ಸ್ಫೂರ್ತಿಯಾನ

ತಾಯಿ ಋಣ- ತಿರಿಸಲಾಗದ ಋಣ

ಒಬ್ಬ ಯುವಕನು ಮಾತೃ ಋಣವನ್ನು ತೀರಿಸಲೆಂದು ಒಂದು ಲಕ್ಷ ಬಂಗಾರದ ನಾಣ್ಯಗಳನ್ನು ಸೇರಿಸಿ ತಾಯಿಗೆ ಕೊಟ್ಟು ಅಮ್ಮ ಈ ಬಂಗಾರದ ನಾಣ್ಯಗಳಿಂದ ನಿನಗೆ ಇಷ್ಟವಾದದನ್ನು ಮಾಡಿಸೋಕೋ. ಇದರಿಂದ ನನಗೆ ತಾಯಿ ಋಣದಿಂದ ಮುಕ್ತಿ ಸಿಗುತ್ತದೆ ಅನ್ನುತ್ತಾನೆ.ತಾಯಿ ಮುಗುಳು ನಗುತ್ತ ತಾಯಿ ಹೀಗೆ ಹೇಳಿದಳು.ಮಗು, ನನ್ನ ಋಣ ತೀರಿಸಲು ಈ ಹಣ ನನಗೆ ಬೇಡ, ನೀನು ಒಂದು ದಿನ ರಾತ್ರಿ ನನ್ನ ಬಳಿ ಮಲಗಿಕೊ ಸಾಕು ಅಂತ ಹೇಳಿದರು.

ತಾಯಿ ಹೇಳಿದಂತೆ ಮಗನು ಸರಿ ಎಂದು ತಾಯಿಯ ಮಂಚದ ಬಳಿ ಮಲಗುತ್ತಾನೆ.ಮಗನು ನಿದ್ರೆಗೆ ಜಾರುತ್ತಾನೆ ಆಗ ತಾಯಿ ಮಗನೇ ನನಗೆ ದಾಹ ಆಗುತ್ತಿದೆ ಸ್ವಲ್ಪ ನೀರು ಕುಡಿಸು ಅಂತ ಹೇಳುತ್ತಾಳೆ. ಮಗನು ಸಂತೋಷದಿಂದ ಎದ್ದು ಗ್ಲಾಸಿನಿಂದ ತಾಯಿಗೆ ನೀರನ್ನು ಕುಡಿಸುತ್ತಾನೆ. ತಾಯಿ ಎರಡು ಗುಟುಕು ನೀರನ್ನು ಕುಡಿದು ಗ್ಲಾಸು ಪಕ್ಕಕೆ ಜಾರಿ ಬೀಳುತ್ತದೆ. ಮಗನು ಮೌನದಿಂದ ಮಲಗುತ್ತಾನೆ.ಮತ್ತೆ ಮಗನು ನಿದ್ದೆಗೆ ಜಾರಲು ತಾಯಿ ಮತ್ತೆ ಎದ್ದು ಮಗು ಮತ್ತೆ ಸ್ವಲ್ಪ ನೀರು ಕುಡಿಸು ಅಂತ ಕೇಳುತ್ತಾಳೆ ಮಗನು ಮತ್ತೆ ಎದ್ದು ನೀರು ಕುಡಿಸಲು ತಾಯಿ ಮತ್ತೆ ನೀರು ಚೆಲ್ಲಿ ಹಾಸಿಗೆ ಎಲ್ಲ ಒದ್ದೆಯಾಗುತ್ತದೆ. ಮಗ ತಾಯಿಯನ್ನು ಏನು ಮಾಡಿದೆಯಮ್ಮ ಅಂತ ಪ್ರಶ್ನಿಸಿದ, ಅದಕ್ಕೆ ತಾಯಿ ಅಕಸ್ಮಾತ್ತಾಗಿ ಆಯಿತು ಮಗು ಅಂತ ಹೇಳಿದಳು.

ಸ್ವಲ್ಪ ಸಮಯದ ನಂತರ ಮತ್ತೆ ತಾಯಿ ನೀರು ಕುಡಿಸಲು ಕೇಳಿದಳು. ಅದಕ್ಕೆ ಮಗ ಕೋಪಿತನಾಗಿ ಈಗ ತಾನೇ ನೀರು ಕುಡಿದೆಯಲ್ಲ ಅಮ್ಮ ಮತ್ತೆ ಎಷ್ಟು ನೀರು ಕುಡಿಯುವೆ ನೀನೇನಾದರು ಹತ್ತಿಯ ಬೀಜಗಳನ್ನ ತಿಂದೆಯ ಅಂತ ಹೇಳಿ ನೀರನ್ನು ಕೊಟ್ಟನು.
ಮತ್ತೆ ತಾಯಿ ನೀರು ಕುಡಿಯಲು ಹೋಗಿ ನೀರು ಚೆಲ್ಲುತ್ತದೆ.ಮಗನಿಗೆ ಕೋಪ ಬಂದು ಏನಮ್ಮ ಹಾಸಿಗೆ ಎಲ್ಲ ಒದ್ದೆಯಾಗಿ ಹೋಗಿದೆ ಅಂತ ಕೋಪಿತನಾದ. ಕಣ್ಣು ಕಾಣಿಸುವುದಿಲ್ಲವೇ ಎಂದನು.

ಸ್ವಲ್ಪ ಸಮಯದ ನಂತರ ಮತ್ತೆ ತಾಯಿ ನೀರು ಕೊಡಲು ಕೇಳಿದಳು. ಅದಕ್ಕೆ ಮಗನು ನೀರನ್ನು ತಂದು ಕೊಟ್ಟು ಕುಡಿದು ಸಾಯಿ ಅಂತ ಶಪಿಸುತ್ತಾ ಕೂಗಾಡಿದ.ಆಗ ತಾಯಿ ಮಗು ಸಾಕು ಅರಚಬೇಡ. ತಾಯಿ ಋಣ ತೀರಿಸಬೇಕು ಅಂತ ಹೇಳಿದೆ. ನಿನ್ನ ತಲೆಯ ಮೇಲೆ ಎಷ್ಟು ಕೂದಲು ಇದೆಯೋ ಅಷ್ಟು ಜನ್ಮ ಎತ್ತಿದರೂ ತಾಯಿ ಋಣ ತೀರಿಸಲು ಆಗುವುದಿಲ್ಲ. ನೀನು ಚಿಕ್ಕವನಾಗಿದ್ದಾಗ ಮತ್ತೆ ಮತ್ತೆ ಮೂತ್ರ ಮಾಡುತ್ತಿದ್ದೆ. ನಿನ್ನ ಒದ್ದೆ ಬಟ್ಟೆಯನ್ನು ತೆಗೆದು ನನ್ನ ಸೀರೆಯಿಂದ ಒರೆಸಿ ನಿನ್ನನು ನನ್ನ ಜಾಗದಲ್ಲಿ ಮಲಗಿಸಿ ನಾನು ಒದ್ದೆಯ ಜಾಗದಲ್ಲಿ ಮಲಗುತ್ತಿದ್ದೆ. ಒಂದು ದಿನವಲ್ಲ, ಒಂದು ವಾರವಲ್ಲ ಒಂದು ತಿಂಗಳಲ್ಲ ಕೆಲವು ವರ್ಷಗಳೇ ನಿನ್ನನ್ನು ಹೀಗೆ ಒಬ್ಬಂಟಿಯಾಗಿ ಮಲಗುವ ವರೆಗೂ ಬೆಳೆಸಿರುವೆ. ಆದರೆ ನಾನು ಒಂದೆರಡು ಸಲ ಹಾಸಿಗೆ ಒದ್ದೆ ಮಾಡಿದಕ್ಕೆ ನೀನು ಕೋಪಗೊಂಡೆ. ಒಂದು ದಿನದ ನಿದ್ದೆ ಹಾಳಾಗಿದ್ದಕೆ ಬೇಸರವಾದೆ ಅಂದಳು ತಾಯಿ.

ಆಗ ಮಗನಿಗೆ ಮುಜುಗರವಾಗಿ ತಾಯಿಯ ಪಾದಗಳಿಗೆ ನಮಸ್ಕರಿಸಿ. ಅಮ್ಮ ನನ್ನ ಕಣ್ಣು ತೆರೆಸಿದೆ ನನ್ನನ್ನು ಕ್ಷಮಿಸು ಎಂದನು. ತಾಯಿ ತನ್ನ ಮಕ್ಕಳಿಗೆ ಬೆಳೆಸಲು ಎಷ್ಟು ಕಷ್ಟ ಪಡುವಳು ಅನ್ನುವ ಅರಿವಾಯಿತು.ಮಗನು ನಾನೇ ಅಲ್ಲ ಈ ಲೋಕದಲ್ಲಿ ಯಾರೇ ಆಗಲಿ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ.

Credit: whatsapp

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!