ಸ್ಫೂರ್ತಿಯಾನ

ಬದಲಾವಣೆ ನಮ್ಮಿಂದಲೇ ಶುರುವಾಗಲಿ. ಒಂದೊಳ್ಳೆ ಸುದ್ದಿ ಓದಿ

ಮನುಷ್ಯ ಬದುಕಲು ಒಂದಿಲ್ಲೊಂದು ಕಾಯಕ ಮಾಡುವುದು ಮಾಮೂಲಿ ಸುದ್ದಿ. ಕೆಲವೊಮ್ಮೆ ಮಾಡುವ ಕೆಲಸದಲ್ಲಿ ಶ್ರದ್ದೆ ವಿಶೀಷ್ಟತೆ ಇದ್ದರೆ ಆ ಕಾಯಕ ಶ್ರೇಷ್ಟವಾಗುತ್ತದೆ ಜೊತೆಗೆ ಆತ್ಮತೃಪ್ತಿಯು ಸಿಗುತ್ತದೆ. ಇಲ್ಲೊಬ್ಬ ತನ್ನ ಕಟಿಂಗ್ ಶಾಪ್‍ನಲ್ಲಿ ಟಿ.ವಿ. ಬದಲು ಪುಸ್ತಕಗಳ ಲೈಬ್ರರಿ ಮಾಡಿ ರಿಯಾಯಿತಿ ದರದಲ್ಲಿ ಕಟಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದಾನೆ.

ಪ್ರತಿಯೊಬ್ಬರೂ ಸಲೂನ್ /ಕಟಿಂಗ್ ಶಾಪ್‍ಗಳಿಗೆ ಹೋಗಿರುತ್ತೀರಿ ಅಲ್ಲಿ ಜಗಮಗಿಸುವ ಲೈಟು, ಅವರಿಗೆ ಇಷ್ಟಬಂದ ಸಾಂಗು, ಹೀಗೆ ತಮ್ಮ ತಮ್ಮ ಅಭಿರುಚಿಗಳಿಗೆ ತಕ್ಕ ಹಾಗೆ ತಮ್ಮ ಶಾಪ್‍ಗಳನ್ನು ಸಿದ್ದಪಡಿಸಿ ಜನರಿಗೆ ಸೇವೆ ಒದಗಿಸುತ್ತಾರೆ. ಆದರೆ ಮಾಡುವ ಕೆಲಸದ ಜೊತೆ ಒಂದೊಳ್ಳೆ ಕೆಲಸ ಮಾಡಬೇಕೆಂಬ ಬಯಕೆ ಕೆಲವರಿಗೆ ಇರುತ್ತದೆ. ತಮಿಳುನಾಡಿನ ಈ ಯುವಕ ತನ್ನ ಕಟಿಂಗ್ ಶಾಪ್ ನಲ್ಲಿ ಟಿ.ವಿ. ಬದಲು ಪುಸ್ತಕಗಳ ಲೈಬ್ರರಿ ತೆರೆದು ಅಲ್ಲಿ ಓದುವ ವ್ಯಕ್ತಿಗಳಿಗೆ 30% ರಿಯಾಯಿತಿಯನ್ನು ನೀಡಿದ್ದಾರೆ. ಇದರಿಂದ ಕಾಯಕದಲ್ಲಿ ಯಶಸ್ಸು ಮತ್ತು ಸಮಾಜಕ್ಕೊಂದು ಉತ್ತಮ ಕೆಲಸ ಮಾಡಿದ ಆತ್ಮತೃಪ್ತಿ ಈ ಹುಡುಗನಿಗೆ ಸಿಕ್ಕಿದೆ.

ನಂಜನಗೂಡಿನ ಹಲ್ಲುಪುಡಿಗೆ 106 ವರ್ಷ.

ಎಲ್ಲವನ್ನೂ ಸರ್ಕಾರಗಳೇ ಮಾಡಬೇಕು, ಅದು ಸರಿಯಿಲ್ಲ ಇದು ಸರಿಯಿಲ್ಲ ಎಂಬ ಗೊಣಗುವ ಮನಸ್ಸುಗಳ ನಡುವೆ ನಮ್ಮಿಂದಲೇ ಏನಾದರು ಸಣ್ಣ ಬದಲಾವಣೆ ತರುವ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ಕೊಡಬಹುದು ಎಂಬುದಕ್ಕೆ ಈ ಕಟಿಂಗ್ ಶಾಪ್ ಒಂದು ಉದಾರಣೆ ಅಷ್ಟೇ. ಈ ರೀತಿ ಸಾಕಷ್ಟು ಜನ ನಮ್ಮ ನಡುವೆ ಇದ್ದಾರೆ. ಅಂತವರಿಗೊಂದು ಸಲಾಮ್ ಹೇಳೋಣ. ಬದಲಾವಣೆ ನಮ್ಮಿಂದಲೇ ಶುರುವಾಗಲಿ. ಏನಂತೀರಾ? ಈ ಲೇಖನವನ್ನು ಶೇರ್ ಮಾಡಿ ಲೈಕ್ ಮಾಡಿ ನಮಸ್ಕಾರ.

-ನವೀನ್ ರಾಮನಗರ

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!