ಸಾಧನೆ ಮಾಡುವ ಛಲ ಹಠ ಇದ್ರೆ ಖಂಡಿತ ಯಶಸ್ಸಿನ ದಾರಿಯಲ್ಲಿ ಮುಟ್ಟಬಹುದ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ಆರ್ಥಿಕ ಪರಿಸ್ಥಿತಿ ಕಾಡುತ್ತಿದ್ದರು ಕೂಡ ತಂದೆಯ ಆಸೆಯಂತೆ ದೊಡ್ಡ ಹುದ್ದೆಯನ್ನು ಸ್ವೀಕರಿಸಿದ ಹೆಣ್ಣು ಮಗಳು. ಅವರ ತಂದೆ ಸಮಾಜಕ್ಕಾಗಿ ಹಾಗೂ ಬಡ ಜನರಿಗಾಗಿ ಕೆಲಸ ಮಾಡಬೇಕು ಅನ್ನೋ ಅಸೆಯನ್ನು ತಿಳಿದ ಮಗಳು ಯಶಸ್ಸಿನ ಹಾದಿಯ ಮೂಲಕ ತೋರಿಸಿದ್ದಾರೆ.
ಅಷ್ಟಕ್ಕೂ ಅವರು ಯಾರು ಅನ್ನೋದನ್ನ ತಿಳಿಯುವುದಾದರೆ ಅವರು ಒಬ್ಬ ಸಾಮಾನ್ಯ ಕಿರಾಣಿ ಅಂಗಡಿಯವರ ಮಗಳು ಅವರ ಹೆಸರು ಶ್ವೇತ ಅಗರ್ವಾಲ್ ಇವರು 2015ರಲ್ಲಿ ಯು ಪಿ ಎಸ್ಸಿ ಪರೀಕ್ಷೆಯಲ್ಲಿ 19ನೇ ಸ್ಥಾನ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗಬೇಕೆಂಬ ಅವರ ಕನಸನ್ನು ನನಸು ಮಾಡಿಕೊಂಡವರು ಶ್ವೇತ ಅವರು ಯು ಪಿ ಎಸ್ಸಿಯ ಮಹಿಳಾ ಮೂರು ಟಾಪರ್ ಗಳಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
ಇನ್ನು ಶ್ವೇತ ಅವರು ವಿದ್ಯಾಭ್ಯಾಸಕ್ಕೆ ತಂದೆ ತಾಯಿ ಹಲವು ಬಾರಿ ಕೋಲಿ ಕೆಲಸ ಮಾಡಿ ಮಗಳನ್ನು ಓದಿಸಿದ್ದಾರೆ. ಹೀಗೆ ಮನೆಯಲ್ಲಿ ತುಂಬನೇ ಕಷ್ಟದ ಪರಿಸ್ಥಿತಿ ಬಂದಾಗ ಅವರನ್ನು ಶಾಲೆ ಬಿಟ್ಟು ಬಿಡು ನಿನ್ನನ್ನು ಓದಿಸಲು ಅಗುವುದಿಲ್ಲ ಎಂದು ಹೇಳಿದಾಗ ,ಅವರು ಅವರ ತಂದೆ ತಾಯಿಗೆ ಧೈರ್ಯ ಹೇಳಿ ನಾನು ಈ ಕುಟುಂಬದ ಮೊದಲ ಪದವೀಧರೆಯಾಗುತ್ತೇನೆ ಎಂದು ಹೇಳಿರುತ್ತಾರೆ. ಅವರು ಹೇಳಿದಂತೆ ಪದವೀಧರೆಯಾದರು.
ಶ್ವೇತ ಅವರು ತಮ್ಮ ವಿದ್ಯಾಭ್ಯಾಸದ ಕುರಿತಾಗಿ ಪದವಿಯಲ್ಲಿ ಉತ್ತಮ ರ್ಯಾಂಕ್ ನಲ್ಲಿ ಪಾಸು ಮಾಡಿದ ಶ್ವೇತ ಅವರು ಬಳಿಕ ಎಂ ಬಿ ಎ ಮಾಡಿ ಅಂತರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತ ಐಎಎಸ್ ಗಾಗಿ ತಯಾರಿ ನಡೆಸಿದ್ದರು. ಎರಡು ಪ್ರಯತ್ನಗಳಲ್ಲಿ ಯುಪಿಸ್‍ಸಿ ಪಾಸ್ ಮಾಡಿದ್ದರೂ ಐಎಎಸ್ ಸಿಗಲ್ಲಿಲ್ಲ. ಆದರೆ ಅಷ್ಟಕ್ಕೆ ತೃಪ್ತಿಯಾಗದೆ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಕೈ ಬಿಡದೆ ಮೂರನೆಯ ಬಾರಿ 19 ನೇ ರ್ಯಾಂಕ್‍ನಲ್ಲಿ ಪಾಸ್ ಮಾಡಿ ಪ್ರಸ್ತುತ ಐಎಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತದ್ದಾರೆ, ಅದೇನೇ ಅಗಲಿ ಸಾಧಿಸುವ ಶ್ರಮ ಇದ್ದಾರೆ ಖಂಡಿತ ಯಶಸ್ಸು ಅನ್ನೋದು ಸಿಕ್ಕೇ ಸಿಗುತ್ತದೆ.