ಚಿತ್ರಿಕರಣದ ದಿನದಿಂದಲೂ ಸದ್ದು ಮಾಡುತ್ತಿದ್ದ ಯಶ್ ಅಭಿನಯದ ಬಹುನಿರೀಕ್ಷಿತ ಬಹುಭಾಷೆಯ ಚಿತ್ರ ಕೆಜಿಎಫ್ ಇಂದು ತೆರೆಕಂಡಿದೆ. ನಿರ್ದೇಶಕ ಪ್ರಶಾಂತ್, ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಗೆ ನೂರಾರು ತಂತ್ರಜ್ಞರ 2 ವರ್ಷದ ಪರಿಶ್ರಮ ಇಂದು 2000ಕ್ಕೂ ಹೆಚ್ಚು ಬೆಳ್ಳಿ ಪರದೆಗಳಲ್ಲಿ ಚಿತ್ರ ಪ್ರದರ್ಶನ ಕಾಣುವ ಮೂಲಕ ಅಂತ್ಯ ಕಂಡಿದೆ.
ಬಹುಶ: ಕನ್ನಡ ಚಿತ್ರರಂಗದಲ್ಲಿಯೇ ಈ ಮಟ್ಟದ ಬಜೇಟ್ ಚಿತ್ರ ಮತ್ತೊಂದಿಲ್ಲ! ನಿರ್ಮಾಪಕ ವಿಜಯ್ ಕಿರಗಂದೂರು ಯಾವ ಭಾಷೆಯ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಚಿತ್ರಕ್ಕೆ ಸಂಪೂರ್ಣವಾಗಿ ಹಣವನ್ನು ಸುರಿದಿದ್ದಾರೆ. ಇವತ್ತು (21.12.2018) ಚಿತ್ರ ತೆರೆಕಂಡಿದ್ದೂ ಸಿನಿ ಪ್ರೇಕ್ಷಕರು ಮುಂಜಾನೆಯಿಂದಲೇ ಸಿನಿಮಾವನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ. ಪ್ರೇಕ್ಷಕರೇ ಹೇಳಿದ ಹಾಗೇ ಹಾಲಿವುಡ್ ಲೇವಲ್‍ಗೆ ಕನ್ನಡ ಸಿನಿಮಾ ಬಂದಿದೆ, ನಮ್ಮ ನಿರೀಕ್ಷೆಗಿಂತಲೂ ಸಿನಿಮಾ ಚೆನ್ನಾಗಿ ಬಂದಿದೆ. 100ದಿನ ಗ್ಯಾರಂಟಿ ಅನ್ನೊ ಮಾತುಗಳು ಸಿನಿಮಾ ನೋಡಿದ ಪ್ರೇಕ್ಷಕರು ತಿಳಿಸುತ್ತಿದ್ದಾರೆ.
ನಮಗೆ ಆ ನಟ ಇಷ್ಟ ಈ ನಟ ಇಷ್ಟ ಎಂಬ ಮನೋಭಾವನೆಯನ್ನು ಪ್ರತಿಯೊಬ್ಬ ಚಿತ್ರ ಪ್ರೇಮಿಯೂ ಬಿಟ್ಟು ಕನ್ನಡ ಚಿತ್ರ ಅಂತ ಈ ಸಿನಿಮಾ ನೋಡಿ ಈ ಸಿನಿಮಾ 2 ವರ್ಷದ ಪರಿಶ್ರಮ! ಅದಕ್ಕಿಂತಲೂ ಹೆಚ್ಚಾಗಿ ಕನ್ನಡ ಭಾಷೆಯ ಅತಿದೊಡ್ಡ ಬಜೇಟ್ ಚಿತ್ರ ಹಾಗೂ ಕನ್ನಡ ಚಿತ್ರರಂಗವನ್ನು ವಿಶ್ವವ್ಯಾಪಿ ತಲುಪುವಂತೆ ಈ ಚಿತ್ರ ಸದ್ದು ಮಾಡುತ್ತಿದೆ. 5 ಭಾಷೆಗಳಲ್ಲಿ ತೆರೆಕಂಡಿರುವ ಈ ಚಿತ್ರಕ್ಕೆ ಭಾಷೆಯನ್ನು ಮೀರಿದ ಪ್ರತಿಕ್ರಿಯೇ ವ್ಯಕ್ತವಾಗುತ್ತಿದೆ.
ಈ ಚಿತ್ರ ಶತದಿನೋತ್ಸವ ಆಚರಿಸಲೇಂದು ಚಿತ್ರಪ್ರೇಮಿಗಳ ಪರವಾಗಿ ನಮ್ಮ ವೆಬ್ ಸೈಟ್ ಹಾರೈಸುತ್ತದೆ.
-ನವೀನ್ ರಾಮನಗರ