ಸಿನಿಮಾ

ಕಲಿಯುಗ ಕರ್ಣ ಅಂಬರೀಶ್ ಹುಟ್ಟುಹಬ್ಬಕ್ಕೆ ‘ಬ್ಯಾಡ್ ಮ್ಯಾನರ್ಸ್’ ಅಭಿಷೇಕ್ ಕೊಟ್ಟ ಉಡುಗೊರೆ!!!?

ಕನ್ನಡ ಚಿತ್ರರಂಗದ ಮೇರು ನಟ ಕಲಿಯುಗ ಕರ್ಣ ಅಂಬರೀಶ್ ನಾಗರಹಾವು ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿ ಲಕ್ಷಾಂತರ ಜನರ ಹೃದಯದಲ್ಲಿ ಕಲಿಯುಗ ಕರ್ಣನಾಗಿ ಕೊಡುಗೈ ದಾನಿಯಾಗಿ ಕನ್ನಡ ಚಿತ್ರರಂಗದ ಭೀಷ್ಮನಂತೆ ಬಾಳಿ ಇಹಲೋಕ ತ್ಯಜಿಸಿದ್ದಾರೆ.

ದಿ. ಎಂ.ಎಚ್. ಅಂಬರೀಶ್‍ರವರ ಜನುಮದಿನ ಇಂದು. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರು ಕನ್ನಡ ಚಿತ್ರಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ಇದ್ದಾರೆ.

ಅಪ್ಪನ ಜನುಮದಿನಕ್ಕೆ ಮಗ ಯಂಗ್ ರೇಬಲ್ ಸ್ಟಾರ್ ಅಭಿಷೇಕ್‍ಅಂಬರೀಶ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದ ಮೊದಲ ಅಧಿಕೃತ ಫಸ್ಟ್‍ಲುಕ್ ವಿಡಿಯೋ ಇಂದು ಕನ್ನಡ ಪಿಚ್ಚರ್ಸ್ ಯೂ ಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಅಭಿಷೇಕ್ ಅಪ್ಪನಿಗೆ ಪ್ರೀತಿಯ ಉಡುಗಯೊರೆ ನೀಡಿದ್ದಾರೆ.

ಅಂಬರೀಶ್ ಪತ್ನಿ ಸಂಸದೆ ಶ್ರೀಮತಿ ಸುಮಲತಾ ಅಂಬರೀಶ್ ಟ್ವೀಟ್ ಮಾಡುವ ಮೂಲಕ ಮಗನನ್ನು ಹರಸಿ ಆಶಿರ್ವದಿಸಿ ಎಂದೂ ಕೇಳಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಯಂಗ್ ರೇಬಲ್ ಸ್ಟಾರ್ ಅಂಬರೀಶ್ ಹೇಗೆ ನಟಿಸಿದ್ದಾರೆ ಎಂಬ ಕೂತುಹಲ ಎಲ್ಲರಿಗೂ ಇದೆ. ಅಂಬರೀಶ್ ಪುತ್ರ ಅಭಿಷೇಕ್ ಕನ್ನಡ ಚಿತ್ರರಂಗದಲ್ಲಿ ಬೆಳೆಯಲಿ ಎಂಬುದು ನಮ್ಮ ಆಶಯ ಶುಭವಾಗಲಿ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!