ಸಿನಿಮಾ

ಮಾಲ್ಗುಡಿ ಡೇಸ್ ಮತ್ತೊಮ್ಮೆ ಕಿರುತೆರೆಯಲ್ಲಿ. ಕುಟುಂಬ ಸಮೇತ ನೋಡಿ.

ಖ್ಯಾತ ಕಾದಂಬರಿಕಾರ ಲೇಖಕ ಆರ್.ಕೆ. ನಾರಾಯಣ್ ರವರ ಮಾಲ್ಗುಡಿ ಡೇಸ್ ಕಥೆಗಳನ್ನು ಪುಟ್ಟ ತೆರೆಯ ಮೇಲೆ ತಂದಿದ್ದು. ದಿ. ಶಂಕರ್ ನಾಗ್. ದುರಂತವೆಂದರೆ ಈ ಧಾರವಾಹಿ ಎಲ್ಲಾ ಸಂಚಿಕೆ ಮುಗಿಯುವ ಮುನ್ನವೇ ಶಂಕರ್ ನಾಗ್ ವಿಧಿವಶರಾದ್ರು. ಕೆಲವು ಸಂಚಿಕೆಗಳನ್ನು ಕವಿತಾ ಲಂಕೆಶ್ ನಿರ್ದೇಶನ ಮಾಡಿದ್ದಾರೆ.

ಮಾಲ್ಗುಡಿ ಎಂಬು ಆರ್.ಕೆ. ನಾರಾಯಣ್ ರವರ ಕಲ್ಪನೆಯ ಊರು! ಶಂಕರ್‍ನಾಗ್ ಆ ಮಾಲ್ಗುಡಿಯನ್ನು ಆಗುಂಬೆಯಂಬ ಹಸಿರು ಮಡಿಲಿನಲ್ಲಿ ಸೃಷ್ಟಿಸಿದ್ರು. ಮಾಲ್ಗುಡಿ ಡೇಸ್ ಧಾರವಾಹಿ ಡಿಡಿ ನ್ಯಾಷನಲ್ ನಲ್ಲಿ ಪ್ರಸಾರವಾಗಬೇಕಾದರೆ ಕಾದು ಕುಳಿತು ಆ ಧಾರವಾಹಿಯನ್ನು ನೋಡುತ್ತಿದ್ದರು. ಅಷ್ಟು ಸೋಗಸಾಗಿ ಮೂಡಿಬಂದಿತ್ತು ಮಾಲ್ಗುಡಿ ಡೇಸ್.

ಶಂಕರ್ ನಾಗ್ ಅಂದ್ರೆ ಹಾಗೆನೇ ಅಲ್ವಾ ಅವರು ಏನೇ ಕೆಲಸ ಮಾಡಿದ್ರು ಪ್ರೀತಿಯಿಂದ ಅತ್ಯಂತ ಶ್ರದ್ದೆಯಿಂದ ಮಾಡ್ತಿದ್ರು. ಮಾಲ್ಗುಡಿ ಡೇಸ್ ಧಾರವಾಹಿಯನ್ನು ಅತ್ಯಂತ ಶ್ರದ್ದೆಯಿಂದ ಪ್ರೀತಿಯಿಂದ ನಿರ್ದೇಶನ ಮಾಡಿದ್ರು ಶಂಕರನಾಗ್. ಈ ಧಾರವಾಹಿಯ ಪ್ರಮುಖ ಪಾತ್ರದಾರಿ ಮಾಸ್ಟರ್ ಮಂಜುನಾಥ್ ಜೊತೆಗೆ ಹಿರಿಯ ಅನುಭವಿ ಕಲಾವಿದರಾದ ಗಿರಿಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ, ಬಿ. ಜಯಶ್ರಿ, ಶಂಕರ್ ನಾಗ್, ವಿಷ್ಣುವರ್ಧನ್ ಹೀಗೆ ಅನೇಕ್ ಕಲಾವಿದರು ಈ ಧಾರವಾಹಿಯಲ್ಲಿ ನಟಿಸುವ ಮೂಲಕ ಈ ಧಾರವಾಹಿಯ ತೂಕವನ್ನು ಹೆಚ್ಚಿಸಿದ್ದಾರೆ ಅಂದ್ರೆ ತಪ್ಪಾಗಲಾರದು.

Malgudi Days - Disney+ Hotstar

54 ಸಂಚಿಕೆಯ ಈ ಧಾರವಾಹಿ ಸರಣಿ ಪ್ರತಿಯೊಂದು ಸಂಚಿಕೆಯೂ ಕೂಡ ಬಿಡಿ ಮಲ್ಲಿಗೆ ಹೂವಿನ ಹಾಗೆ ಸುಹಾಸನೆ ಕೊಡುತ್ತೆ. ಮತ್ತೆ ಮತ್ತೇ ನೋಡಬೇಕೆನಿಸುತ್ತೆ. ಈ ಧಾರವಾಹಿ ಇದೇ ಮೇ 11 ರಿಂದ ಜಿ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಮತ್ತೆ ಪ್ರಸಾರವಾಗುತ್ತಿದೆ. ಈ ಧಾರವಾಹಿಯನ್ನು ಕುಟುಂಬ ಸಮೇತರಾಗಿ ಕುಳಿತು ನೋಡಿ.

Malgudi days by theatre artists
-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!