ವ್ಯಕ್ತಿತ್ವ ವಿಕಸನ

ನಿಮ್ಮ ಗೆಲುವು ನಿಮ್ಮಿಂದಲೇ! ಕೀಳರಿಮೆ ಬಿಡಿ, ಗೆಲುವು ನೋಡಿ.

ಒಂದು ಉತ್ತಮ ರಸ್ತೆ ಒಬ್ಬ ಉತ್ತಮ ಚಾಲಕನನ್ನು ಸೃಷ್ಟಿಸಲು ಸಾಧ್ಯವಿಲ್ಲವೋ,  ಹಾಗೆಯೇ ಜೀವನ ದಲ್ಲಿ ಕಷ್ಟ, ಸೋಲು,ಅವಮಾನ ಇಲ್ಲದಿದ್ದರೆ ನಾವು ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಬದುಕು ಅನುಭವಿಸಲೆಂದೇ ಇರುವಂಥದ್ದು. ಆದರೆ ಅರಿವು ಮತ್ತು ಇತರರ ಅನುಭವದ ಸಾರವನ್ನು ಜೊತೆಗಿಟ್ಟುಕೊಂಡಾಗಲೇ ಜೀವನದಲ್ಲಿಸಂತೃಪ್ತಿಯೆಡೆಗೆ ಸಾಗಬಹುದು.

ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಯಾವುದೂ ಶಾಶ್ವತವಲ್ಲ ಎನ್ನುವ ನಿತ್ಯಸತ್ಯ ವಿರಕ್ತಿಗೆ ಪೂರಕವಾಗಬಾರದು. ಬದಲಿಗೆ ಅದು ಇರುವಾಗ ಅದನ್ನು ಒಳ್ಳೆಯ ರೀತಿಯಿಂದ ಬಳಸಿ ಕೊಳ್ಳುವುದು ನಮ್ಮ ಗುರಿಯಾಗಬೇಕು. ನಮ್ಮ ಮಧ್ಯೆ ಸಾವಿರ ಜನ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಲೇ ಇರುತ್ತಾರೆ. ಆದರೆ ನಮ್ಮ ಜೀವನವನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಆತ್ಮವಿಶ್ವಾಸ ಇದ್ದಲ್ಲಿ ಎಲ್ಲವನ್ನೂ ಮೆಟ್ಟಿ ನಿಲ್ಲಬಹುದು. ಕೆಲವರು ಪ್ರಶ್ನೆ ಹಾಕಬಹುದು ಬರಿಯ ಆತ್ಮವಿಶ್ವಾಸ ಇದ್ರೆ ಸಾಕಾ? ಎಂದು. ನಿಜ ಆತ್ಮವಿಶ್ವಾಸದಿಂದ ಎಲ್ಲವೂ ಆಗುವುದಿಲ್ಲ. ಆದರೆ ಮಳೆ ಬಂದಾಗ ಕೊಡೆ ಯಿಂದ ಮಳೆಯನ್ನು ನಿಲ್ಲಿಸಲು ಆಗದೇ ಇರಬಹುದು ಆದರೆ ಕೊಡೆಯಿಂದ ನಮ್ಮನ್ನ ರಕ್ಷಿಸಿಕೊಳ್ಳಬಹುದು ಅಲ್ವ.

ಬಹಳ ಸಲ ನಾವು ನಮ್ಮ ಬಗ್ಗೆ ಯೋಚಿಸುವ ಬದಲು ಬೇರೆಯವರು ನಮ್ಮ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾರೆ ಅವರು ನನ್ನ ಬಗ್ಗೆ ಏನು ಅಂದುಕೊಂಡು ಬಿಟ್ಟರೋ ಎನ್ನುವ ಗೊಂದಲದಲ್ಲೇ ಸಾಕಷ್ಟು ಬದುಕನ್ನು ಕಳೆದುಬಿಡುತ್ತೇವೆ. ಆದರೆ ನಮ್ಮ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ ಎನ್ನುವುದರ ಅರಿವು ನಮಗೇ ಇರುವುದಿಲ್ಲ.! ನಮ್ಮನ್ನು ಪ್ರೀತಿಸುವವರು ದ್ವೇಷಿಸುವವರು ಸಾವಿರ ಮಂದಿ ಇರಬಹುದು. ಆದರೆ ನಮಗೆ ನಾವು ಅರ್ಥವಾದಷ್ಟು ಬೇರೆಯವರಿಗೆ ಅರ್ಥ ಆಗಿರುವುದಿಲ್ಲ. ಹಾಗಾಗಿ ನಮಗೆ ನಾವೇ ನಮ್ಮ ಬೆಸ್ಟ್ ಫ್ರೆಂಡ್! ಹುಡುಕಿ ಪಡೆಯುವ ಖುಷಿ ದೇವರು ನನಗೆ ಏನನ್ನೂ ಕೊಟ್ಟಿಲ್ಲ ಎಂದುಕೊಳ್ಳುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ.

ದೇವರು ಕೊಟ್ಟಿರುವುದನ್ನು ನಾನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಂಡಿದ್ದೇನೆ ಎಂದು ಅರಿತಿದ್ದೇವಾ? ಇಲ್ಲ. ನನ್ನ ಜೊತೆ ಇದ್ದವರಲ್ಲ ಏನೆಲ್ಲಾ ಸಾಧನೆ ಮಾಡಿಬಿಟ್ರು, ನಾನು ಮಾತ್ರ ಮೂಲೆ ಗುಂಪಾಗಿಬಿಟ್ಟೆ ಅನ್ನೋದಕ್ಕಿಂತ ಐ ಆ್ಯಮ್ ದಿ ಬೆಸ್ಟ್; ಐ ಕ್ಯಾನ್ ಡೂ ಇಟ್ ಅಂತ ಯಾಕೆ ಅಂದುಕೊಳ್ಳಲ್ಲ..? ಒಬ್ಬ ಹುಡುಗ ತನ್ನ ಶಾಲಾ ಜೀವನದಲ್ಲಿ ಓದುತ್ತಿರುವಾಗ ಶಿಕ್ಷಕರು ಹೀ ಹಿಸ್ ನಾಟ್ ವರ್ತಿ ಇವನಿಂದ ಏನೂ ಸಾಧ್ಯವಿಲ್ಲ ಅಂದಾಗ ಆತ ಸುಮ್ಮನಾಗಲಿಲ್ಲ. ಸೋಲು ತಾನೇ? ಅದೇನ್ ಮಹಾ ಎಂದುಕೊಂಡಾತನೇ ಇವತ್ತು ಎಲ್ಲರಿಗೂ ಬೆಳಕನ್ನ ನೀಡಿರುವ ಒಬ್ಬ ಪ್ರಸಿದ್ಧ ವಿಜ್ಞಾನಿ! ಸಾಧ್ಯವಾದ್ರೆ ಅವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಹಾಗಂತ ನಾನು ಅಹಂಕಾರದಿಂದ ಹೇಳುತ್ತಿರುವುದಲ್ಲ.


ಹಾಗೆ ಹುಡುಕಿ ತಿಳಿಯುವುದರಲ್ಲಿಯೂ ಇರುವ ಖುಷಿ ಸಿಗಲಿ ಎನ್ನುವುದೇ ಕಾರಣ. ಕೊನೆಯದಾಗಿ ಒಂದು ಸಲ ಇವತ್ತಿನ ದಿನ ಸಾಧನೆಯ ಶಿಖರದಲ್ಲಿರುವವರನ್ನು ನೆನಪಿಸಿಕೊಳ್ಳಿ. ಅವರಿಗೇನು ಆ ಸ್ಥಾನ ಸುಲಭವಾಗಿ ಸಿಕ್ಕಿ ಬಿಟ್ಟಿದೆ ಎಂದರೆ ಸುಳ್ಳಾದೀತು. ಅವರು ನಿಮಗೆ ಇಷ್ಟವೋ ಇಲ್ಲವೋ ಎರಡನೆಯ ಮಾತು. ಇತರರ ಮಾತಿನಲ್ಲಿ ಅವರ ಬಗ್ಗೆ ತಿಳಿದಿರುವುದಕ್ಕಿಂತ ಹೆಚ್ಚಾಗಿ ಅವರ ಕುರಿತು ಅಧಿಕೃತ ಮಾಹಿತಿಗಳನ್ನು ಕಲೆಹಾಕಿ ಓದಿ. ಅವರು ಬದುಕಲ್ಲಿ ಪಟ್ಟ ಪಾಡು ಅಥವಾ ಅವರ ಜೀವನದ ಯಶೋಗಾಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅರ್ಥವಾದಾಗ ನಮ್ಮ ದಾರಿ ಸುಗಮವೆನಿಸುತ್ತದೆ.
credit: google

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!