ಚಿನ್ನಕ್ಕೇ ಹೆಸರಾದ ಕೆಜಿಎಫ್ ಸಿನಿಮಾ ಮತ್ತು ಚಿನ್ನದಂಥ ಗುಣದ ಪುನೀತ್ ರಾಜ್‍ಕುಮಾರ್ ಈ ಬಾರಿ ಅಕ್ಷಯ ತೃತೀಯಕ್ಕೆ ಬಂಗಾರವಾಗಿ ಮನೆ ಮನೆಗೆ ಬರಲಿದ್ದಾರೆ.ಕೊರೋನಾ ಪರಿಣಾಮದಿಂದ ಕಳೆದ ಎರಡು ವರ್ಷಗಳ ಅಕ್ಷಯ ತೃತೀಯ ಹಬ್ಬದ ವೇಳೆ ವ್ಯಾಪಾರಕ್ಕೆ ಕವಿದಿದ್ದ ಮಂಕು, ಈ ಬಾರಿ ಕರಗುವ ನಿರೀಕ್ಷೆಯಲ್ಲಿರುವ ಚಿನ್ನಾಭರಣ ವ್ಯಾಪಾರಿಗಳು ಕೆಜಿಎಫ್ ಸಿನಿಮಾ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಚಿನ್ನ , ಬೆಳ್ಳಿ, ವಜ್ರ ಖರೀದಿಗೆ ಪ್ರಶಸ್ತವಾಗಿರುವುದೂ ವ್ಯಾಪಾರಿಗಳಲ್ಲಿ ಆಶಾದಾಯಕ ಭಾವ ಉಂಟುಮಾಡಿದೆ.
ಇತ್ತೀಚೆಗೆ ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡಿರುವ ಕೆಜಿಎಫ್ ಸಿನಿಮಾಕ್ಕೆ ಸಂಬಂಧಿಸಿದ ಚಿನ್ನ, ಮತ್ತು ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡಲು ಆಭರಣ ಅಂಗಡಿಗಳ ಮಾಲೀಕರು ಸಜ್ಜಾಗಿದ್ದಾರೆ.ಈ ಪೈಕಿ ಸಾಯಿ ಗೋಲ್ಡ ಪ್ಯಾಲೆಸ್ 10 ರಿಂದ 20 ಗ್ರಾಂ ತೂಕದ ಪುನೀತ್ ಬೆಳ್ಳಿ ನಾಣ್ಯಗಳು, 24 ಕ್ಯಾರೆಟ್ ಚಿನ್ನದ ಲೇಪನವಿರುವ ಪುನೀತ್ ಪೋಟೋ ಫ್ರೇಂ ರೂಪಿಸಿ ಮಾರಾಟಕ್ಕಿಟ್ಟಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನಾಣ್ಯ, ಫೋಟೋ ಫ್ರೇಂ ಖರೀದಿಗೆ ಉತ್ಸಾಹ ತೋರಿಸುತ್ತಾರೆ ಎಂದು ಮಳಿಗೆ ಮಾಲೀಕ ಟಿ,ಎ,ಶರವಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಮತ್ತೋಂದೆಡೆ ಕೆಜಿಎಫ್ ಸಿನಿಮಾ ಟ್ರೆಂಡ್ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ನಾಯಕ ನಟ ಯಶ್ ಅವರ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನೂ ಹೊರತರುವುದಾಗಿ ಹಲವು ಚಿನ್ನಾಭರಣ ಅಂಗಡಿಗಳ ಮಾಲಿಕರು ತಿಳಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ, ಬಿ.ರಾಮಾಚಾರಿ ತಿಳಿಸಿದ್ದಾರೆ,
ಶೇ.25ರಷ್ಟು ಹಣ ಪಾವತಿಸಿ ಆಭರಣ ಕಾಯ್ದಿರಿಸಿ. ಇನ್ನುಳಿದ ಹಣವನ್ನು ಅಕ್ಷಯ ತೃತೀಯದಂದು ನೀಡಬಹುದು ಎಂಬ ವಿಶೇಷ ಆಫರ್ ಅನ್ನು ಭೀಮಾ ಜ್ಯವೆಲ್ಲರಿ ನೀಡಿದೆ. ಜೊತೆಗೆ ಅಂದು ಬೇರೆ ವಿಶೇಷ ಕೊಡುಗೆಗಳನ್ನು ನೀಡಿದರೆ, ಅದೂ ಅನ್ವಯವಾಗುತ್ತದೆ ಎಂದು ಡಿಕೆನ್ಸನ್ ರಸ್ತೆಯ ಭೀಮಾ ಜ್ಯೂವೆಲರ್ಸ್‍ನ ಮಾರಾಟ ವಿಭಾಗದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.