ವ್ಯಕ್ತಿತ್ವ ವಿಕಸನ

ಇರುವ ಭಾಗ್ಯವ ನೆನೆದು ಬಾರೆನೆಂಬುವುದನ್ನು ಬಿಡು ಹರುಷಕ್ಕಿದೇ ದಾರಿ 

ಭಿಕ್ಷುಕನೋರ್ವ  ಒಂದು ಮನೆಗೆ ಬಿಕ್ಷೆಯಾಚಿಸುತ್ತಾ ಹೋಗುತ್ತಾನೆ. ಆತ ಆ ಮನೆಯನ್ನು ನೋಡುತ್ತಾನೆ ಅದು ಮನೆ ಅಲ್ಲˌ ಅರಮನೆ.ನೋಡಿ ಮುಗಿಸಲು ಎರಡು ಕಣ್ಣು ಸಾಲದು. ಹೊರಗಡೆ ಐಶರಾಮಿ ಕಾರುಗಳು ಸಾಲುಗಟ್ಟಿ ನಿಂತಿವೆ.

ಹೊರಾಂಗಣದಲ್ಲಿ ಅರಮನೆಯ ಒಡೆಯ ಕಪ್ಪು ಕೂಲಿಂಗ್ ಗ್ಲಾಸೊಂದನ್ನ ಹಾಕಿ ಐಶಾರಾಮಿ ಕುರ್ಚಿಯಲ್ಲಿ ಕುಳಿತಿದ್ದಾನೆ.ಅವನ ಪಕ್ಕದಲ್ಲಿ ಸುಂದರಿಯಾದಂತಹ ಪತ್ನಿಯೂ ಇದ್ದಾಳೆ.ತಂದೆ ತಾಯಿಯ ಸೇವೆಗೆ ಸದಾ ಸಿಧ್ಢರಾಗೋ ಮಕ್ಕಳೂ ಇದ್ದಾರೆ.ಇದನ್ನೆಲ್ಲಾ ಗಮನಿಸಿದ ಭಿಕ್ಷುಕ ಹೇಳಿದˌ “ಓ ಯಜಮಾನಾರೇ…. ಓ ಯಜಮಾನರೇ…… ನೀವೆಷ್ಟು ಭಾಗ್ಯವಂತರುˌ ದೇವರು ನಿಮಗೆ ಎಷ್ಟು ಅನುಗ್ರಹ ನೀಡಿದ್ದಾನೆ. ನಿಜಕ್ಕೂ ನೀವು ಭಾಗ್ಯವಂತ ನಿಮಗೆ ದೇವರು ಅರಮನೆ ನೀಡದಿದ್ದಾನಲ್ಲವೇ..? ನನಗೆ ಒಂದಿಂಚು ಭೂಮಿಯೂ ಇಲ್ಲ.ನಿಮಗೆ ದೇವರು ಐಶಾರಾಮಿ ಕಾರು ನೀಡಿದ್ದಾನಲ್ಲವೇ…?ನನಗೆ ಸರಿಯಾದ ಚಪ್ಪಲಿಯೂ ಇಲ್ಲ.ನಿಮಗೆ ಸುಂದರಿಯಾದ ಪತ್ನಿಯೂ ಇದ್ದಾಳೆˌ ನನಗೆ ಯಾರು ಹೆಣ್ಣು ಕೊಡುವವರು, ಆದ್ದರಿಂದ ಮಕ್ಕಳೂ ಇಲ್ಲ.ನಿಜಕ್ಕೂ ನೀವು ಭಾಗ್ಯವಂತರು. ಎಂದು ತನ್ನ ಮನಸ್ಸಿನ ಮಾತನ್ನು ಹೊರಕಾಕುತ್ತಾನೆ.

ಇದನ್ನ ಕೇಳಿದ ಯಜಮಾನ ಭಿಕ್ಷುಕನೊಂದಿಗೆ ಹೇಳಿದ – “ದೇವರು ನನಗೆ ನೀಡದಂತಹ ಒಂದು ದೊಡ್ಡ ಅನುಗ್ರಹವನ್ನ ನಿನಗೆ ನೀಡಿದ್ದಾನೆ” ಭಿಕ್ಷುಕ ಅಚ್ಚರಿಯೊಂದಿಗೆˌ ಅದೇನೆಂದು ಕೇಳುತ್ತಾನೆ.ಯಜಮಾನˌ ತನ್ನ ಕನ್ನಡಕವನ್ನ ತೆಗೆದು ಹೇಳುತ್ತಾನೆˌ “ದೇವರು ನನಗೆ ಎರಡೂ ಕಣ್ಣನ್ನು ನೀಡಿಲ್ಲˌ ನಾನು ಕುರುಡ”…ˌ ನನ್ನ ಎಲ್ಲಾ ಅನುಗ್ರಹವನ್ನ ನಿನಗೆ ನೀಡುವೆ. ನಿನ್ನ ಎರಡೂ ಕಣ್ಣುಗಳನ್ನು ನನಗೆ ನೀಡುವೆಯಾ…?
ಭಿಕ್ಷುಕ ಏನೂ ಮಾತನಾಡದೇ ಅಲ್ಲಿಂದ ಹೊರಬಂದ..ದೇವರು ಆ ಯಜಮಾನನಿಗೆ ನೀಡಿದಂತಹ ಅನುಗ್ರಹ ನನ್ನ ಎರಡು ಕಣ್ಣಿಗೆ ಸಮಾನವಲ್ಲ ಎಂಬ ವಾಸ್ತವವನ್ನು ಭಿಕ್ಷುಕ ಮನದಟ್ಟು ಮಾಡಿಕೊಂಡ…

ಮನುಷ್ಯ ಎಲ್ಲದಕ್ಕೂ ಬೆಲೆಕಟ್ಟುತ್ತಾನೆ… ಆದರೆ ಭಗವಂತ ನಮಗೆ ಪುಕ್ಕಟೆಯಾಗಿ ಕೊಟ್ಟಂತಹ ,ಎಂದೂ ಬೆಲೆಕಟ್ಟಲಾಗದ ನಮ್ಮ ದೇಹದ ಒಂದೊಂದು ಅಂಗಾಂಗದ ಬಗ್ಗೆ ನಮಗೆ ಅರಿವೇ ಇರೋಲ್ಲ. ವಿಶ್ವದ ಅತ್ಯಂತ ವೇಗದ ಚಾಲಕ ಎಂಬ ಖ್ಯಾತಿಯ “ಮೈಕಲ್ ಚುಮಾಕರ್”* ಒಮ್ಮೆ ಅಫಘಾತಕ್ಕೊಳಗಾಗಿ ಕೋಮದಲ್ಲಿದ್ದರು. ಕುತ್ತಿಗೆಯ ಭಾಗದ ನರಗಳು ಛಿದ್ರಗೊಂಡ ಕಾರಣˌ ಅದನ್ನ ಸರಿಪಡಿಸಲು ಆಸ್ಪತ್ರೆಯಲ್ಲಿ ತಗುಲಿದಂತಹ ಒಟ್ಟು ಮೊತ್ತ 109 ಕೋಟಿ ರೂ. ಆದರೂ ಸರಿಯಾದ ರೀತಿಯಲ್ಲಿ ಚುಮಾಕರ್ ನಿಗೆ ಇಂದು ತಲೆಎತ್ತಲು ಸಾಧ್ಯವಿಲ್ಲ…ಹಾಗಾದರೆ ಕುತ್ತಿಗೆಯಲ್ಲಿನ ನರಗಳ ಬೆಲೆ ಎಷ್ಟು…..? ನಮ್ಮ ಎರಡು ಕಣ್ಣುಗಳ ಬೆಲೆ…? Brain ಅಥವಾ ಕಿಡ್ನಿಯ ಬೆಲೆ…? ನಮ್ಮ ಶರೀರದ ಕುರಿತು ಚಿಂತಿಸುವಾಗ ನಾವು ಕೋಟ್ಯಧಿಪತಿಗಳೇ…..!

“ಇರುವ ಭಾಗ್ಯವ ನೆನೆದು ಬಾರೆನೆಂಬುವುದನ್ನು ಬಿಡು ಹರುಷಕ್ಕಿದೇ ದಾರಿ ಎಂಬ ಡಿ.ವಿ.ಜಿ.ಯವರ ಮಾತು ಅಕ್ಷರಶಃ ಸತ್ಯ. ನಮ್ಮಲ್ಲಿರುವ ಶ್ರೀಮಂತಿಕೆಯನ್ನು ಗುರುತಿಸಿ ತೃಪ್ತಿಕರ ಬದುಕನ್ನು ನಡೆಸಬೇಕೇ ಹೊರತು ಇನೊಬ್ಬರನ್ನು ನೋಡಿ ಅವರಂತಿಲ್ಲವಲ್ಲ ಎಂಬ ಕೊರಗು ಖಂಡಿತಾ ಬೇಡ!

credit: whatsapp

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!