ಸ್ಫೂರ್ತಿಯಾನ

ನೂತನ ವರ್ಷಕ್ಕೊಂದು ಆತ್ಮೀಯ ಪತ್ರ! ಓದಿ. ಹೊಸ ವರ್ಷದ ಶುಭಾಶಯಗಳು 2024

2023ಕ್ಕೆ ವಿದಾಯ ಹೇಳಿ 2024 ನೂತನ ವರ್ಷವನ್ನು ಎಲ್ಲರೂ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದೇವೆ. ವರ್ಷಗಳು ದಿನಗಳ ಹಾಗೆ ಕಳೆದು ಹೋಗುತ್ತಿರುವುದನ್ನು ನಾವು ಗಮನಿಸಿರುವುದೇ ಇಲ್ಲ! ಹೌದು ಮನುಷ್ಯ ತಂತ್ರಜ್ಞಾನಗಳ ಆವಿಷ್ಕಾರ ಮಾಡಲು ಪ್ರಾರಂಭ ಮಾಡಿದ ಮೇಲಂತೂ ಸಮಯ ಕಳೆದುಹೋಗುತ್ತಿರುವುದೇ ಗೊತ್ತಾಗುತ್ತಿಲ್ಲ. ವಾಟ್ಸ್‍ಪ್ ಫೇಸ್‍ಬುಕ್ ಇನ್‍ಸ್ಟಾಗ್ರಾಂ ಬೆರಳ ತುದಿಯಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಸುಲಭವಾಗಿ ಹತ್ತಿರವಾಗಿಸುತ್ತಿದೆ. ದುರಂತವೆಂದರೆ ಹತ್ತಿರ ಇರುವ ಸಂಬಂಧಗಳನ್ನು ದೂರಮಾಡುತ್ತಿರುವುದು ಇವುಗಳೇ ಎಂಬುದನ್ನು ಯೋಚಿಸದಷ್ಟು ಸಮಯವೂ ಇಲ್ಲದ ಹಾಗೇ ಸೋಷಿಯಲ್ ಮಿಡಿಯಾಗಳನ್ನು ಬಳಸುತ್ತಿರುವುದು ಸಂಬಂಧಗಳ ಮಧ್ಯೆ ಗೊಡೆಗಳು ಹುಟ್ಟಲು ಕಾರಣವಾಗುತ್ತಿದೆ.


ನೂತನ ವರ್ಷ ಹೊಸ ಹೊಸ ರೆಸ್ಯೂಲೇಷನ್‍ಗಳನ್ನು ಪ್ರತಿಯೊಬ್ಬರು ಮಾಡಿಕೊಂಡಿರುತ್ತೇವೆ. ಆದರೆ ಅದು ಕೇವಲ ರೆಸ್ಯೂಲೇಷನ್‍ಗಳಾಗೇ ಉಳಿದು ಬಿಡುತ್ತವೆ!? ಸಮಯ ಗೊತ್ತಿಲ್ಲದಂತೆ ಸರಿದುಹೋಗುತ್ತಲೇ ಇರುತ್ತದೆ. ನಾವು ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳದೇ ಕನಸುಗಳಲ್ಲೇ ಭ್ರಮರ ಲೋಕದಲ್ಲೇ ಕಾಲವನ್ನು ತಳ್ಳುತ್ತಿರತ್ತೇವೆ. ಪ್ರತಿಯೊಬ್ಬ ಮನುಷ್ಯ ಜೀವಿಗೂ ಏನಾನ್ನಾದರೂ ಸಾಧಿಸಲು ಬದುಕು ಸಾಕಷ್ಟು ಅವಕಾಶಗಳನ್ನು ಕೊಡುತ್ತೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಎಲ್ಲರಂತೆ ನಾನೂ ಒಬ್ಬ ಎಂಬಂತೆ ಉಳಿಯಬೇಕಾಗುತ್ತದೆ.

ಬದುಕು ಎಂಬುದು ಪ್ಯಾಕೇಜ್ ಟೂರ್ ಇದ್ದಂತೆ ಇಲ್ಲಿ ಹುಟ್ಟಿದ ಮೇಲೆ ಟೂರ್ ಪ್ರಾರಂಭವಾದಂತೆ ಬದುಕಿದ್ದಷ್ಟು ದಿನ ಬದುಕೆಂಬ ಟೂರ್‍ನ್ನು ಎಷ್ಟು ಎಂಜಾಯ್ ಮಾಡುತ್ತೇವೆ ಏನು ಸಾಧಿಸುತ್ತೇವೆ ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಟೂರ್(ಬದುಕು) ನ ಗುಣಮಟ್ಟ ನಿರ್ಧಾರವಾಗುತ್ತದೆ. ಎಲ್ಲರೂ ಪ್ಯಾಕೇಜ್ ಟೂರ್ ಮುಗಿಸಿ ತೆರಳಲೆಬೇಕು! ಆಗಾಗಿ ಬದುಕೆಂಬ ಸುಂದರ ಟೂರ್‍ನ್ನು ಎಲ್ಲರೂ ಅನುಭವಿಸಿ ಸುಂದರ ವಾಗಿಸಿಕೊಳ್ಳಿ. ಹಣ ಮಾತ್ರ ಸಂಪಾದನೇ ಮಾಡಿದರೆ ಶ್ರೀಮಂತರಾಗುತವುದಿಲ್ಲ! ಆದರ ಜೊತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಆಗಲೇ ಬದುಕು ಶ್ರೀಮಂತವಾಗುವುದು ಎಂಬ ಅರಿವಿರಲಿ!.
ನೂತನ ವರ್ಷ 2024 ಎಲ್ಲರಿಗೂ ಶುಭವನ್ನು ತರಲಿ. ನಿಮ್ಮ ಕನಸುಗಳು ನನಸಾಗಲಿ. ಆರೋಗ್ಯ ಆಯುಷ್ಯವನ್ನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಭಗವಂತ ಕರುಣಿಸಲಿ.

ಹೊಸ ವರ್ಷದ ಶುಭಾಶಯಗಳೊಂದಿಗೆ,

ಪ್ರೀತಿಯಿಂದ,
ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!