ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆಯಾದ ಸುಧಾ ಮೂರ್ತಿಯವರು ಇತ್ತೀಚೇಗೆ ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಬಂದು sಸಾಮಾನ್ಯ ಜನರಂತೆ ಬ್ಯಾಗ್ ಹಿಡಿದು ಅಡ್ಡಾಡಿ ತರಕಾರಿಯನ್ನು ತೆಗೆದುಕೊಂಡಿದ್ದಾರೆ ಎನ್ನುವ ವಿಚಾರ ಇದೀಗ ತುಂಬಾನೇ ವೈರಲ್ ಆಗಿದೆ.
ಸುಧಾ ಮೂರ್ತಿ ಯವರ ಮನೆದೇವರು ಜಮಖಂಡಿ ತಾಲೂಕಿನ ಶೂರ್ಪಾಲಯ ನಗರದ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರಂತೆ ಶನಿವಾರ ಸಾಯಂಕಾಲ ಜಮಖಂಡಿಗೆ ಬಂದು ಅಲ್ಲಿಯ ಕುಂಚನೂರ್ ರಸ್ತೆಯ ಎಚ್ಚಿ ಕಾಲೋನಿ ದಾನಮ್ಮನ ಗುಡಿ ಬಳಿ ಸೋದರಳಿಯನ ತಮ್ಮ ಕುಲಕರ್ಣಿ ಅವರ ಮನೆಯಲ್ಲಿ ಉಳಿದುಕೊಂಡು ಮರುದಿನ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪೂಜೆ ಮಾಡಿಸಿದ ನಂತರ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಜಾತ್ರೆಯಲ್ಲಿ ಅಡ್ಡಾಡಿದ ನಂತರ ಬೆಂಗಳೂರಿಗೆ ಹೋಗಿದ್ದಾರೆ.
ನಂಜನಗೂಡಿನ ಹಲ್ಲುಪುಡಿಗೆ 106 ವರ್ಷ.
ಬಂಡಿ ಹತ್ತಿರದ ಸಾವಳಿ ಸುಧಾ ಮೂರ್ತಿಯವರ ತಾಯಿ ಮನೆ ಕೃಷ್ಣ ತೀರದಲ್ಲಿ ಆಟ ಆಡಿ ಬೆಳೆದವರು ಸುಧಾ ಮೂರ್ತಿಯವರಿಗೆ ಬೆಳೆಯುವ ತರಕಾರಿಗಳೆಂದರೆ ತುಂಬ ಇಷ್ಟ. ಬಂದಾಗಲೆಲ್ಲ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಾರೆ ಎಂದು ನಾರಾಯಣ ಕುಲಕರ್ಣಿ ಅವರು ಹೇಳಿದ್ದಾರೆ .ಅವರು ಜಮಖಂಡಿಗೆ ಬಂದಾಗಲೆಲ್ಲ ನಾನೇ ತಂದು ಕೊಡುತ್ತಿದ್ದೆ ಇತ್ತೀಚಿಗಷ್ಟೇ ಕೃಷ್ಣ ನದಿ ಭಾಗದ ಜನರು ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಜನರ ಕಷ್ಟ ನಷ್ಟಗಳನ್ನು ಅರಿಯಲು ಅವರೇ ಬಂದಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಮಾನವೀಯ ಗುಣಗಳಿಂದಲೇ ಅಲ್ವಾ ಸುಧಾಮೂರ್ತಿ ಎಲ್ಲರಿಗೂ ಇಷ್ಟವಾಗೋದು.