ಸುದ್ದಿ

ಹುತಾತ್ಮ ಯೋಧರ ಕುಟುಂಬದ ನೆರವಿಗೆ ಧಾವಿಸಿದ ಸುಧಾಮೂರ್ತಿ ಅಮ್ಮ!

ಫೆಬ್ರವರಿ 14ರಂದು ಪುಲ್ವಾಮದಲ್ಲಿ ನೀಚ ಉಗ್ರರ ಆತ್ಮಹುತಿ ಬಾಂಬ್ ದಾಳಿಗೆ ಸಿ.ಆರ್.ಪಿ.ಎಫ್ ನ 44 ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ಇಡಿ ದೇಶವೇ ಕಂಬನಿ ಮಿಡಿಯುತ್ತಿದೆ. ಭಾರತೀಯರ ಹೃದಯದಲ್ಲಿ ಕಿಚ್ಚಿನ ಜ್ವಾಲೆ ಹತ್ತಿ ಉರಿಯುತ್ತದೆ. ಈ ಘಟನೆಯಿಂದ ಪ್ರತಿಯೊಬ್ಬ ಭಾರತೀಯನ ಕಣ್ಣಂಚಲ್ಲಿ ನೋವಿನ ಕಣ್ಣೀರು ಜೀನುಗುತ್ತಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಿನ ಮಹಾಪುರವೇ ಹರಿದು ಬರುತ್ತಿದೆ.

ಇನ್ಪೋಸಿಸ್ ಫೌಂಡೇಷನ್ ನ ಸುಧಾಮೂರ್ತಿ ಅಮ್ಮ ಸಹ ನೆರವಿಗೆ ದಾವಿಸಿದ್ದಾರೆ. ಈ ಹಿಂದೆಯೂ ಹುತಾತ್ಮ ಸೈನಿಕರ ನೆರವಿಗೆ ದಾವಿಸಿದ್ದ ಸುಧಾಮೂರ್ತಿಯವರು ಈ ಭಾರಿಯೂ ಹುತಾತ್ಮ ಕುಟುಂಬಗಳಿಗೆ 10 ಲಕ್ಷ ನೆರವನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.


ಶ್ರೀಮತಿ ಸುಧಾಮೂರ್ತಿಯವರು ಸರಳತೆಗೆ ಮತ್ತೊಂದು ಹೆಸರು ಅವರು ಎಂದು ಶ್ರೀಮಂತಿಕೆಯಿಂದ ಬೀಗಿದವರಲ್ಲ! ಎಲ್ಲಿ ನೋವಿದೆಯೋ ಅಲ್ಲಿ ತಮ್ಮ ಸ್ಪಂದನೆಯಿದೆ ಎಂದು ತೋರಿಸಿಕೊಟ್ಟವರು. ಕರ್ನಾಟಕದ ಮಡಿಕೇರಿಯಲ್ಲಿ ಪ್ರವಾಹದಿಂದ ಮನೆಕಳೆದುಕೊಂಡವರಿಗೂ ಸಹಾಯ ಹಸ್ತ ಚಾಚಿದವರು ಸುಧಾಮೂರ್ತಿ ಅಮ್ಮ.

ಹುತಾತ್ಮ ಯೋಧ ಕುಟುಂಬಗಳು ನೋವಿನ ದು:ಖದಲ್ಲಿರುತ್ತವೆ. ಸಾಕಷ್ಟು ಜನರು ಅವರ ಮನೆಗಳಿಗೆ ಭೇಟಿ ನೀಡಿತ್ತಿರುತ್ತಾರೆ. ಅವರಿಗೂ ಸಮಾಧಾನ ಮಾಡಿಕೊಳ್ಳಲು ಸಮಯ ಬೇಕು. ಮಾರ್ಚ್ 15, 2019ರ ಒಳಗೆ ನಮ್ಮ ಫೌಂಡೇಷನ್ ವತಿಯಿಂದ ಹುತಾತ್ಮ ಯೋಧರ ಕುಟುಂಬಗಳಿಗೆ 10 ಲಕ್ಷ ಚೆಕ್‍ಗಳನ್ನು ವಿತರಿಸಲಾಗುವುದೆಂದು ತಿಳಿಸಿದ್ದಾರೆ. ಯೋಧ ಗುರು ಕುಟುಂಬಕ್ಕೆ ಖುದ್ದಾಗಿ ಭೇಟಿ ನೀಡಿ ಸಾಂತ್ವನ ಹೇಳುವುದಾಗಿ ತಿಳಿಸಿದ ಸುಧಾಮ್ಮ ನೊಂದ ಜೀವಗಳಿಗೆ ಸಹಾಯ ಹಸ್ತ ನೀಡುವ ಮೂಲಕ ಪುಟ್ಟ ಅಳಿಲು ಸೇವೆ ಎಂದು ತಿಳಿಸಿದರು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!