ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮೂಲತ: ಮೈಸೂರಿನವರು ಹುಟ್ಟಿದ್ದು ಫೆಬ್ರವರಿ 21, 1976 ತಾಯಿ ಲೋಪಾಮುದ್ರ ತಂದೆ ಎಲ್ ರಾಮಶೇಷ ಇವರು ಸಂಗೀತ ಕಲಾವಿದರು. ವಿಜಯ್ ಪ್ರಕಾಶ್ ಬಾಲ್ಯದಲ್ಲೇ ತಮ್ಮ ತಂದೆಯವರಿಂದ ಶಾಸ್ತ್ರೀಯ ಸಂಗೀತವನ್ನು ಕಲಿತರು.
ವಿಜಯ್ ಪ್ರಕಾಶ್ ಎಂಬ ಸಾಮಾನ್ಯ ಹುಡುಗ ಇಂದು ವಿಶ್ವವಿಖ್ಯಾತಿ ಪಡೆದ ಹಿನ್ನೆಲೆ ಗಾಯಕನಾಗಿದ್ದು ಸುಲಭವಾಗಂತೂ ಅಲ್ಲ! ಅವರು ಸವೆಸಿದ ಹಾದಿ, ಛಲ, ಪ್ರಯತ್ನ ಎಂತವರಿಗೂ ಮೈ ರೋಮಾಂಚನವನ್ನುಂಟು ಮಾಡುತ್ತೆ.
ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿಜಯ್ ಪ್ರಕಾಶ್ ಯಾವುದೋ ಒಂದು ಸಣ್ಣ ಗುರಿಯನ್ನಿಟ್ಟು ಕೊಳ್ಳದೇ ವಿಶಾಲ ಪ್ರಪಂಚದಲ್ಲಿ ಸ್ಪಷ್ಟಗುರಿ ಇಲ್ಲದೇ ಕೈಯಲ್ಲಿ ಕೇವಲ 700 ರೂ. ಗಳು ಒಂದು ಜೊತೆ ಬಟ್ಟೆಯಲ್ಲಿ ಮನೆಬಿಟ್ಟು ಹೊರಟ ವಿಜಯ್ ಪ್ರಕಾಶ್ ಮೊದಲು ತಪುಪಿದ್ದು ತಿರುಪತಿಗೆ, ತಿರುಪತಿಯಿಂದ ಮುಂಬೈಗೆ ಅಲ್ಲಿ ಅವರ ನೋವಿನ ದಿನಗಳು ಎಷ್ಟಿತ್ತೋ ಗೊತ್ತಿಲ್ಲ, ಸಾಧಿಸುವ ಛಲ ಮಾತ್ರ ಅವರಲ್ಲಿತ್ತು!
1996ರಲ್ಲಿ ಪ್ರಸಿದ್ಧ ಗಾಯಕ ಸುರೇಶ್ ವಾಡ್ಕರ್ ಅವರಲ್ಲಿ ಶಿಷ್ಯತ್ವ ಲಭಿಸಿತು. ಸೋನು ನಿಗಮ್‍ರವರು ಜೀ.ಟಿ.ವಿಯಲ್ಲಿ ನಡೆಸಿಕೊಡುತ್ತಿದ್ದ ಪ್ರತಿಷ್ಠಿತ ಸರಿಗಮಪ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಫೈನಲ್ ತಲುಪಿದರು. ಅಲ್ಲಿನ ಸ್ಪರ್ಧೆಗಳು ಕೇವಲ ಚಲನಚಿತ್ರಗೀತೆಗಳ ಗಾಯನ ಸ್ಪರ್ಧೆಯಾಗಿರದೆ ಶ್ರೇಷ್ಠ ಸಂಗೀತಗಾರರ ನಡೆಯುತ್ತಿದ್ದ ನಿಜವಾದ ಸಂಗೀತ ಸಾಮಥ್ರ್ಯದ ಅಗ್ನಿ ಪರಿಕ್ಷೆಯೇ ಆಗಿರುತ್ತಿತ್ತು.
2002ರಲ್ಲಿ ವರ್ಷದಲ್ಲಿ ಬಾಜ್ ಚಿತ್ರದಲ್ಲಿ ಗಾಯನಕ್ಕೆ ಅವಕಾಶ ಪಡೆದ ವಿಜಯ್ ಪ್ರಕಾಶ್ ಮುಂದೆ ತಮಿಳು ಚಿತ್ರರಂಗ ಪ್ರವೇಶಿಸಿದರು. ಖ್ಯಾತರಾದ ಎ.ಆರ್.ರೆಹಮಾನ್ ಅವರ ಸ್ವದೇಶ್ ಚಿತ್ರಕ್ಕೆ ಹಾಡಿದರು, ಯೋಗರಾಜ್ ಭಟ್ ರ ಗಾಳಿಪಟ ಚಿತ್ರದಲ್ಲಿ ಹಾಡುವ ಮೂಲಕ ಮರಳಿ ಮಣ್ಣಿಗೆ ಬಂದ ವಿಜಯ್ ಪ್ರಕಾಶ್, ಆಸ್ಕರ್ ಗಳಿಸಿದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಜೈ ಹೋ ಗೀತೆಯ ಜೈ ಹೋ ಎಂಬ ಉಚ್ಛಾರದ ಎತ್ತರದ ಧ್ವನಿಯಿಂದ ವಿಜಯದ ನಗೆ ಬೀರಿದ ವಿಜಯ್ ಪ್ರಕಾಶ್ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಜೊತೆಗೆ ಜಾಹಿರಾತುಗಳಿಗೆ ಹಿನ್ನೆಲೆ ಧ್ವನಿ ನೀಡುವ ಮೂಲಕ ಹೆಸರು ಮಾಡಿದ್ದಾರೆ.
ಪ್ರಸ್ತುತ ಕನ್ನಡದ ಜೀ. ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಶೋ ಸರಿಗಮಪ ದಲ್ಲಿ ತೀರ್ಪುಗಾರರಾಗಿದ್ದು ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಇವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಈ ನಾಡಿನ ಸಮಸ್ತರ ಪರವಾಗಿ ವಿಜಯ್ ಪ್ರಕಾಶ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.