ಬೆಂಗಳೂರು ಯಲಹಂಕದಲ್ಲಿ ಏರ್ ಶೋ 2019 ರಲ್ಲಿ ಪ್ರದರ್ಶನ ನೀಡುವ ಸಲುವಾಗಿ ತಾಲಿಮು ನಡೆಸುತ್ತಿದ್ದ 2ಸೂರ್ಯ ಕಿರಣ್ ವಿಮಾನಗಳು ಅಪಘಾತವಾಗಿವೆ. ಜನ ವಸತಿ ಪ್ರದೇಶದ ಪಕ್ಕದಲ್ಲೇ ಇದು ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ.
ಆಕಾಶದಲ್ಲಿ 2ಸೂರ್ಯಕಿರಣ್ ವಿಮಾನಗಳು ಸಾಹಸ ಪ್ರದರ್ಶನದ ತಾಲಿಮು ನಡೆಯ ಬೇಕಾದರೆ ವಿಮಾನಗಳು ಡಿಕ್ಕಿಯಾಗಿವೇ ಕೂಡಲೇ ಇಬ್ಬರು ಪೈಲೆಟ್ ಒಬ್ಬ ಕೋ ಪೈಲೆಟ್ ಪ್ಯಾರ್‍ಜ್ಯೂಟ್ ಮೂಲಕ ಜಿಗಿದಿದ್ದು, ಓರ್ವ ಪೈಲೆಟ್ ದುರ್ಮರಣ ಹೊಂದಿದ್ದಾರೆ.
ಹೆಚ್‍ಎಎಲ್ ನಿರ್ಮಿಸಿರುವ ಸೂರ್ಯಕಿರಣ್ ವಿಮಾನಗಳು. ಏರ್ ಶೋ 2019ರಲ್ಲಿ ಅತ್ಯಂತ ಆಕರ್ಷಿಣಿಯ ಪ್ರದರ್ಶನವನ್ನು ನೀಡುತ್ತವೆಂದು ಭಾವಿಸಲಾಗಿತ್ತು ದುರದೃಷ್ಟವಶಾತ್ ಪೂರ್ವಭಾವಿ ತಾಲೀಮ ನಡೆಸುವ ವೇಳೆ ಈ ಅಪಘಾತ ಸಂಭವಿಸಿ ಏರ್ ಶೋ 2019 ಪ್ರದರ್ಶನಕ್ಕೆ ಕರಿ ಛಾಯೆ ಆವರಿಸಿದೆ.