ಒಂದು ಲಾಡ್ಜಿಗೆ ಒಬ್ಬರು ರೂಮ್ ಬುಕ್ ಮಾಡಲು ಬಂದರು. ಅವರಿಗೆ ಮೊದಲು ರೂಮ್ ನೋಡಬೇಕಾಗಿತ್ತು. ಅದಕ್ಕೆ ಅಲ್ಲಿನ ಮ್ಯಾನೇಜರ್ ಕೇಳಿದಂತೆ 500 ರೂ. ಡಿಪಾಸಿಟ್ ನೀಡಿ ರೂಮು ನೋಡಲು ತೆರಳಿದರು.ತನ್ನಲ್ಲಿ ಬಂದ 500 ರೂ. ವನ್ನು ಮ್ಯಾನೇಜರ್ ಕಸ ಗುಡಿಸುವಳನ್ನು ಕರೆದು ಅವಳ ಕಳೆದ ತಿಂಗಳ ಸಂಬಳದ ಬಾಕಿ ನೀಡಿದ.
ಅವಳದನ್ನು ಹತ್ತಿರದ ಕ್ಯಾಂಟಿನ್ ಗೆ ಹೋಗಿ ತನ್ನ ತಿಂಗಳ ಲೆಕ್ಕ ಚುಕ್ತ ಗೊಳಿಸಿದಳು.ಕ್ಯಾಂಟಿನ್ ನ ಮಾಲೀಕ ಅದನ್ನು ಅಲ್ಲೇ ಇದ್ದ ಹಾಲಿನವನಿಗೆ ನೀಡಿ ಬಾಕಿಗೆ ಜಮಾ ಮಾಡುವಂತೆ ಹೇಳಿದ.ಹಾಲಿನವ ಸಂತೋಷದಿಂದ ಲಾಡ್ಜಿನ ಪಕ್ಕದಲ್ಲಿರುವ ಪಶು ವೈಧ್ಯರಲ್ಲಿ ಹೋಗಿ ಕಳೆದ ವಾರ 2000 ರೂ. ಚಿಲ್ಲರೆ ಇಲ್ಲದ ಕಾರಣ ಔಷದ ಹಣದಲ್ಲಿ 500 ರೂ.ಬಾಕಿ ಕೂಡ ಬೇಕಿತ್ತು ಎಂದು ಹೇಳಿ ಕೊಟ್ಟ.
ವೈದ್ಯ ಕೂಡಲೇ 500 ರೂ. ಲಾಡ್ಜಿನ ಮ್ಯಾನೇಜರರಿಗೆ ನೀಡಿ ತನ್ನ ರೂಮ್ ಬಾಡಿಗೆಯ ಬಾಕಿ ನೀಡಿ ಮುಗುಳ್ನಗೆ ಬೀರಿದ.ಅಷ್ಟರಲ್ಲಿ ಗ್ರಾಹಕ ತನಗೆ ರೂಮ್ ಇಷ್ಟವಾಗಿಲ್ಲ ಎಂದು ತಾನು ನೀಡಿದ ತನ್ನ 500 ರೂ. ಮ್ಯಾನೇಜರನಿಂದ ಹಿಂಪಡೆದ.ನೋಟು ತಿರುಗಿ ಗ್ರಾಹಕನ ಕೈಗೇ ಬಂತು. ಅದರೆ ಅದು ಸಂಚಾರ ಮಾಡಿದ ದಾರಿಯಲ್ಲಿ ಹಲವು ರೀತಿಯ ಸಾಲವನ್ನು ತೀರಿಸಿತು….
ಜೀವವಿರದ ಒಂದು ಬೆಲೆಯುಳ್ಳ ಕಾಗದದ ಚೂರು ಎಲ್ಲರ ಸಾಲಗಳನ್ನು ತೀರಿಸಿ ಅವರ ಮೊಗದಲ್ಲಿ ನಿಶ್ಚಿಂತೆಯ ನಗುವನ್ನು ತರಿಸಲು ಕಾರಣವಾದರೆ…. ಜೀವವಿರುವ ನಾವುಗಳು ಎಷ್ಟು ಮೊಗಗಳಲ್ಲಿ ನಗೆಯನ್ನು ತರಿಸಲು ಕಾರಣವಾಗಿದ್ದೇವೆ…. ಯೋಚಿಸುವ ಪರಿ ನಮಗೆ ಬಿಟ್ಟದ್ದು…….
Credit: whatsapp