ಸಿನಿಮಾ

ಸೆನ್ಸಾರ್ ಮಂಡಳಿಯ ವಿರುದ್ಧ ಹೋರಾಡಿ ಬಿಡುಗಡೆಗೆ ಸಿದ್ಧಗೊಂಡಿರುವ ರವಿ ಹಿಸ್ಟರಿ ಸಿನಿಮಾ!!

ಸಿನಿಮಾ ಹೆಸರು ರವಿ ಹಿಸ್ಟರಿ! ಈ ಸಿನಿಮಾ ನಿರ್ದೇಶಕರು ಮಧು ಚಂದ್ರ! ರವಿ ಹಿಸ್ಟರಿ ಸಿನಿಮಾ ನಾಯಕ ಕಾರ್ತಿಕ್ ಚಂದ್ರ ಇವರೇ ಈ ಚಿತ್ರದ ನಿರ್ಮಾಪಕರು ಕೂಡ. ನಾಯಕಿ ಐಶ್ವರ್ಯ ಮತ್ತು ಪಲ್ಲವಿ ರಾಜು ಇನ್ನೂ ಅನೇಕ ಹೊಸ ಪ್ರತಿಭೆಗಳು ಈ ಚಿತ್ರದಲ್ಲಿದ್ದಾರೆ. ವಿಶೇಷವಾಗಿ ರಾಮನಗರ ಪ್ರತಿಭೆ ಹರೀಶ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ಈ ಸಿನಿಮಾ ಟ್ರೇಲರ್ ಇತ್ತೀಚೆಗೆ ಮಲ್ಲೇಶ್ವರಂ ನ ಎಸ್ .ಅರ್ .ವಿ. ಸ್ಟುಡಿಯೋದಲ್ಲಿ ಬಿಡುಗಡೆಯಾಯಿತು!

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸಿನಿಮಾ ಬಿಡುಗಡೆಯಾಗಿ ಆರು ತಿಂಗಳು ಆಗಬೇಕಿತ್ತು! ಆದರೆ ಸಿನಿಮಾ ಬಿಡುಗಡೆಗೆ ತಡವಾಗಿರುವ ಕಾರಣವನ್ನು ಸಿನಿಮಾ ಟ್ರೇಲರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ನಿರ್ಮಾಪಕ ಕಾರ್ತಿಕ್ ಚಂದ್ರ ನೆರೆದಿದ್ದ ಮಾಧ್ಯಮದವರ ಎದುರು ತಿಳಿಸಿದರು. ಸಿನಿಮಾವನ್ನು ಸೆನ್ಸಾರ್ ಮಂಡಳಿಯವರು ನೋಡಿ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದೇವೆ ಆದರ ನಾವು ಹೇಳುವ ಕೆಲವು ದೃಶ್ಯಗಳನ್ನು ಕಟ್ ಮಾಡಬೇಕು ಅದರಲ್ಲೂ ಒಂದು ಹಾಡಿನಲ್ಲಿ ಒಂದೂವರೆ ನಿಮಿಷ ಕಟ್ ಮಾಡಬೇಕೆಂದು. ನಿರ್ಮಾಪಕ ಕಾರ್ತಿಕ್ ಗೆ ಹೇಳಿದ್ದಾರೆ. ಆದರೆ ಕಾರ್ತಿಕ್ ಇದು ನನ್ನ ಮೊದಲ ಸಿನಿಮಾ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ನಮ್ಮ ನಿರ್ದೇಶಕರ ಜೊತೆ ಮಾತನಾಡಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ ಇದಕ್ಕೆ ಒಪ್ಪದ ಸೆನ್ಸಾರ್ ಮಂಡಳಿ ಅಧಿಕಾರಿ ನಿಮ್ಮ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ನೀಡೋದಾಗಿ ಧಮ್ಕಿ ಹಾಕಿದ್ದಾರೆ.

 

ಕಾರ್ತಿಕ್ ಮತ್ತು ನಿರ್ದೇಶಕ ಮಧುಚಂದ್ರ ಸೆನ್ಸಾರ್ ಮಂಡಳಿಯ ಕಚೇರಿಗೆ ತೆರಳಿ ಅಲ್ಲಿ ಅಧಿಕಾರಿ ಜೊತೆ ಮಾತನಾಡಲು ಹೋಗಿದ್ದಾರೆ. ಕನಿಷ್ಠ ಗೌರವವನ್ನು ನೀಡದ ಅಧಿಕಾರಿಗಳು ದೂರದಲ್ಲಿ ನಿಂತು ಮಾತನಾಡಿ ಎಂದು ಅಧಿಕಾರದ ದರ್ಪದಲ್ಲಿ ಮಾತನಾಡಿದ್ದಾರೆ. ಸುಳ್ಳು ಷೋಕಾಸ್ ನೋಟಿಸ್ ನ ವರದಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಇನ್ನೂ ಜಾಸ್ತಿ ಮಾತನಾಡಿದರೆ ಸರ್ಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದೀರೆಂದು ದೂರು ನೀಡುವುದಾಗಿ ಬೆದರಿಸಿದ್ದಾರೆ. ರಿವೈಸಿಂಗ್ ಕಮಿಟಿ ಗೆ ಹೋದರೆ ಅಲ್ಲಿಯೂ ನಾನೇ ಇರೋದು ಅಂತ ಕಚೇರಿಯಿಂದ ಹೊರ ಕಳಿಸಿದ್ದಾರೆ .

ಎಫ್ ಸಿ ಎ ಟಿ ಯಿಂದ ಯು/ಎ ಸರ್ಟಿಫಿಕೇಟ್ : ಮೇಲಿನ ಎಲ್ಲಾ ಘಟನೆಯಿಂದ ಬೇಸತ್ತ ನಾಯಕ ಕಾರ್ತಿಕ್ ಚಂದ್ರ ನೇರವಾಗಿ ದೆಹಲಿಯ ಎಫ್ ಸಿ ಎ ಟಿ ( film certifciation appelaate tribunal ) ಗೆ ಹೋಗಿದ್ದಾರೆ. ಅಲ್ಲಿ ಸಿನಿಮಾ ವೀಕ್ಷಿಸಿದ ಅಧಿಕಾರಿಗಳು ಸಿನಿಮಾದ ಯಾವ ದೃಶ್ಯಕ್ಕೂ ಕತ್ತರಿ ಇಲ್ಲದೆ ಯು/ಎ ಸರ್ಟಿಫಿಕೇಟ್ ನೀಡಿದ್ದಾರೆ.  ಕಿರುಕುಳ ನೀಡಿದ ಸೆನ್ಸಾರ್ ಮಂಡಳಿ ಅಧಿಕಾರಿ ವಿರುದ್ಧ ದೂರು ನೀಡಲು ಸಿನಿಮಾ ತಂಡ ಸಿದ್ಧತೆ ನಡೆಸಿದೆ.

ಅಂದಹಾಗೆ ರವಿ ಹಿಸ್ಟರಿ ಸಿನಿಮಾದ ಹಾಡುಗಳು ಜನಪ್ರಿಯವಾಗಿವೆ. ಸಿನಿಮಾ ಕಥೆ ರವಿ ಪೂಜಾರಿದ! ರವಿ ಬೆಳೆಗೆರೆದ , ಡಿ.ಕೆ. ರವಿದ . ಅಥವಾ ರವಿಚಂದ್ರನ್ ದ ಅಂತ ತಲೆಗೆ ಹುಳ ಬಿಟ್ಟಿದೆ! ಎಲ್ಲದಕ್ಕೂ ಉತ್ತರ ಸಿನಿಮಾ ನೋಡಿದ ಮೇಲೆ ತಿಳಿಯುತ್ತದೆ.

-bbmnews

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!