ಸುದ್ದಿ

ನಂದಿನಿ ಸಿಹಿ ಉತ್ಸವ! ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳು!

ನಂದಿನಿ ಸಿಹಿ ಉತ್ಸವ! ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳು!

ಕರ್ನಾಟಕ ಹಾಲು ಮಹಾ ಮಂಡಳಿ (ಕಹಾಮ) ರಾಷ್ಟ್ರದ 2 ನೇ ಅತಿ ದೊಡ್ಡ ಸಹಕಾರಿ ಹಾಲು ಮಹಾ ಮಂಡಳಿಯಾಗಿದ್ದು, ಕಹಾಮದ “ನಂದಿನಿ” ಬ್ರಾಂಡ್ ಅಡಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಹಾಲು, ಗುಡ್‍ಲೈಫ್ ಹಾಲು, ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ, ಸುವಾಸಿತ ಹಾಲು, ಪನೀರ್ ಇತ್ಯಾದಿ ಉತ್ಪನ್ನಗಳ ಜೊತೆಗೆ ಸಿಹಿ ಉತ್ಪನ್ನಗಳಾದ ಮೈಸೂರ್ ಪಾಕ್, ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್ ಬರ್ಪಿ, ಕ್ಯಾಶು ಬರ್ಫಿ, ಡ್ರೈಪ್ರೂಟ್ರ್ಸ್ ಬರ್ಫಿ, ಕೋಕೋನಟ್ ಬರ್ಫಿ, ಚಾಕೋಲೇಟ್ ಬರ್ಫಿ, ಕುಂದ, ಜಾಮೂನ್, ರಸಗುಲ್ಲಾ ಇತ್ಯಾದಿ 20 ಕ್ಕೂ ಹೆಚ್ಚು ಸಿಹಿ ಹಾಲಿನ ಉತ್ಪನ್ನಗಳಿವೆ.

ಆದರೆ, ಬಹುತೇಕ ನಂದಿನಿ ಗ್ರಾಹಕರು ಮತ್ತು ಸಾರ್ವಜನಿಕರ ಮನದಲ್ಲಿ ನಂದಿನಿ ಹಾಲು, ಮೊಸರು, ಮಜ್ಜಿಗೆ, ಗುಡ್‍ಲೈಫ್, ಸುವಾಸಿತ ಹಾಲು, ಮೈಸೂರು ಪಾಕ್, ಪೇಡ, ಕ್ಯಾಶು ಬರ್ಫಿ ಮಾತ್ರವಿದೆ ಮತ್ತು ಇನ್ನು ಕೇಲವು ಗ್ರಾಹಕರಲ್ಲಿ “ನಂದಿನಿ” ಉತ್ಪನ್ನಗಳೆಂದರೆ
ಹಾಲು ಮತ್ತು ಮೊಸರು ಮಾತ್ರ  ಎಂಬ ಭಾವನೆಯಿದೆ.

ಆದ್ದರಿಂದ  ಎಲ್ಲಾ ಗ್ರಾಹಕರು ಉತ್ತಮ ಗುಣಮಟ್ಟದ ರುಚಿಕರವಾದ ನಂದಿನಿ ಎಲ್ಲಾ ಸಿಹಿ ಉತ್ಪನ್ನಗಳನ್ನು ಸವಿಯುವಂತೆ ಮಾಡಲು ಕಹಾಮ ಮತ್ತು ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ಮಾರುಕಟ್ಟೆ ಪ್ರದೇಶದಲ್ಲಿ ರಾಜ್ಯದಾದ್ಯಂತ ದಿನಾಂಕ 06.07.2018 ರಿಂದ 20.07.2018 ರವರೆಗೆ “ನಂದಿನಿ ಸಿಹಿ ಉತ್ಸವ”ವನ್ನು ಆಚರಿಸಲಾಗುತ್ತಿದ್ದು, ಎಲ್ಲಾ ನಂದಿನಿ ಸಿಹಿ ಉತ್ಪನ್ನಗಳ ಗರಿಷ್ಠ ಮಾರಾಟ ದರದ ಮೇಲೆ 10% ರಷ್ಟು ರಿಯಾಯಿತಿಯನ್ನು ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ. ದಿನಾಂಕ 06.07.2018 ರಂದು ಬನಶಂಕರಿ ದೇವಸ್ಥಾನ, ಬೆಂಗಳೂರು ಸಮೀಪದಲ್ಲಿರುವ ನಂದಿನಿ ಪಾರ್ಲರ್‍ನಲ್ಲಿ “ನಂದಿನಿ ಸಿಹಿ ಉತ್ಸವ”ಕ್ಕೆ ಡಾ: ಜಿ.ಟಿ. ಗೋಪಾಲ್ ನಿರ್ದೇಶಕರು(ಖರೀದಿ),ಡಾ: ಸ್ವಾಮಿ ನಿರ್ದೇಶಕರು(ಸ್ಟೆಪ್), ಶ್ರೀ ಎಂ.ಟಿ. ಕುಲಕರ್ಣಿ ನಿರ್ದೇಶಕರು (ಮಾರುಕಟ್ಟೆ), ಡಾ: ಹೆಚ್.ವಿ. ತಿಪ್ಪಾರೆಡ್ಡಿ ನಿರ್ದೇಶಕರು(ಆಡಳಿತ) ರವರು ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಕಹಾಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

 

ದಿನಾಂಕ 06.07.2018 ರಿಂದ 20.07.2018ರವರೆಗೆ ಎಲ್ಲಾ ನಂದಿನಿ ಪಾರ್ಲರ್‍ಗಳು, ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್‍ಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ದರಗಳ ಮೇಲೆ 10% ರಿಯಾಯಿತಿ ನೇರವಾಗಿ ಗ್ರಾಹಕರಿಗೆ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

-bbmnews

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!