ಇನ್ನು ಮುಂದೆ ವಾಟ್ಸ್ ಆಫ್‍ನಲ್ಲಿ ಒಮ್ಮೆ ವೀಕ್ಷಿಸಬಹುದಾದ ಸಂದೇಶಗಳ ಸ್ಕೀನ್ ಶಾಟ್ ತೆಗೆಯುವುದನ್ನು ನಿರ್ಬಂಧಿಸಲಾಗುತ್ತದೆ. ಸ್ವೀಕೃತಿದಾರರು ಸಂದೇಶ ವೀಕ್ಷಿಸಿದ ಕೂಡಲೇ ಅದು ತಾನಾಗಿಯೇ ಅಳಿಸಿಹೋಗಲಿದೆ. ಬಳಕೆದಾರರ ಗೋಪ್ಯತೆ ಗಮನದಲ್ಲಿಟ್ಟುಕೊಂಡು ಇಂತಹ ಹಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ಈ ಶಿಷ್ಟ್ಯಗಳನ್ನು ಶೀಘ್ರವೇ ಪರಿಚಯಿಸಲಾಗುತ್ತದೆ.’ ಎಂದು ವಾಟ್ಟ್ ಆಫ್ ಮಾಲೀಕತ್ವ ಹೊಂದಿರುವ ಮೆಟಾಪ್ಲಾಟ್‍ಫಾರ್ಮ ತಿಳಿಸಿದೆ.
ಇನ್ನು ಮುಂದೆ ಗುಂಪಿನಲ್ಲಿರುವ ಇತರರಿಗೆ ತಿಳಿಯದಂತೆ ರಹಸ್ಯವಾಗಿ ಗುಂಪು ಚಾಟ್‍ಗಳಿಂದ ನಿರ್ಗಮನ ಹೊಂದಬಹುದು. ತಮಗೆ ಬೇಕಾದವರಿಗಷ್ಟೇ ತಾವು ಅನ್‍ಲೈನಲ್ಲಿ ಇರುವುದು ಗೊತ್ತಾಗುವಂತೆ ಸಂಯೋಜನೆ (ಸೆಟ್ಟಿಂಗ್) ಮಾಡಿಕೊಳ್ಳಬಹುದು. ಒಮ್ಮೆ ನೋಡುವ ಸಂದೇಶ (ವೀವ್ ಒನ್ಸ್ ಮೆಸೇಜಸ್ ) ಎಂಬ ವೈಶಿಷ್ಟ್ಯವನ್ನೂ ಪರಿಚಯಿಸಲಾಗುತ್ತಿದೆ. ಸ್ವೀಕೃತಿದಾರರು ಓದಿದ ಕೂಡಲೇ ಆ ಸಂದೇಶ ಅಳಿಸಿಹೋಗಲಿದೆ. ಎಂದು ಮೆಟಾ ಕಂಪನಿಯ ಸಿಇಒ ಮಾರ್ಕ್‍ಜುಕರ್‍ಬರ್ಗ್ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
(Credit; NP)