ಸಾಧಕರು

ಕಂಡಕ್ಟರ್ ಕೆಲಸ ಮಾಡುತ್ತಾ ಐ ಎ ಎಸ್ ಮುಖ್ಯ ಪರೀಕ್ಷೆ ಪಾಸು ಮಾಡಿದ ಮಂಡ್ಯದ ರಿಯಲ್ ಹೀರೊ ಮಧು

ಐ ಎ ಎಸ್ ಪರೀಕ್ಷೆ ಪಾಸು ಮಾಡಬೇಕೆಂಬುದು ಸಾಕಷ್ಟು ತರುಣ ತರುಣಿಯರ ಕನಸು. ಆದ್ರೆ ಅದು ಅಷ್ಟು ಸುಲಭವಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಕಷ್ಟಪಟ್ಟು ಇಷ್ಟದಿಂದ ಅಧ್ಯಯನ ಮಾಡಬೇಕು. ಮಾರ್ಗದರ್ಶನ ಬೇಕು ಜೊತೆಗೆ ಲಕ್ಕು ಕೂಡ ಇರಬೇಕು. ಆಗಲೇ ಐ ಎ ಎಸ್ ಪರೀಕ್ಷೆ ಪಾಸು ಮಾಡಲು ಸಾಧ್ಯ.

ಕಿತ್ತಳೆ ಹಣ್ಣು ಮಾರುವ ಸಾಮಾನ್ಯನಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಏಕೆ ಬಂತು ಗೊತ್ತಾ?

ಮಂಡ್ಯ ಮೂಲದ ಮಧು ಎಂಬ ಯುವಕ ತನ್ನ ವೃತ್ತಿ ಕಂಡಕ್ಟರ್ ಕೆಲಸ ಮಾಡುತ್ತಾ ಉಳಿದ ಸಮಯದಲ್ಲಿ ಓದಿ ಐ ಎ ಎಸ್ ಮುಖ್ಯ ಪರೀಕ್ಷೆ ಪಾಸು ಮಾಡಿದ್ದಾರೆ. ಮಾರ್ಚ್ ನಲ್ಲಿ ಸಂದರ್ಶನವನ್ನು ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪಟ್ಟಿಯಲ್ಲಿ ತಮ್ಮ ರಿಜಿಸ್ಟರ್‌ ನಂಬರ್ ನೋಡಿದಾಗ ಮಧು ರವರಿಗೆ ಎಲ್ಲಿಲ್ಲದ ಸಂತೋಷ. ಅವರ ಖುಷಿಗೆ ಎಲ್ಲೆಯೇ ಇರಲಿಲ್ಲ. ಆದರೆ ಪ್ರತಿ ಐಎಎಸ್ ಆಕಾಂಕ್ಷಿಗಳಿಗೆ ಇದೊಂದು ದೊಡ್ಡ ವಿಷಯವೇನಲ್ಲ. ಕಾರಣ ಸಂದರ್ಶನ ಹಂತ ಇನ್ನೂ ಬಾಕಿ ಇರುತ್ತದೆ.

ನಂಜನಗೂಡಿನ ಹಲ್ಲುಪುಡಿಗೆ 106 ವರ್ಷ.

ದಿನನಿತ್ಯ 8 ಗಂಟೆ ಕಂಡಕ್ಟರ್ ಕೆಲಸ ಮಾಡುತ್ತ, ಕೇವಲ 5 ಗಂಟೆ ಓದುವ ಮೂಲಕ ಯುಪಿಎಸ್‌ಸಿ ನಾಗರೀಕ ಸೇವಾ ಪರೀಕ್ಷೆಯ ಮುಖ್ಯ ಪರೀಕ್ಷೆಯನ್ನು ಪಾಸ್‌ ಮಾಡಿರುವುದು ನಿಜಕ್ಕೂ ಅತ್ಯಂತ ಪ್ರಶಂಸನೀಯ ವಿಷಯ.

ಮಧುಗೆ ಐ ಎ ಎಸ್ ಸಂದರ್ಶನಕ್ಕೆ ಆಲ್ ದ ಬೆಸ್ಟ್ ಹೇಳೋಣ … ಶುಭವಾಗಲಿ ಮಧು

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!