ಬಣ್ಣದ ಲೋಕದ ಹಿರಿಯ ಮೇರು ನಟ ಲೋಕನಾಥ್‍ರವರು ವಯೋಸಹಜ ಕಾಯಿಲೆಯಿಂದ ಇಂದು ( 31.12.2018) ವಿಧಿವಶರಾಗಿದ್ದಾರೆ. ಅವರಿಗೆ 90ವರ್ಷ ವಯಸ್ಸಾಗಿತ್ತು. ರಂಗಭೂಮಿ, ಚಿತ್ರರಂಗವೂ ಸೇರಿದಂತೆ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು.
ಪುಟ್ಟಣ್ಣ ಕಣಗಾಲ್ ರ ನಾಗರಹಾವು ಚಿತ್ರದಲ್ಲಿ ಪ್ರಾಂಶುಪಾಲರಾಗಿ, ಭೂತಯ್ಯನ ಮಗ ಅಯ್ಯ ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ ಆ ಚಿತ್ರದಲ್ಲಿ ಬೂತಯ್ಯನ ಮನೆಯಲ್ಲಿ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಚಿತ್ರ ನೋಡಿದ್ದ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಮಿಂಚಿನ ಓಟ, ಕಾಕನ ಕೋಟೆ, ಮುಂತಾದ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಅಭಿನಯದ ಮೂಲಕ ಚಿತ್ರರಸಿಕರ ಪಾಲಿಗೆ ಉತ್ತಮ ನಟನಾಗಿದ್ದರು.
ಲೋಕನಾಥ್‍ರವರು ಹುಟ್ಟಿದ್ದು ಬೆಂಗಳೂರಿನಲ್ಲಿ ತಂದೆ ಹನುಮಂತಪ್ಪನವರು ತಾಯಿ ಗೌರಮ್ಮನವರು ಅವಿಭಕ್ತ ಕುಟುಂಬದಲ್ಲಿ ಬೆಳೆದ ಲೋಕನಾಥ್ ಎಂಜಿನಿಯರಿಂಗ್ ಪದವಿಯನ್ನು ಅರ್ಧದಲ್ಲಿ ನಿಲ್ಲಿಸಿ ವ್ಯಾಪರ ವಹಿವಾಟು ನೋಡಿಕೊಳ್ಳುತ್ತಿದ್ದರು. ಇದರ ಜೊತೆ ಸಂಗೀತ ಆಸಕ್ತಿ ಮತ್ತು ನಟನೆಯ ಆಸಕ್ತಿಯೂ ಅವರಲ್ಲಿತ್ತು.
ಸಂಸ್ಕಾರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಲೋಕನಾಥ್ ಸುಮಾರು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪೋಷಕಪಾತ್ರಗಳಲ್ಲಿ ಮಿಂಚಿದ ಪ್ರತಿಭೆ. ಮಿಂಚಿನ ಓಟ ಚಿತ್ರದ ಪೋಷಕ ಪಾತ್ರಕ್ಕೆ ಪ್ರಶಸ್ತಿಯನ್ನು ಪಡೆದಿದ್ದರು. ಇವರ ನಿಧನದಿಂದ ಒಬ್ಬ ಅತ್ಯುತ್ತಮ ಪೋಷಕ ನಟನನ್ನು ಚಿತ್ರರಂಗ/ಕಲಾವಿದರ ಕುಟುಂಬ ಕಳೆದುಕೊಂಡಂತಾಗಿದೆ.
ಅಗಲಿದ ಮೇರು ನಟ ಲೋಕನಾಥ್‍ಗೆ ಭಾವಪೂರ್ಣ ಶ್ರದ್ದಾಂಜಲಿ.
-ನವೀನ್ ರಾಮನಗರ