ಸುದ್ದಿ

ಎಲ್.ಐ.ಸಿ. ಮಾನವೀಯತೆ! ಗುರು ಯೋಧನ ವಿಮೆ ಮೊತ್ತ ಅವರ ಕುಟಂಬಕ್ಕೆ.

ಫೆಬ್ರವರಿ 14ರಂದು ಪುಲ್ವಾಮದಲ್ಲಿ ನೀಚ ಉಗ್ರರ ಆತ್ಮಹುತಿ ಬಾಂಬ್ ದಾಳಿಗೆ ಸಿ.ಆರ್.ಪಿ.ಎಫ್ ನ 44 ಯೋಧರು ಹುತಾತ್ಮರಾಗಿದ್ದು, ಈ ಘಟನೆಗೆ ಇಡಿ ದೇಶವೇ ಕಂಬನಿ ಮಿಡಿಯುತ್ತಿದೆ. ಭಾರತೀಯರ ಹೃದಯದಲ್ಲಿ ಕಿಚ್ಚಿನ ಜ್ವಾಲೆ ಹತ್ತಿ ಉರಿಯುತ್ತದೆ. ಈ ಘಟನೆಯಿಂದ ಪ್ರತಿಯೊಬ್ಬ ಭಾರತೀಯನ ಕಣ್ಣಂಚಲ್ಲಿ ನೋವಿನ ಕಣ್ಣೀರು ಜೀನುಗುತ್ತಿದೆ.

ಹುತಾತ್ಮರಾದ 44 ಯೋಧರಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಯೋಧ ಗುರು ಅವರು ಕೂಡ ವೀರಮರಣವನ್ನು ಹೊಂದಿದ್ದಾರೆ. ಕಳೆದ 6 ತಿಂಗಳ ಹಿಂದೆ ವಿವಾಹವಾಗಿದ್ದ ಗುರುವಿನ ಹುತಾತ್ಮರಾದ ಸುದ್ಧಿ ಅವರ ಕುಟುಂಬಕ್ಕೆ ಬರಸೀಡಿಲು ಬಡಿದಂತಾಗಿದೆ.


ಜೀವ ವಿಮಾ ನಿಗಮ ಕಂಪನಿ ಯೋಧ ಗುರು ಹುತಾತ್ಮರಾದ ಸುದ್ಧಿ ತಿಳಿದು ಕೂಡಲೇ ಯಾವ ದಾಖಲೇಯನ್ನು ಕೇಳದೆ ಅವರ ಮರಣದಾವೆ ಮೊತ್ತವನ್ನು ನಾಮಿನಿ ಹೆಸರಿಗೆ ಸಂದಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದೆ. ವಿಮೆ ಕಂಪನಿಯ ಈ ಕಾರ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಈ ಕೃತ್ಯ ಎಸಗಿದ ನೀಚ ಉಗ್ರರ ದಮನವಾಗಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ.
ಜೈ ಹಿಂದ್,

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!