಟ್ಟಿದ ಮೇಲೆ ಸಾವು ನಿಶ್ಚಿತ! ಇದು ಸತ್ಯ. ಆದರೆ ಈ ರೀತಿ ಅಕಾಲಿಕ ಸಾವು ಎಂತವರನ್ನು ದಿಕ್ಕು ತೊಚದ ಹಾಗೆ ಮಾಡಿಬಿಡುತ್ತೇ, ಬದುಕಿನ ಬಗ್ಗೆ ಜಿಗುಪ್ಸೆ ಹುಟ್ಟಿಸುವಷ್ಟು ನೋವು ಕೊಟ್ಟುಬಿಡುತ್ತೆ ಅಲ್ವಾ!? ಸಮನ್ವಿ ಅಪ್ಪ ಅಮ್ಮನಿಗೆ ಆ ಭಗವಂತ(ಇದ್ದರೆ) ನೋವನ್ನಾದರೂ ಭರಿಸುವ ಶಕ್ತಿ ಕರುಣಿಸಲಿ.

ಈ ಸಾವಿಗೆ ಯಾರು ಕಾರಣ!? ವಿಧಿಯ, ರಸ್ತೆಯ, ಟಿಪ್ಪರ್ ಚಾಲಕನ ಯಾರೇ ಇರಬಹುದು ಆದರೆ ಮಗು ಸಮನ್ವಿಯನ್ನು ಮತ್ತೆ ನೋಡಲಾರೆವು! ಆದರೆ ಮುಂದೆ ಈ ರೀತಿ ಅಪಘಾತಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಎಲ್ಲರ ಕೂಗು. ಅಪಘಾತ ಆಕಸ್ಮಿಕ ನಿಜ! ಆದರೆ ನಿರ್ಲಕ್ಷತನದ ಚಾಲನೆಯೇ ಅಪಘಾತಕ್ಕೆ ಕಾರಣವಾದರೇ ಇದಕ್ಕೆ ಕ್ಷಮೇ ಎಂಬುದೇ ಇಲ್ಲ. ಏನು ಮಾಡದ ತಪ್ಪಿಗೇ ಅಮಾಯಕ ಮಗು ಬಲಿ ಆಗುವುದು ಎಂತಹ ನ್ಯಾಯ ಅಲ್ಲವೇ. ಇನ್ನಾದರೂ ವಾಹನಸಾವರರು ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಪೋಲಿಸ್ ವ್ಯವಸ್ಥೆ, ಆರ್.ಟಿ.ಓ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಅಜಾಗರೂಕತೆಯೆ ಚಾಲಕರು ವಾಹನ ಓಡಿಸುವುದನ್ನು ತಡೆಯುವಂತಾಗಲಿ. ನಿಮ್ಮ ನಿರ್ಲಕ್ಷತನ ಮತ್ತೊಬ್ಬರ ಬದುಕಿಗೆ ಶಾಶ್ವತ ಊನವಾಗಬಾರದು. ಸಮನ್ವಿ ಮತ್ತೊಮ್ಮೆ ಹುಟ್ಟಿ ಬಾ…..
-ನವೀನ್ ರಾಮನಗರ

 

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!