ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಬಿಜೆಪಿ ವಕ್ತಾರೆ ನಟಿ ಶೃತಿ ನೇಮಕವಾಗಿದ್ದಾರೆ. ಇಂದು ಪೋಷಕರ ಆಶಿರ್ವಾದ ಪಡೆದು ಅಧಿಕಾರ ಸ್ವೀಕಾರ ಮಾಡಿದ್ದಾರೆ.ನಟಿ ಶೃತಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಹೆಸರು ಮಾಡಿದ್ದ ಜನಪ್ರಿಯ ನಟಿ. ಶೃತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಳುಮುಂಜಿ ಪಾತ್ರಗಳ ಮುಖೇನ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು.
ಕಂಡಕ್ಟರ್ ಕೆಲಸ ಮಾಡುತ್ತಾ ಐ ಎ ಎಸ್ ಮುಖ್ಯ ಪರೀಕ್ಷೆ ಪಾಸು ಮಾಡಿದ ಮಂಡ್ಯದ ರಿಯಲ್ ಹೀರೊ ಮಧು
ರಮೇಶ್ ನಿರ್ದೇಶನದ ರಾಮ ಶಾಮ ಭಾಮ ಚಿತ್ರದಲ್ಲಿ ಕಮಲ್ ಹಾಸನ್ ಹೆಂಡತಿಯಾಗಿ ಲವಲವಿಕೆಯಿಂದ ಅಭಿನಯಿಸಿ ನಗುಮುಖದ ಶೃತಿಯಾಗಿ ಚಿತ್ರಪ್ರೇಮಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಬಿಜೆಪಿ ವಕ್ತಾರೆಯಾಗಿದ್ದ ಶೃತಿಗೆ ಬಿಜೆಪಿ ಸರ್ಕಾರ ಪ್ರವಾಸೋದ್ಯಮ ಅಬಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಜವಾಬ್ದಾರಿ ನೀಡಿದೆ.ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿಯನ್ನು ತಮ್ಮ ಅವಧಿಯಲ್ಲಿ ಉತ್ತಮವಾಗಿ ಮತ್ತಷ್ಟು ಆಕರ್ಷಿತವಾಗಿ ಮಾಡುತ್ತಾರೆಂಬ ನಿರೀಕ್ಷೆ ಎಲ್ಲರಲ್ಲಿದೆ. ಶುಭವಾಗಲಿ ಶೃತಿ ಮೇಡಂ.