ಸ್ಫೂರ್ತಿಯಾನ

ಡಬಲ್ ಡೋರ್ ಬ್ಲಾಕ್ ಅಂಡ್ ವೈಟ್ ಟಿ.ವಿ ನೋಡಿದ ನೆನಪಿದಿಯಾ?

1980 ರಿಂದ 1990ಇಸವಿಯ ದಿನಗಳಿರಬೇಕು ವಿಜ್ಞಾನ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಬ್ಲಾಕ್ ಅಂಡ್ ವೈಟ್ ಟಿವಿಯ ಕಾಲ ಅದು. ಪ್ರತಿಯೊಬ್ಬರ ಮನೆಯಲ್ಲೂ ಟಿ.ವಿ ಇರಲಿಲ್ಲ ಉಳ್ಳವರು ಅಂದರೆ ಶ್ರೀಮಂತರು, ಹಳ್ಳಿಗಳಲ್ಲಿ ಪಟೇಲರು, ಶಾನುಭೊಗರು ಅಂತವರ ಮನೆಯಲ್ಲಿ ಮೊದಲು ಟಿ.ವಿ. ಬಂದಿದ್ದು.

ಹೌದು ಏಕೆ ಇಷ್ಟೇಲ್ಲ ನೆನಪಿಸುತ್ತಿದ್ದೆನೆಂದರೆ ಇತ್ತಿಚೇಗೆ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಅಂಡ್ ವೈಟ್ ಡಬಲ್ ಡೋರ್ ಟಿವಿಯ ಚಿತ್ರವೊಂದು ಸಾಕಷ್ಟು ವೈರಲ್ ಆಗಿದೆ. ಆ ಚಿತ್ರವನ್ನು ನೋಡಿದ ಪ್ರತಿಯೊಬ್ಬರು ನಮ್ಮ ನೆನಪಿನಾಳಕ್ಕೆ ಹೋಗಿ ತಮ್ಮ ಅವಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ ಆಗಾಗಿ ನಾನು ಕೂಡ ಈ ಮೂಲಕ ನನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

ಪ್ರಾಥಮಿಕ ಶಾಲೆಯ ದಿನಗಳು ಅಪ್ಪ ಬಿಬಿಎಂಪಿಯಲ್ಲಿ ಸಣ್ಣ ಸಂಬಳದ ನೌಕರರು ನಮ್ಮ ಮನೆಗೆ ಡಬಲ್ ಡೋರ್ ಬ್ಲಾಕ್ ಅಂಡ್ ವೈಟ್ ಟಿವಿಯನ್ನು ತಂದಿದ್ದರು. ಜೊತೆಗೆ ಅಂಟೇನಾ ಕೂಡ ಇತ್ತು. ಈಗಿನ ತರ ಸೆಟ್ ಅಪ್ ಬಾಕ್ಸ್ , ಕೆಬಲ್ ಸಂಪರ್ಕಗಳು ಇರಲಿಲ್ಲ!! ಮನೆಯಲ್ಲಿ ಟಿವಿ ತಂದ ಸಡಗರ ಸಂಭ್ರಮ. ದೂರದರ್ಶನದಲ್ಲಿ ಪ್ರತಿ ಶುಕ್ರವಾರ ರಾತ್ರಿ ಚಿತ್ರಮಂಜರಿ ಪ್ರಸಾರ, ನಂತರ ಭಾನುವಾರ ಚಲನಚಿತ್ರ ಯಾವುದು ಅಂತ ತಿಳಿಯುತ್ತಿತ್ತು. ಆ ಕೂತುಹಲಗಳಲ್ಲೇ ಶನಿವಾರ ಮುಗಿದು ಭಾನುವಾರ ಸಂಜೆ ಆಗುವುದನ್ನೇ ಕಾಯುತ್ತಿದ್ದೇವು. ರಾಮಾಯಣ, ಮಹಾಭಾರತ , ಶಕ್ತಿಮಾನ್ ಅನೇಕ ಧಾರವಾಹಿಗಳು ನೋಡುತ್ತಿದ್ದ ನೆನಪು. ಈ ಬ್ಲಾಕ್ ಅಂಡ್ ವೈಟ್ ಟಿವಿ ಚಿತ್ರ ನೋಡಿದ ತಕ್ಷಣ ಕಣ್ಣಮುಂದೆಯೇ ಸುಳಿದಾಡುತ್ತಿದೆ.

ನಾವು ತುಂಬಾ ಟಿವಿ ನೋಡುತ್ತಿವೆಂದು ಅಪ್ಪಾಜಿ ಲಾಕ್ ಮಾಡಿ ಕೀ ಅವರ ಬಳಿ ಇಟ್ಟುಕೊಳ್ಳುತ್ತಿದ್ದರು. ನಾವು ಐದು ಪೈಸೆ ಕಾಯಿನ್ ಇಂದ ಟಿವಿಯ ಲಾಕ್ ಓಪನ್ ಮಾಡಿ ನೋಡುತ್ತಿದ್ದೇವು. ಆ ದಿನಗಳು ಮತ್ತೇ ಎಂದಿಗೂ ಬಾರದು. ನೆನಪುಗಳಷ್ಟೇ ಉಳಿಯುವುದು. ಅಂದ ಹಾಗೇ ಕಪ್ಪು ಬಿಳುಪು ಟಿವಿಗೆ ಕಲರ್ ಗ್ಲಾಸ್ ಅಳವಡಿಸಿ ಖುಷಿಪಡುತ್ತಿದ್ದುದ್ದು ಉಂಟು. ಸಿಲ್ವರ್ ಬೋಸಿಯನ್ನು ಅಂಟೇನಾ ತರ ಮಾಡಿ ಬೇರೆ ಯಾವುದಾದರೂ ಚಾನೆಲ್ ಬರುತ್ತದ ಎಂದು ಸಂಶೋಧನೆಗಳನ್ನು ಮಾಡುತ್ತಿದ್ದೇವು. ನಂತರದ ದಿನಗಳಲ್ಲಿ ಕಲರ್ ಟಿವಿ ಪಾದರ್ಪಣೆ ಮಾಡಿ ಬ್ಲಾಕ್ ಅಂಡ್ ವೈಟ್ ಟಿವಿಗಳು ಕಣ್ಮರೇಯಾದವು.


ಹಳ್ಳಿಗಳಲ್ಲಿ ಬಾಲ್ಯ ಕಳೆದ ಎಷ್ಟೋ ಜನಕ್ಕೆ ಇನ್ನೂ ನೆನಪಿರುತ್ತದೆ. ಪಟೇಲ್ರು, ಶಾನುಭೋಗರು ಹೀಗೆ ಶ್ರೀಮಂತರ ಮನೆಯಲ್ಲಿ ಟಿವಿಗಳು ಮೊದಲು ಕಂಡುಬಂದವು. ಊರಿಗೊಂದೋ ಎರಡೋ ಟಿವಿ ಅಷ್ಟೇ ಅದನ್ನು ನೋಡಲು ಊರಿನ ಜನರು ಟಿವಿ ಇರುವ ಮನೆಗಳಿಗೆ ಚಿತ್ರಮಂದಿರಗಳಿಗೆ ಬಂದ ಹಾಗೆ ಬರುತ್ತಿದ್ದರು. ನನ್ನೂರು ಡಣಾಯನಕನಪುರದಲ್ಲಿ ಗೌಡಯ್ಯ ಎಂಬುವರ ಮನೆಯ ಕಲರ್ ಟಿವಿಯನ್ನು ಶುಕ್ರವಾರ ಮತ್ತು ಭಾನುವಾರ ಸಂಜೆ ಅವರ ಮನೆಯ ರಸ್ತೆಯಲ್ಲಿ ಇಟ್ಟು ಪ್ರದರ್ಶನ ಮಾಡುತ್ತಿದ್ದರು. ಪೆಟ್ಟಿ ಅಂಗಡಿಯ ಕಡಲೆ ಕಾಯಿ ಮೆಲ್ಲುತ್ತಾ ಟಿವಿ ನೋಡಿದ್ದ ನೆನಪು ಇನ್ನೂ ಅಚ್ಚಳಿಯದೇ ಹಾಗೆ ಇದೆ.

ಆಧುನಿಕತೆ ಹೆಚ್ಚಿದಂತೆ ಎಲ್ಲರ ಮನೆಯಲ್ಲೂ ಟಿವಿಗಳು ಬಂದವು, ಕೈಯಲ್ಲಿ ಸ್ಮಾರ್ಟ್ ಪೋನ್‍ಗಳು ಬಂದವು ಒಂದೊ ಎರಡೋ ಚಾನಲ್ ಇದ್ದದ್ದು ಈಗ ನೂರಾರು ಚಾನೆಲ್‍ಗಳು ದಿನಕೊಮ್ಮೆ ಅರ್ಧಗಂಟೆ ವಾರ್ತೆಗಳು ಬರುತ್ತಿದ್ದ ಕಾಲ ಹೋಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಬ್ರೇಕಿಂಗ್ ನ್ಯೂಸ್ ಕಾಲದಲ್ಲಿ ನಾವೆಲ್ಲರೂ ಇದ್ದೇವೆ. ಕಾದು ಕೂತುಹಲದಿಂದ ನೋಡುತ್ತಿದ್ದ ಕಾರ್ಯಕ್ರಮದ ಮಜವೆಲ್ಲಿ. ನೋಡಬೇಕೆಂದ ತಕ್ಷಣ ಮೊಬೈಲ್‍ನಲ್ಲೇ ಸಿಗುವ ಪಾಸ್ಟ್‍ಯುಗವೆಲ್ಲಿ. ಯಾವುದು ಚೆನ್ನಾಗಿತ್ತು??? ನನಗಂತೂ ಹಳೆಯ ದಿನಗಳೇ ಚೆಂದ ಇತ್ತು .ಇಂದಿಗೂ ಎಂದೆಂದಿಗೂ.

-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!