ಸುದ್ದಿ

“ನಂದಿನಿ ಸಿಹಿ ಉತ್ಸವ” ದಿನಾಂಕ 24.12.2019 ರಿಂದ 02.01.2020 ರವರೆಗೆ

ನಂದಿನಿ ಗ್ರಾಹಕರು ಉತ್ತಮ ಗುಣಮಟ್ಟದ ರುಚಿಕರವಾದ “ನಂದಿನಿ ಸಿಹಿ ಉತ್ಪನ್ನ”ಗಳನ್ನು ಸವಿಯುವಂತೆ ಮಾಡಲು ಕೆ.ಎಮ್.ಎಫ್‍ನ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ಸಹಯೋಗದೊಂದಿಗೆ ವರ್ಷದಲ್ಲಿ ಕನಿಷ್ಠ ಎರಡು ಬಾರಿ ರಾಜ್ಯದಾದ್ಯಂತ ಗ್ರಾಹಕರಿಗೆ ನೇರವಾಗಿ ಸಿಹಿ ಉತ್ಪನ್ನಗಳ ಮಾರಾಟದ ದರದ ಮೇಲೆ ಶೇ.10 ರಷ್ಟು ರಿಯಾಯಿತಿ ನೀಡುವ ಮೂಲಕ ವಿಶೇಷವಾಗಿ “ನಂದಿನಿ ಸಿಹಿ ಉತ್ಸವ” ಕಾರ್ಯಕ್ರಮವನ್ನು ಆಚರಿಸಲು ಉದ್ದೇಶಿಸಿದ್ದು, ಅದರಂತೆ ಕಳೆದ 2 ವರ್ಷಗಳಿಂದ ಕಾರ್ಯಗತಗೊಳಿಸಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.

ಪ್ರಸ್ತುತ ಕ್ರಿಸ್‍ಮಸ್ ಮತ್ತು ಹೊಸ ವರ್ಷದಿನಾಚರಣೆ ಸಂಧರ್ಭದಲ್ಲಿ ಗ್ರಾಹಕರಿಗೆ ಮತ್ತೊಮ್ಮೆ ದಿನಾಂಕ 24.12.2019 ರಿಂದ 02.01.2020 ರವರೆಗೆ ಹಮ್ಮಿಕೊಂಡಿದ್ದು 10 ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ. ಈ ಸಮಯದಲ್ಲಿ ರಾಜ್ಯದಾದ್ಯಂತ ನಂದಿನಿ ಪಾರ್ಲರ್‍ಗಳು, ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್‍ಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳಾದ ಮೈಸೂರ್ ಪಾಕ್, ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್ ಬರ್ಪಿ, ಕ್ಯಾಶು ಬರ್ಫಿ, ಡ್ರೈಪ್ರೂಟ್ರ್ಸ್ ಬರ್ಫಿ, ಕೋಕೋನಟ್ ಬರ್ಫಿ, ಚಾಕೋಲೇಟ್ ಬರ್ಫಿ, ಕುಂದ, ಜಾಮೂನ್, ರಸಗುಲ್ಲಾ ಜೊತೆಗೆ ನೂತನ ಸಿಹಿ ಉತ್ಪನ್ನಗಳಾದ ಸಿರಿ ಧಾನ್ಯ ಲಡ್ಡು, ಸಿರಿ ಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡು ಗಳ ಗರಿಷ್ಟ ಮಾರಾಟ ದರ (ಎಂ.ಆರ್.ಪಿ) ಮೇಲೆ ಶೇ. 10 ರಷ್ಟು ರಿಯಾಯಿತಿಯನ್ನು ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತದೆ.

 

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ”ನಂದಿನಿ ಪಾರ್ಲರ್” ನಲ್ಲಿ ಕಹಾಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತರಾದ ಬಿ.ಸಿ.ಸತೀಶ್‍ರವರು “ನಂದಿನಿ ಸಿಹಿ ಉತ್ಸವ” ಕಾರ್ಯಕ್ರಮಕ್ಕೆ ಸಂಕೇತಿಕವಾಗಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಗೋಧಿ ಹಿಟ್ಟಿನಿಂದ ಸಿದ್ದಪಡಿಸಲಾದ ನಂದಿನಿ ಚಕ್ಕಿ ಲಾಡು, ಮೊಜ್ಹ್ಹರೆಲ್ಲಾ ಚೀಸ್, ಚೀಸ್ ಸ್ಲೈಸ್, ಪ್ರೋಸೆಸ್ಡ್ ಚೀಸ್‍ಗಳನ್ನು ಬಿಡುಗಡೆ ಮಾಡಿದರು ಜೊತೆಗೆ ಮುಂಬರುವ ಬೇಸಿಗೆ ಕಾಲದೊಳಗೆ ನಂದಿನಿ ಹಲಸಿನ ಹಣ್ಣು, ಸೀತಾಫಲ, ಮಾವಿನ ಇತ್ಯಾದಿ ನ್ಯಾಚುರಲ್ ಐಸ್‍ಕ್ರೀಂಗಳು, ವಿವಿಧ ಸ್ವಾದದ ಗ್ರೀಕ್ ಯೋರ್ಗಟ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರು (ಮಾರುಕಟ್ಟೆ) ಯವರಾದ ಶ್ರೀ. ಎಂ.ಟಿ. ಕುಲಕರ್ಣಿಯವರು, ಅಪರ ನಿರ್ದೇಶಕರಾದ ಶ್ರೀ. ರಘುನಂದನ್ ರವರು, ಮಂಡ್ಯ ಹಾಲು ಒಕ್ಕೂಟದ ಕಾರ್ಯನಿವಾಹಕ ನಿರ್ದೇಶಕರಾದ ಶ್ರೀ. ಮಹೇಶ್ ರವರು, ನಂದಿನಿ ಪ್ರಾಡಕ್ಸ್ ಪ್ಲಾಂಟ್‍ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ. ಕೃಷ್ಣರೆಡ್ಡಿಯವರು, ಕಹಾಮದ ಹಿರಿಯ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.ದಿನಾಂಕ 24.12.2019 ರಿಂದ 02.01.2020 ರವರೆಗೆ ಎಲ್ಲಾ ನಂದಿನಿ ಪಾರ್ಲರ್‍ಗಳು, ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್‍ಗಳಲ್ಲಿ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಬಹುದಾಗಿದೆ.

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!