ಸುದ್ದಿ

ಜೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ ಸೀಸನ್ 14ರ ವಿಜೇತ ವಿಶ್ವಪ್ರಸಾದ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಲಿಟ್ಲ್ ಚಾಂಪ್ಸ್ ೧೪ನೇ ಸೀಸನ್ ನ ವಿಜೇತರಾಗಿ ವಿಶ್ವಪ್ರಸಾದ್ ಆಯ್ಕೆಯಾಗಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರ ವಾಗುತ್ತಿದ್ದ   ಸರಿಗಮಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ನಾದಬ್ರಹ್ಮ ಹಂಸಲೇಖ ಸಂಗೀತ ಮಾಂತ್ರಿಕ ಆರ್ಜುನ್ ಜನ್ಯ , ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ರವರು ಪ್ರಮುಖ ತೀರ್ಪುಗಾರಾಗಿದ್ದರು. ಹಲವಾರು ಗಾಯಕರು,, ಸಂಗೀತ ನಿರ್ದೇಶಕರು ಜ್ಯುರಿ ತೀರ್ಪುಗಾರರಾಗಿದ್ದ ಈ ಕಾರ್ಯಕ್ರಮ ಮುದ್ದು ಮಕ್ಕಳ ಗಾಯನದಿಂದ ಕರ್ನಾಟಕವೂ ಸೇರಿದಂತೆ ವಿಶ್ವದೆಲ್ಲೆಡೆ ಇರುವ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಕಾರ್ಯಕ್ರಮದ ನಿರೂಪಣೆಯನ್ನು ಮಾತಿನ ಮಲ್ಲಿ ಅನುಶ್ರೀ ನಡೆಸಿ ಕೊಡುತ್ತಿದ್ದರು. ಅತಿಥಿಗಳಾಗಿ ಹಲವಾರು ಮಹನೀಯರು ಭಾಗವಹಿಸದ್ದರು. ಅದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಯವರು ಮತ್ತು ಗಾನ ಕೋಗಿಲೆ ಎಸ್ .ಪಿ. ಬಾಲಸುಬ್ರಮಣ್ಯಂ ಪ್ರಮುಖರು.

ಜೀ ವಾಹಿನಿಯಲ್ಲಿ ಪ್ರಸಾರವಾದ ಲೈವ್ ಕಾರ್ಯಕ್ರಮದಲ್ಲಿ ವಿಶ್ವಪ್ರಸಾದ್ , ತೇಜಸ್ ಶಾಸ್ತ್ರಿ , ಜ್ಞಾನೇಶ್ , ಕೀರ್ತನ, ಫಿನಾಲೇ ಹಂತಕ್ಕೆ ಬಂದಿದ್ದರು. ಅದರಲ್ಲಿ ತೇಜಸ್ ಶಾಸ್ತ್ರಿ ೪ನೇ ಸ್ಥಾನ ಪಡೆದರು. ನಾದಬ್ರಹ್ಮ ಹಂಸ ಲೇಖರವರು ತೀರ್ಪು ಪ್ರಕಟಿಸುವ ಮುನ್ನ ಮೂರನೇ ಸ್ಥಾನವನ್ನು ರದ್ದು ಮಾಡಿ . ಎರಡನೇ ಸ್ಥಾನವನ್ನು ಕೀರ್ತನ ಮತ್ತು ಜ್ಞಾನೇಶ್ ಹಂಚಿದರು! ಇಬ್ಬರು ತಲಾ 2 ಲಕ್ಷ ಬಹುಮಾನ ಮತ್ತು ಟ್ರೋಫಿ ಪಡೆದರು. ಮೊದಲನೇ ಸ್ಥಾನವನ್ನು ಪಡೆದ ವಿಶ್ವಪ್ರಸಾದ್ ರವರಿಗೆ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ 5 ಲಕ್ಷ ಬಹುಮಾನ ವಿತರಿಸಿದರು. ವಿಶ್ವಪ್ರಸಾದ್ ತಂದೆ ಮತ್ತು ತಾಯಿಯವರನ್ನು ವೇದಿಕೆಗೆ ಕರೆಸಿ . ಎಸ್. ಪಿ. ಬಾಲಸುಬ್ರಮಣ್ಯಂ ಆಟೋಗ್ರಾಪ್ ಮಾಡಿರುವ ಪದಕವನ್ನು ನೀಡಲಾಯಿತು.

ಫಿನಾಲೆ ಲೈವ್ ಕಾರ್ಯಕ್ರಮದಲ್ಲಿ ಜನರ ವೋಟಿಂಗ್ ಮತ್ತು ತೀರ್ಪುಗಾರರ ಅಂಕಿಗಳ ಅನುಸಾರ ಬಹುಮಾನ ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ಯಾರು ಗೆದ್ದಿದ್ದರು ಸೋತಿದ್ದರು,  ನಿಜವಾಗಿ ಗೆದ್ದಿದ್ದು ಸಂಗೀತ. ಈ ಕಾರ್ಯಕ್ರಮವನ್ನು ಬಹಳಷ್ಟು ಜನ ವೀಕ್ಷಿಸಿ ಸಂತೋಷ ಪಟ್ಟರು.

ಎಲ್ಲ ಸ್ಪರ್ಧಿಗಳಿಗೂ ಮತ್ತು ವಿಜೇತರಿಗೆ ಹಾಗೂ ಇಂತಹ ಉತ್ತಮ ಸದಭಿರುಚಿಯ ಕಾರ್ಯಕ್ರಮ ನೀಡುವುದರ ಜೊತೆಗೆ ಒಳ್ಳೆಯ ಮನರಂಜನೆ ಕೊಟ್ಟಿದ್ದಕ್ಕೆ. ಈ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ  ಮತ್ತು ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ರವರಿಗೆ ಈ ಮಣ್ಣಿನ ಜನತೆಯ ಪರವಾಗಿ ಅಭಿನಂದನೆಗಳು. ನಿಮ್ಮಿಂದ ಈ ರೀತಿಯ ಉತ್ತಮ ಕಾರ್ಯಕ್ರಮಗಳು ನಿರಂತರವಾಗಿ ಬರಲೆಂದು ಆಶಿಸುತ್ತೇನೆ.
-ನವೀನ್ ರಾಮನಗರ

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!