ಸುದ್ದಿ

ಕೆಎಂಎಫ್ ಮತ್ತು ಬಾಲಮಂದಿರದ ಸಹಯೋಗದೊಂದಿಗೆ ವಿಶ್ವ ಹಾಲು ದಿನಾಚರಣೆ

ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಬಾಲ ಮಂದಿರದ ಸಹಯೋಗದೊಂದಿಗೆ ಬೆಂಗಳೂರಿನ ಸುಧಾರಣಾ ಸಂಕೀರ್ಣದಲ್ಲಿ ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಕಹಾಮ ಕೇಂದ್ರೀಯ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ.ಜಿ.ಟಿ. ಗೋಪಾಲ್‍ರವರು ಉದ್ಘಾಟಿಸಿದರು. ಕಹಾಮ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಶ್ರೀ ಮ್ಯತ್ಯುಂಜಯ ಕುಲಕರ್ಣಿಯವರು ಮಾತನಾಡಿ ಕೆಎಂಎಫ್‍ನಲ್ಲಿ ಪ್ರಸ್ತುತ 82 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು. ಕರ್ನಾಟಕ ಸರ್ಕಾರದ ಜನಪ್ರಿಯ ಕ್ಷೀರ ಭಾಗ್ಯ ಯೋಜನೆಯಡಿ 1 ಕೋಟಿಗೂ ಅಧಿಕ ಶಾಲಾ ಮಕ್ಕಳಿಗೆ ಹಾಲು ವಿತರಿಸಲಾಗುತ್ತಿದೆ. ಇಂದು ವಿಶ್ವ ಹಾಲು ದಿನಾಚರಣೆಯನ್ನು ಬಾಲ ಮಂದಿರದಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ. ನಿಮ್ಮ ಭವಿಷ್ಯ ಉಜ್ವಲವಾಗಲಿ, ನಮ್ಮ ಕೆಎಂಎಫ್ ಸಂಸ್ಥೆಯಿಂದ ಈ ಬಾಲಮಂದಿರದ ಮಕ್ಕಳಿಗೆ ಉಪಯುಕ್ತವಾಗುವ ರೀತಿ ಮುಂದಿನ ದಿನಗಳಲ್ಲಿ ಸಹಕಾರ ನೀಡಲಾಗುವುದೆಂದು ಭರವಸೆ ನೀಡಿದರು.

ಬಾಲ ಮಂದಿರದ ಎಲ್ಲಾ ಮಕ್ಕಳಿಗೂ ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ಹಾಲು ಮತ್ತು ನಂದಿನಿ ಸಿಹಿ ಉತ್ಪನ್ನವನ್ನು ವಿತರಿಸಲಾಯಿತು. ಮಕ್ಕಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಕಹಾಮ ಸ್ಟೇಪ್ ವಿಭಾಗದ ನಿರ್ದೇಶಕರಾದ ಡಾ: ಕೆ. ಸ್ವಾಮಿ, ಆಡಳಿತ ವಿಭಾಗದ ನಿರ್ದೇಶಕರಾದ ಡಾ: ಹೆಚ್.ವಿ. ತಿಪ್ಪಾರೆಡ್ಡಿ, ವಿತ್ತ ವಿಭಾಗದ ನಿರ್ದೇಶಕರಾದ ಶ್ರೀ ರಮೇಶ್ ಬಿ ಕುನ್ನೂರ್. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಶ್ರೀಮತಿ ದಿವ್ಯಾ ನಾರಾಯಣಪ್ಪ, ಕೆಎಂಎಫ್ ಮಾರುಕಟ್ಟೆ ವಿಭಾಗದ ಅಪರ ನಿರ್ದೇಶಕರಾದ ಶ್ರೀ ಪ್ರಹ್ಲಾದ್, ರಘುನಂದನ್, ಸತೀಶ್‍ಕುಮಾರ್, ಜಂಟಿ ನಿರ್ದೇಶಕರಾದ ಶ್ರೀ ಬಸವರಾಜ್ ಶ್ರೀ ಪ್ರಕಾಶ್ ಕುಮಾರ್, ಶ್ರೀ ವಿ.ಸಿ. ವೆಂಕಟೇಶ್, ಶ್ರೀ ಲಕ್ಷ್ಮಿಪತಿ ಯಾದವ್, ತಿರುಪತಮ್ಮ ಶ್ರೀಮತಿ ಸ್ವಾತಿ ಕಹಾಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಸಿ.ಪಿ.ರೆಡ್ಡಿ ಹಾಗೂ ಕೆಎಂಎಫ್‍ನ ಇತರೇ ಅಧಿಕಾರಿಗಳು ಮತ್ತು ಬಾಲಮಂದಿರದ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನವೀನ್ ರಾಮನಗರ ಕಾರ್ಯಕ್ರಮ ನಿರೂಪಿಸಿದರು. ಬಾಲಮಂದಿರದ ಅಧೀಕ್ಷಕರಾದ ಶ್ರೀಮತಿ ನಾಗರತ್ನಮ್ಮ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು ಮತ್ತು ಪುಟಾಣಿ ಪೂರ್ಣಿಮ ಮತ್ತು ಸಂಗಡಿಗಳು ಪ್ರಾರ್ಥಿಸಿದರು.

 

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!