ವೆಸ್ಟ್ ಬೆಂಗಾಲ್ ನ ಭದ್ರೇಶ್ವರದ ಶ್ವೇತಾ ಅಗರ್ವಾಲ್ 2015ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ 19ನೇ ರ್ಯಾಂಕ್ ಪಡೆದು ಐಎಎಸ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದು ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದಾರೆ.
ಸಾಮಾನ್ಯವಾಗಿ ನೋವು ತಿಂದ ವ್ಯಕ್ತಿಗಳು ಬದುಕಿನಲ್ಲಿ ಗಟ್ಟಿಯಾಗಿ ನಿಲ್ಲುತ್ತಾರೆ ಎಂಬ ಮಾತಿದೆ. ಆ ಮಾತಿನಂತೆ ಶ್ವೇತಾ ಅಗರ್ವಾಲ್ ಬದುಕು ಕೂಡ ಸಾಕಷ್ಟು ನೋವುಗಳಿಂದ ಕೂಡಿತ್ತು, ವೆಸ್ಟ್‍ಬೆಂಗಾಲದ ಭದ್ರೇಶ್ವರದಲ್ಲಿ ಅವಿಭಕ್ತಕುಟುಂಬದ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಶ್ವೇತಾ ಬಾಲ್ಯದಲ್ಲೇ ಬಡತನವನ್ನು ಕಂಡವರು.
ಅವತ್ತಿನ ಕಾಲಕ್ಕೆ ಕಾನ್ವೆಂಟ್ ಫೀಸು 165/- ರೂ.ಗಳು ತಿಂಗಳಿಗೆ ಆ ಮೊತ್ತವನ್ನು ಸಹ ಹೊಂದಿಸಲು ಸಾಕಷ್ಟು ಕಷ್ಟ ಸಾಧ್ಯವಾಗುತ್ತಿತ್ತು ಶ್ವೇತಾ ತಂದೆಯವರಿಗೆ ಮಗಳ ವಿದ್ಯಾಭ್ಯಾಸಕ್ಕಾಗಿ ತನ್ನ ಗಿರಾಣಿ ಅಂಗಡಿಯ ವ್ಯವಹಾರದ ಜೊತೆ ಕೂಲಿಯನ್ನು ಸಹ ಮಾಡಿದ್ದರು. 10ನೇ ತರಗತಿವರೆಗೂ ಶಿಕ್ಷಣಕ್ಕೆ ಒತ್ತುಕೊಟ್ಟ ತಂದೆ ಕುಟುಂಬದಲ್ಲಿ ತದನಂತರ ಅಪಸ್ವರ ಶುರುವಾಯಿತು. ಹೆಣ್ಣು ಮಕ್ಕಳು ಓದಿದ್ದು ಸಾಕು ಎಂಬಂತ ಮಾತುಗಳು ತಮ್ಮ ಅವಿಭಕ್ತ ಕುಟುಂಬದಲ್ಲಿ ಶ್ವೇತಾ ಕಿವಿಗೆ ಬಿಳುತ್ತಿತ್ತು.
ಶ್ವೇತಾ ಅಗರ್ವಾಲ್ ಮಾತ್ರ ತನ್ನ ಬದುಕಿನಲ್ಲಿ ದೊಡ್ಡ ಗುರಿಯೊಂದನ್ನು ಇರಿಸಿಕೊಂಡಿದ್ದರು. ಅದು ಉನ್ನತ ವಿದ್ಯಾಭ್ಯಾಸ ನಾನು ಈ ಕುಟುಂಬದ ಮೊದಲ ಪದವಿಧರೆಯಾಗುತ್ತೇನೆಂದು ತಂದೆ ತಾಯಿಯ ಮನವೊಲಿಸಿ ಅದರಂತೆ ಎಂಬಿಎ ಪದವಿಯನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು. ಖಾಸಗಿ ಕಂಪನಿಯಲ್ಲಿ ಉದ್ಯೋಗವನ್ನು ಸಹ ಮಾಡುತ್ತಾ ಐಎಎಸ್ ಗೆ ತಯಾರಿ ನಡೆಸುತ್ತಿದ್ದರು.
ಯುಪಿಎಸ್‍ಸಿ ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ತನ್ನ ಕನಸು ನನಸಾಗಲಿಲ್ಲವೆಂದು 2 ಭಾರಿ ತೆರ್ಗಡೆಯಾಗಿದ್ದರು. ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಕುಳಿತ ಶ್ವೇತಾ ಅಗರ್ವಾಲ್ 2015ರಲ್ಲಿ 19ನೇ Rank ಪಡೆಯುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ದೊಡ್ಡ ಕನಸನ್ನು ಕಾಣಿ ಅದರ ಯಶಸ್ಸಿಗೆ ಹಗಲಿರುಳು ಶ್ರಮಹಾಕಿದರೆ ಖಂಡಿತ ನಿಮ್ಮ ಕನಸು ನನಸಾಗುತ್ತೆ ಎನ್ನುವ ಶ್ವೇತಾ ಅಗರ್ವಾಲ್ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
(ಶ್ವೇತಾ ಅಗರ್ವಾಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ ಸರ್ಚ್‍ಮಾಡಿ. ಈ ಲೇಖನ ಇಷ್ಟವಾಗಿದ್ದರೆ ದಯಮಾಡಿ ಲೈಕ್ ಮತ್ತು ಶೇರ್ ಮಾಡಿ ಶುಭವಾಗಲಿ)