ಓರ್ವ ಸಿರಿವಂತ ಅವನಿಗೆ ನಾಲ್ಕು ಜನ ಮಕ್ಕಳು. ನಾಲ್ಕು ಜನ ಸೊಸೆಯಂದಿರು ಸಿರಿ – ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ .
ಒಂದು ದಿನ ರಾತ್ರಿ ಸಿರಿವಂತನು ಮಲಗಿರುವಾಗ ವಿಚಿತ್ರ ಕನಸು ಕಂಡ ಮನೆಯ ಭಾಗ್ಯಲಕ್ಷ್ಮಿ ಹೊರಗೆ ಹೋಗುತ್ತಿದ್ದಳು ಅವರೀರ್ವರ ಮಧ್ಯದಲ್ಲಿ ಸಂಭಾಷಣೆ ನಡೆಯಿತು .
ಲಕ್ಷ್ಮಿ – ಸಿರಿವಂತನೆ ನಾನು ಈಗ ಹೊರಗೆ ಹೋಗುತ್ತಿದ್ದೇನೆ ನಿನಗೆ ಏನು ವರ ಬೇಕು ಬೇಡು ಕೊಡುತ್ತೇನೆ. ಸಿರಿವಂತ – ಈಗ ಈ ಮನೆಯ ಹೊಣೆಯನ್ನು ನನ್ನ ಮಕ್ಕಳು ಮತ್ತು ಸೊಸೆಯಂದಿರು ವಹಿಸಿಕೊಂಡಿದ್ದಾರೆ ಅವರಿಗೆ ಕೇಳಿ ಹೇಳುತ್ತೇನೆ .ಲಕ್ಷ್ಮಿ – ಆಗಲಿ ಅವರಿಗೆ ಕೇಳಿ ನನಗೆ ತಿಳಿಸು .ಮರುದಿನ ಮುಂಜಾನೆ ಸಿರಿವಂತನು ತನ್ನ ಮಕ್ಕಳಿಗೆ ಕರೆದು ನಡೆದ ಸಂಗತಿಯನ್ನು ಹೇಳಿದ ಅದನ್ನು ಕೇಳಿ ಹಿರಿಯ ಮಗ ಹೇಳಿದ – ನೂರು ಜನ್ಮ ಕುಳಿತು ಉಂಡರು ಸವೆಯಲಾಗದಷ್ಟು ಸಿರಿ ಸಂಪತ್ತು ಕೇಳು .
ಎರಡನೆಯ ಮಗ ಹೇಳಿದ – ಸಂಪತ್ತು ಸ್ಥಿರವಲ್ಲ ಯಾರಾದರೂ ಕಳವು ಮಾಡಬಹುದು ಅಲ್ಲವೇ ಕಸಿದುಕೊಳ್ಳಬಹುದು ಭೂಮಿಯನ್ನು ಮಾತ್ರ ಯಾರೂ ಕಳವು ಮಾಡಲಾರರು ಕಸಿದುಕೊಳ್ಳಲಾರರು ಸಾವಿರಾರು ಎಕರೆ ಭೂಮಿಯನ್ನೇ ಕೇಳಿ ಬಿಡಿ ,ಮೂರನೇ ಮಗ ಹೇಳಿದ – ಈ ಸಿರಿ ಸಂಪದ ಭೂಮಿ ಸೀಮೆ ಏನು ಮಾಡುವುದು ನಮ್ಮ ಕೈಯಲ್ಲಿ ಅಧಿಕಾರ ಇಲ್ಲದಿದ್ದರೆ , ಸಿರಿ ಸಂಪದ ಭೂಮಿ ಸೀಮೆ ಯಾವುದೂ ಸ್ಥಿರವಲ್ಲ ಆದುದರಿಂದ ಎಂದೆಂದಿಗೂ ನಮ್ಮ ಕೈ ಬಿಡಲಾರದಂಥ ಅಧಿಕಾರವನ್ನೇ ಕೇಳಿ ಬಿಡಿ
ಈಗ ನಾಲ್ಕನೆಯವನ ಸರದಿ ಅವನು ಹೇಳಿದ – ನನಗಿಂತಲೂ ನನ್ನ ಹೆಂಡತಿ ತುಂಬಾ ಜಾಣೆ ಅವಳು ತುಂಬಾ ದೈವಭಕ್ತಳು ಇಂಥ ವಿಚಾರದಲ್ಲಿ ಅವಳನ್ನು ಕರೆದು ಕೇಳುತ್ತೇನೆ . ಚಿಕ್ಕ ಮಗನ ಹೆಂಡತಿ ಬಂದು ಹೇಳಿದಳು ನಾನು ಕಿರಿಯಳು ನಾನೇನು ಬಲ್ಲೆ ? ಆದರೂ ತಾವು ನನ್ನನ್ನು ಕರೆದು ಕೇಳಿರುವಿರೆಂದು ಹೇಳುತ್ತೇನೆ ಕೇಳಿ .
ನಮಗೀಗ ಈ ಮನೆಯಲ್ಲಿ ಸಿರಿ ಸಂಪದ ಯಾವುದಕ್ಕೂ ಕೊರತೆಯಿಲ್ಲ ಲಕ್ಷ್ಮಿಯೂ ಹೋದ ಮೇಲೆ ಅವಳು ಕೊಡುವ ಸಿರಿ ಸಂಪದವಾದರೂ ನಮ್ಮಲ್ಲಿ ಇರಲು ಹೇಗೆ ಸಾಧ್ಯ ?ನಾವೆಲ್ಲರೂ ಈ ಮನೆಯಲ್ಲಿ ಪ್ರೀತಿಯಿಂದ ಬಾಳಿ ಬದುಕುತ್ತಿದ್ದೇವೆ ಮುಂದಾದರೂ ಈ ಪ್ರೀತಿ ಹೀಗೆ ವರ್ತಿಸುತ್ತೀರಲಿ ಎಂದು ಲಕ್ಷ್ಮಿಗೆ ಕೇಳಿರಿ ಕಿರಿಯ ಸೊಸೆ ಮಾತು ಎಲ್ಲರಿಗೂ ಹಿಡಿಸಿತ್ತು.
ಅದೇ ರೀತಿ ಆ ಮನೆಯ ಯಜಮಾನ ಲಕ್ಷ್ಮಿಗೆ ಕೇಳಿದ – ತಾಯಿ ನಮಗೆ ಯಾವ ಸಿರಿ ಸಂಪದವು ಬೇಡ ನಾವೆಲ್ಲರೂ ಹಿಂದಿನಂತೆ ಮುಂದೆಯೂ ಪ್ರೀತಿಯಿಂದಿರುವಂತೆ ಕರುಣಿಸು ಈ ಮಾತನ್ನು ಕೇಳುತ್ತಲೇ ಹೊರಗೆ ಹೋಗುತ್ತಿದ್ದ ಲಕ್ಷ್ಮೀಯು ಮತ್ತೆ ಮನೆಯ ಒಳಗೆ ಬಂದು ಕುಳಿತಳು. ಸಿರಿವಂತ – ಮನೆಯಿಂದ ಹೋಗಲಣಿಯಾದವಳು ಮತ್ತೆ ಒಳಗೆ ಬಂದಿದ್ದನ್ನು ಕಂಡು ನನಗೆ ಸಂತೋಷವಾಗಿದೆ ತಾಯಿ ನಿನಗೆ ಅನಂತ ಧನ್ಯವಾದಗಳು.
ಲಕ್ಷ್ಮಿ – ನಾನು ಒಳಗೆ ಬಂದಿರುವುದೇಕೆ ತಿಳಿಯಿತೇ ? ಸಿರಿವಂತ – ಇಲ್ಲಾ ತಾಯಿ ನನಗೇನೂ ತಿಳಿಯಲಿಲ್ಲ ಲಕ್ಷ್ಮೀ- ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲೇ ನಾನಿರುವುದು ಆದುದರಿಂದ ನಾನು ತಿರುಗಿ ಬಂದೆ. ಈ ಮಾತನ್ನು ಕೇಳಿದ ಕೂಡಲೇ ಪ್ರೀತಿಯೇ ನಿಜವಾದ ಸಿರಿ ಸಂಪದವೆಂದು ಸಿರಿವಂತನ ಕುಟುಂಬದವರಿಗೆಲ್ಲ ಮನದಟ್ಟಾಗಿತ್ತು .
ಎದೆಯಲ್ಲಿ ಪ್ರೀತಿ ಮುಖದಲ್ಲಿ ನಗೆ ಇಲ್ಲದಿದ್ದರೆ ಮನೆಯಲ್ಲಿ ಎಷ್ಟು ಸಿರಿ ಸಂಪದ ವಿದ್ದರೆ
ಅದಕ್ಕೇನು ಬೆಲೆ !
ಈ ಕಥೆಯ ಹಾಗೆ ತಾವೆಲ್ಲರೂ ತಮ್ಮ ತಮ್ಮ ಮನೆಯಲ್ಲಿ ನಿಜವಾದ ಪ್ರೀತಿಯಿಂದ ಬದುಕನ್ನು ನಡೆಸಿ. ಸಿರಿತನ ತಾನಾಗಿಯೇ ನಿಮ್ಮ ಮನೆಯಲ್ಲಿ ನೆಲೆಸುತ್ತದೆ.
credit: whatsapp