ಸಿನಿಮಾ

ಶ್ರೀನಿವಾಸ ಜಿ. ರಾಮನಗರ ನಿರ್ದೇಶನದ ಮೊದಲ ಸಿನಿಮಾ ಅ! ಚಿತ್ರೀಕರಣ ಪ್ರಾರಂಭ

ಸಿನಿಮಾ ರಂಗ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಪ್ರತಿಭೆ ಇರುವವರು ಮಾತ್ರ ಇಲ್ಲಿ ಉಳಿಯುತ್ತಾರೆ. ಅಂತವರ ಸಾಲಿನಲ್ಲಿ ಗುರುತಿಸಿಕೊಂಡವರು ಶ್ರೀನಿವಾಸ ಜಿ. ರಾಮನಗರ. ರೇಷ್ಮೆನಗರಿ ರಾಮನಗರದ ನಿವಾಸಿಯಾದ ಶ್ರೀನಿವಾಸ ಚಿತ್ರರಂಗದಲ್ಲಿ ಏನನ್ನಾದರು ಸಾಧಿಸಬೇಕೆಂಬ ಹಂಬಲ ಮತ್ತು ಮಹತ್ವಾಕಾಂಕ್ಷೆಯೊಂದಿಗೆ ಗಾಂಧಿನಗರಕ್ಕೆ ಬಂದವರು. ಪ್ರಾರಂಭದಲ್ಲಿ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಅನುಭವ ಪಡೆದ ಇವರು ನಂತರ ಕಿರುತೆರೆಯ ಜನಪ್ರಿಯ ಧಾರವಾಹಿಗಳಾದ ರಾಧ, ಎರಡು ಕನಸು, ಚಲಿಸುವ ಮೋಡಗಳು, ಅಶ್ವಿನಿ ನಕ್ಷತ್ರ, ಗೃಹಲಕ್ಷ್ಮಿ, ಪರಿಣಯ ಇವುಗಳ ಛಾಯಾಗ್ರಾಹಕರಾಗಿ ಹೆಸರು ಮಾಡಿದ್ದಾರೆ.

ಸದಾ ಕ್ರೀಯಾಶೀಲರಾಗಿ ಹೊಸತನವನ್ನು ಬಯಸುವ ಶ್ರೀನಿವಾಸ್‍ರವರು “ರೆಡ್ ಎಪಿಕ್” ಕ್ಯಾಮರಾವನ್ನು ದಕ್ಷಿಣ ಭಾರತದಲ್ಲಿ ಧಾರವಾಹಿ(ಗೃಹಲಕ್ಷ್ಮಿ) ಚಿತ್ರೀಕರಣಕ್ಕೆ ಬಳಸಿದ ಮೊದಲ ಛಾಯಾಗ್ರಾಹಕರಾಗಿದ್ದಾರೆ. ವಿಶೇಷವೆಂದರೆ ಈ ಧಾರವಾಹಿಗೆ 2015ರಲ್ಲಿ ಜೀ ಕನ್ನಡ ಕುಟುಂಬದ ಬೆಸ್ಟ್ ಛಾಯಾಗ್ರಾಹಕ ಪುರಸ್ಕಾರ ದೊರಕಿದೆ. ನೀವು ಕರೆಮಾಡಿದ ಚಂದಾದಾರರು ಸಿನಿಮಾಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ್ದ ಇವರು  ‘ಯಶೋಗಿರಿ ಚಿತ್ರಾಲಯ’ ಮತ್ತು ‘ಲಿಯಾ ಅಂಡ್ ನಲುವೆ ಫಿಲಂಮ್’್ಸ ಜಂಟಿಯಾಗಿ ನಿರ್ಮಿಸುತ್ತಿರುವ ಅ! ಶೀರ್ಷಿಕೆಯ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿದ್ದಾರೆ. ಜೊತೆಗೆ ಈ ಚಿತ್ರದ ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.

ಅ! ಶೀರ್ಷಿಕೆಯ ಸಿನಿಮಾದ ಮಹೂರ್ತ ಸಮಾರಂಭ ನಾಗದುರ್ಗಾ ಫೀಠ ಮಹಾ ಸಂಸ್ಥಾನ, ಶ್ರೀ ತ್ರಿಮಾತೆಯರ ದಿವ್ಯ ಕ್ಷೇತ್ರ ರಾಮೋಹಳ್ಳಿಯಲ್ಲಿ ನಡೆಯಿತು. ಶಾಕ್ತ್ಯಂ ಶ್ರೀ ಶಕ್ತಿಬಾಲ ಅಮ್ಮ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮಧ್ಯರಾತ್ರಿ ಹನ್ನೆರಡು ಗಂಟೆಯೊಳಗೆ ನಡೆಯುವಂತಹ ಕೌತುಕಮಯ ಘಟನೆಗಳನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ 3 ಹಾಡುಗಳಿದ್ದು, ಎ.ಆರ್. ರೆಹಮಾನ್ ಅಕಾಡೆಮಿಯ ಪ್ರಾಂಶುಪಾಲರಾದ ಎಸ್. ಪ್ರೇಮ್ ಕುಮಾರ್ ರವರು ಸಂಗೀತ ಸಂಯೋಜನೆ ಮಾಡಿದ್ದು, ಹರ್ಮಾನ್ ಮಲ್ಲಿಕ್, ಸೋನುನಿಗಂ ಮತ್ತು ಅನುರಾಧ ಭಟ್ ಒಂದೊಂದು ಹಾಡನ್ನು ಹಾಡುತ್ತಿರುವುದು ವಿಶೇಷೆವಾಗಿದೆ. ಒಂದು ಗೀತೆಯನ್ನು 300 frams ನಲ್ಲಿ ಮತ್ತು ಒಂದು ಗೀತೆಯನ್ನು 50 ಕ್ಯಾಮರಾಗಳನ್ನು ಬಳಸಿ ಬುಲೇಟ್ ಟೈಮ್ ಶಾಟ್ ನಲ್ಲಿ ಚಿತ್ರೀಕರಿಸಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿರುವುದಾಗಿ ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ನಾಯಕನಾಗಿ ಶ್ರೀಜಿತ್ ನಾಯಕಿಯಾಗಿ ಅಮಿತಾ ಕುಲಾಲ್ ಅಭಿನಯಿಸುತ್ತಿದ್ದು, ಇವರ ಜೊತೆ ವಿಶೇಷ ಪಾತ್ರದಲ್ಲಿ ಪಲ್ಲವಿಗೌಡ ಜೊತೆಗೆ ಕಲಾವಿದರಾದ ಅರವಿಂದ್ ರಾವ್, ಯಮುನಾ, ಶ್ರೀನಿದಿ, ಸ್ಪಂದನಾ ರಾಜಗೋಪಾಲ್ ಜೋಷಿ, ಸಂತೋಷ್ ರೆಡ್ಡಿ, ಅಂಬರೀಶ್‍ಗೌಡ, ಅಭಿಷೇಕ್, ಚಿತ್ರಾ, ನವೀನ್, ಜೀವನ್, ರಾಧಾ ಉದಯ್, ಲೋಕೇಶ್, ವೇದಿಕಾನಯನ, ಕರಣ್ ಮತ್ತು ಬೇಬಿ ಇಹಾ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ರಾಜ್ಯ ಪ್ರಶಸ್ತಿ ವಿಜೇತರಾದ ರವಿಚಂದ್ರನ್ ಸಿ. ಅವರು ಸಂಕಲನವಿದ್ದು, ಅಮರ್ ಅವರ ಕಲಾ ನಿರ್ದೇಶನವಿದೆ. ಸ್ಥಿರ ಛಾಯಗ್ರಾಹಕರಾಗಿ ಪ್ರಭಾಕರ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ: ಚಂದ್ರು ಎಸ್.ಎಲ್. ಮಧುಗಿರಿ ಒದಗಿಸಿದ್ದಾರೆ.

ಕಿರುತೆರೆಯಲ್ಲಿ ಉತ್ತಮ ಛಾಯಾಗ್ರಾಹಕನೆಂದು ಹೆಸರು ಮಾಡಿರುವ ರೇಷ್ಮೆನಗರಿ ರಾಮನಗರದ ಪ್ರತಿಭೆ ಶ್ರೀನಿವಾಸ್ ಜಿ. ರವರು ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಮತ್ತಷ್ಟು ಯಶಸ್ವಿಯಾಗಲೆಂದು ಹಾರೈಸುತ್ತೇನೆ.
-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!