ಸಿನಿಮಾ

ಈ ಶುಕ್ರವಾರ ತೆರೆಗೆ ಬಂದ ಚಿತ್ರಗಳಿವು. ನೋಡಿ.

ಶುಕ್ರವಾರ ಬಂತೆಂದರೆ ಸಾಕು ಚಿತ್ರಪ್ರೇಮಿಗಳು ಸಂತಸ ಸಡಗರದಿಂದ ಸಂಭ್ರಮಿಸುತ್ತಾರೆ. ತಮ್ಮ ನೆಚ್ಚಿನ ಸಿನಿಮಾ ಬಿಡುಗಡೆಗೊಂಡರೆ ಮೊದಲ ದಿನವೇ ಹೋಗಿ ಸಿನಿಮಾ ನೋಡಿ ಖುಷಿಪಡುತ್ತಾರೆ. ಈ ವಾರ ದೊಡ್ಡ ನಟರ ಚಿತ್ರಗಳು ತೆರೆಗೆ ಬಂದಿಲ್ಲ ಆದರೆ ಮಾಸ್ಟರ್ ಆನಂದ್ ನಟಿಸಿರುವ ಬಹು ನೀರಿಕ್ಷಿತ ಕಾಮಿಡಿ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರ ಹೇಗಿದೆ ಎಂಬುದನ್ನು ಚಿತ್ರನೋಡಿದ ಚಿತ್ರ ಪ್ರೇಮಿಗಳೇ ತಿಳಸಬೇಕು.

Image result for hagalu kanasu

ಇನ್ನೂ ಈ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಅರವಿಂದ್ ಶಾಸ್ತ್ರಿ ನಿರ್ದೇಶನದ ಅಳಿದು ಉಳಿದವರು ತೆರೆಗೆ ಬಂದಿದೆ. ಸುಜಯ್ ರಾಮಯ್ಯ ನಿರ್ದೇಶನದ ಬಬ್ರೂ ಚಿತ್ರ ತೆರೆ ಕಂಡಿದ್ದು, ಇದರಲ್ಲಿ ಸುಮನ್ ನಗರ್‍ಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ಕಥಾ ಸಂಗಮ ಚಿತ್ರವೂ ಕೂಡ ಬೆಳ್ಳಿಪರದೆಗೆ ಬಂದಿದೆ. 19 ಏಜ್ ಇಸ್ ನಾನ್ಸೆನ್ಸ್ ಎಂಬ ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರಪ್ರೇಮಿಗಳಿಗೆ ಈ ವಾರ ಸಿನಿ ಜಾತ್ರೆಯಾಗಿದೆ.

Image result for kalidasa kannada mestru

ಎಲ್ಲಕ್ಕಿಂತ ಹೆಚ್ಚಾಗಿ ಕಳೆದ 3 ವಾರದ ಹಿಂದೆ ಬಿಡುಗಡೆಯಾದ ಕಾಳಿದಾಸ ಕನ್ನಡ ಮೇಷ್ಟು ಹೆಚ್ಚು ಮೆಚ್ಚುಗೆ ಪಡೆದು ಈ ವರ್ಷದ ನಂಬರ್ ಒನ್ ಚಿತ್ರ ಆಗುವ ಎಲ್ಲಾ ಲಕ್ಷಣಗಳನ್ನು ಪಡೆದುಕೊಂಡಿದೆ. ಕವಿರಾಜ್ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ನವರಸ ನಾಯಕ ಜಗ್ಗೇಶ್ ನಾಯಕರಾಗಿದ್ದಾರೆ. ಸಿನಿಮಾ ನೋಡದೆ ಇರುವವರು ತಪ್ಪದೇ ಸಿನಿಮಾ ನೋಡಿ ಎಂಬುದು ಚಿತ್ರ ನೋಡಿದ ಪ್ರತಿಯೊಬ್ಬರ ಮಾತು!.
ಈ ಲೇಖನ ಓದಿದ ನೀವು ಯಾವುದಾದರು ಚಿತ್ರವನ್ನು ನೋಡಿದ್ದರೆ ಚಿತ್ರ ಹೇಗಿತ್ತು ತಿಳಿಸಿ. ಕನ್ನಡ ಚಿತ್ರರಂಗ ಉಳಿಯಲಿ ಬೆಳೆಯಲಿ.

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!