ಮಂಡ್ಯ ಜಿಲ್ಲೆಯ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸುಮಲತಾ ಅಂಬರೀಶ್‍ರವರು ನೆರವು ಘೋಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಚಿತ್ರಿಕರಣಕ್ಕಾಗಿ ಮಲೆಷ್ಯಾಗೆ ತೆರಳಿರುವ ಸುಮಲತಾ ಅಂಬರೀಶ್‍ರವರು ಹುತಾತ್ಮ ಗುರು ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದು, ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವುದಾಗಿ ಘೋಷಿಸಿದ್ದಾರೆ.
ಅಂಬರೀಶ್ ಹುಟ್ಟೂರಾದ ದೊಡ್ಡರಸಿಕೆರೆಯಲ್ಲಿರುವ ಅರ್ಧ ಎಕರೆ ಜಮೀನು ನೀಡುವುದಾಗಿ ಮಲೆಷ್ಯಾದಿಂದಲೇ ವಿಡಿಯೋ ಮೂಲಕ ತಿಳಿಸಿರುವ ಸುಮಲತಾ ಅಂಬರೀಶ್ ಹುತಾತ್ಮ ಯೋಧರ ಕುಟುಂಬವನ್ನು ಮಲೆಷ್ಯಾದಿಂದ ಬಂದ ನಂತರ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಹುತಾತ್ಮ ಗುರು ಕುಟುಂಬಕ್ಕೆ ನನ್ನದೊಂದು ಪುಟ್ಟ ಅಳಿಲು ಸೇವೆ ಅಷ್ಟೇ ಎಂದು ತಿಳಿಸುವ ಮೂಲಕ ಕಲಿಯುಗ ಕರ್ಣ ಮಂಡ್ಯದ ಗಂಡು ಅಂಬರೀಶ್‍ರವರ ಧರ್ಮಪತ್ನಿಯಾಗಿ ಮಂಡ್ಯ ಸೊಸೆಯಾಗಿ ಮಾನವೀಯತೆಯ ಸಹಕಾರ ಹಸ್ತ ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇನ್ನು ರಾಜ್ಯ ಸರ್ಕಾರ 25 ಲಕ್ಷ ರೂ.ವನ್ನು ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೀಡುವುದಾಗಿ ಹೇಳಿದೆ. ಜೊತೆಗೆ ಗುರು ಅವರ ಹೆಂಡತಿಗೆ ಸರ್ಕಾರಿ ನೌಕರಿ ನಿಡುವುದಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಭರವಸೆ ನೀಡಿದ್ದಾರೆ.