ಸಿನಿಮಾ

ಎಲ್ಲರೂ ಇಷ್ಟಪಡುವ ನಟ ರಮೇಶ್ ಅರವಿಂದ್! ಹುಟ್ಟು ಹಬ್ಬದ ಸಂಭ್ರಮದಲ್ಲಿ.

ನಟ ರಮೇಶ್ ಅರವಿಂದ್ ಅಂದ್ರೆ ಚಿತ್ರಪ್ರೇಮಿಗಳಿಗೆ ಅಚ್ಚು ಮೆಚ್ಚು ಸದಾ ಲವಲವಿಕೆಯಿಂದ ನಗುಮುಖದಿಂದ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವ ರಮೇಶ್ ಅರವಿಂದ್ ಕನ್ನಡದ ಚಿತ್ರಗಳಲ್ಲಷ್ಟೇ ಅಲ್ಲದೇ ಇತರೇ ಭಾಷೆಯ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೆಪ್ಟಂಬರ್ 10 ಅವರ ಹುಟ್ಟಿದ ದಿನ ಈ ನೆಪದಲ್ಲಿ ಒಂದಿಷ್ಟು ರಮೇಶ್ ಅರವಿಂದ್ ಬಗ್ಗೆ ತಿಳಿದುಕೊಳ್ಳೊಣ.


ಇಂಜಿನಿಯರಿಂಗ್ ಪದವಿ ಓದಿಕೊಂಡು ಬಣ್ಣದ ಬದುಕಿಗೆ ಬಂದ ರಮೇಶ್ ಅರವಿಂದ್ ರವರ ಮೊದಲ ಚಿತ್ರ ಸುಂದರ ಸ್ವಪ್ನಗಳು ಕೆ. ಬಾಲಚಂದರ್ ರವರ ಗರಡಿಯಲ್ಲಿ ಪಳಗಿದ ರಮೇಶ್ ಅರವಿಂದ್ ತಮಗೆ ಬಂದ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹಂತ ಹಂತ ವಾಗಿ ಚಿತ್ರರಂಗದಲ್ಲಿ ನೆಲಯೂರಿದರು.

80ರ ದಶಕದಿಂದ ಇಲ್ಲಿಯವರೆಗೂ ಚಿತ್ರರಂಗದಲ್ಲಿ ಮಾರುಕಟ್ಟೆಯನ್ನು ಉಳಿಸಿಕೊಂಡು ಚಿತ್ರಪ್ರೇಮಿಗಳಿಗೆ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ರಮೇಶ್ ಅರವಿಂದ್ ಟಿವಿ ಶೋ ವಿಕೇಂಡ್ ವಿತ್ ರಮೇಶ್ ಮೂಲಕ ಕಿರುತೆರೆಯಲ್ಲಿ ಮಿಂಚಿದರು. ಅವರ ಶೋ ನೋಡಲು ಪ್ರತಿಯೊಬ್ಬರು ಕಾತುರದಿಂದ ಕಾಯುತ್ತಿದ್ದರು. ಅವರ ನಿರೂಪಣೆಯ ಶೈಲಿಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ.

ಪತ್ನಿ ಅರ್ಚನಾ ಮಗಳು ನಿಹಾರಿಕಾ ಮಗ ಅರ್ಜುನ್ ಜೊತೆ ಸುಖ ಸಂಸಾರ ಮಾಡುತ್ತಿರುವ ರಮೇಶ್ ಅರವಿಂದ್ ಸ್ಪೂರ್ತಿದಾಯಕ ಮಾತುಗಳಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಇಂದು ಇವರ 100 ಚಿತ್ರದ ಆಡಿಯೋ ಡಿ ಬಿಟ್ ಯೂ ಟಯೂಬ್‍ನಲ್ಲಿ ಬಿಡುಗಡೆಯಾಗಿದ್ದು, ಹುಟ್ಟು ಹಬ್ಬಕ್ಕೆ ಭರ್ಜರಿ ಗೀಫ್ಟ್ ನೀಡಿದೆ ಚಿತ್ರತಂಡ.

ರಮೇಶ್ ಅರವಿಂದ್ ನೂರ್ಕಾಲ ನಗು ನಗುತಾ ಬಾಳಿ, ಇನ್ನಷ್ಟು ಸದಭಿರುಚಿಯ ಚಿತ್ರಗಳನ್ನು ಚಿತ್ರಪ್ರೇಮಿಗಳಿಗೆ ನೀಡಲಿ ಎಂದೂ ಹಾರೈಸೋಣ.

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!