ಸುದ್ದಿ

ರಾಜಕುಮಾರ ಪಂಚಪದಿ ಪುಸ್ತಕ 100 ಕಡೆ 100 ಗಣ್ಯರಿಂದ ಇಂದು ದಾಖಲೆ ಮಟ್ಟದಲ್ಲಿ ಲೋಕಾರ್ಪಣೆ

ಸ್ನೇಹ ದ ಹೆಮ್ಮೆಯ ಪ್ರಕಟಣೆ ಮಂಜುನಾಥ್ ಹಾಲುವಾಗಿಲು ರವರ “ರಾಜಕುಮಾರ ಪಂಚಪದಿ” ಇಂದು ನಾಡಿನಾದ್ಯಂತ ನೂರು ಪ್ರತ್ಯೇಕ ಸ್ಥಳಗಳಲ್ಲಿ ನೂರು ಜನ ವಿವಿಧ ರಂಗದ ಗಣ್ಯರು ಮತ್ತು ಸಂಸ್ಥೆಗಳಿಂದ ಮಧ್ಯಾಹ್ನ 1: 30 ರಿಂದ 3 ಗಂಟೆಯ ವರೆಗೆ ದಾಖಲೆ ಮಟ್ಟದಲ್ಲಿ ಲೋಕಾರ್ಪಣೆ ಆಗ್ತಾ ಇದೆ.

ಸಿದ್ದಗಂಗಾ ಶ್ರೀ ಗಳಾದ ಶ್ರೀ ಶ್ರೀ ಸಿದ್ದಲಿಂಗಸ್ವಾಮಿಜಿ ಯವರು ಸಿದ್ದಗಂಗಾ ಕ್ಷೇತ್ರದ ಶ್ರೀಮಠದಲ್ಲಿ ಲೋಕಾರ್ಪಣೆ ಮಾಡುತ್ತಾರೆ.ರಾಜರತ್ನಗಳಾದ ಶಿವಣ್ಣ ರಾಘಣ್ಣ ಮತ್ತ ಅಪ್ಪು ಅವರು ನಿರ್ಮಾಪಕ ಶ್ರಕಾಂತ್ ಅವರು ಬರಗೂರು ರಾಮಚಂದ್ರಪ್ಪ ಅವರು, ಚಿತ್ರನಟರಾದ ಜಗ್ಗೇಶ್ ಅವರು ಫೇಸ್ ಬುಕ್ ಲೈವ್ ನಲ್ಲಿ ರಾಜಣ್ಣನ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ ,ನೆನಪಿರಲಿ ಪ್ರೇಮ್, ದ್ರುವಸರ್ಜಾ ಅವರು. ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಅಶ್ವತ್ನಾರಾಯಣ ಅವರು. ಡಾ.ಅರಳುಮಲ್ಲಿಗೆ ಪಾರ್ಥಸಾರಥಿ. ಡಾ.ಸಿದ್ದಲಿಂಗಯ್ಯ. ಅವರು.ಡಾ.ಮಹೇಶ್ ಜೋಷಿ ಅವರು, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಈಃ ನಲ್ಲಿ ಅಭಿಮನಿಗಳೊಂದಿಗೆ ಲೋಕಾರ್ಪಣೆ ಮಾಡಿ ಮಾತನಾಡುತ್ತಾರೆ . ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಕೆ.ರಾಜಕುಮಾರ. ಹಿರಿಯ ಬಿ.ಬಿ.ಎಂ.ಪಿ. ಆಯುಕ್ತರಾದ ಮಂಜುನಾಥ್ ಪ್ರಸಾದ್. ಅವರೆಲ್ಲಾ ತಾವಿರುವ ಕಡೆಗಳಿಂದಲೇ ಲೋಕಾರ್ಪಣೆ ಮಾಡಿದರೆ ಕಾವೇರಿ ನೀರಾವರಿ ನಿಗಮದ ಒಆ ಆದಂತಹ ಶ್ರೀಯುತ ಕೆ ಜಯಪ್ರಕಾಶ್ ಅವರು ವಿಜಯನಗರದಲ್ಲಿ ಸಾರ್ವಜನಿಕ ಸಂಪರ್ಕ ವೇದಿಕೆ ಆಯೋಜಿಸಿರುವ ಸಮಾರಂಭದಲ್ಲಿ ಎಲ್ಲಾ ಅಭಿಮಾನಿಗಳ ಸಮ್ಮುಖದಲ್ಲಿ ಸ್ನೇಹ ಬಳಗದ ಲೇಖಕಿ ಹಾಗೂ ಸಹೋದರಿ ಮಾಯಾ ನಾಯರ್ ರವರ ಪುಸ್ತಕ ಪ್ರೀತಿಗೆ ಕಾಳಜಿಯಿಂದ ಮತ್ತಷ್ಟು ಕಳೆಕಟ್ಟಿದೆ.

ಕೊಳದಮಠದ ಶ್ರೀ ಶ್ರೀ ಶಾಂತವೀರಸ್ವಾಮಿಜಿಯವರು ಕಥೆಗಾರ ಲೇಖಕ ಗುಣವಂತ ಮಂಜು. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರಾದ ಕೆ ಪ್ರಕಾಶ್ ಮತ್ತು ಹೊನ್ನಯ್ಯಗೌಡ ಅವರ ಸಮ್ಮುಖದಲ್ಲಿ ಮಾಗಡಿ ರಸ್ತೆಯಲ್ಲಿ ಕಳೆಕಟ್ಟಿದೆ. ಮೈಸೂರಿನ ಫೀನಿಕ್ಸ್ ಬುಕ್ ಹೌಸ್ ನಲ್ಲಿ ರಾಜಕುಮಾರ ಅಭಿಮಾನಿಗಳ ಸಂಘದ ಸ್ಥಾಪಕ ಅಧ್ಯಕ್ಷರಾದ ರಾಮೇಗೌಡ ಅವರು ಬಾಗವಹಿಸ್ತಾ ಇದಾರೆ. ಅದಮ್ಯ ಸಂಸ್ಥೆಯ ತೇಜಸ್ವಿನಿ ಅನಂತ್ ಕಮಾರ್ ಅವರು, ದಿವ್ಯಜ್ಯೋತಿ ಸಹಕಾರಿ ಸಂಸ್ಥೆಯಿಂದ ಶಿವಕುಮಾರ್ ಮತ್ತು ಬಿ.ನಾಗರಾಜು ಅವರ ಸಮ್ಮುಖದಲ್ಲಿ, ಮಾಜಿ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರು, ರಾಯಚೂರಿನ ಲಿಂಗಸೂರಿನಲ್ಲಿ ಪತ್ರಕರ್ತ ಲೇಖಕ ಡಾ.ಜಲಾಲುದ್ದೀನ್ ಅಕ್ಬರ್ ಅವರು ಕಾರ್ಯಕ್ರಮ ಆಯೋಜಿಸಿ ರಾಜಣ್ಣನ ಕೃತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ನೀಲಪ್ಪ ಮತ್ತು ಅವರ ಸ್ನೇಹಿತರು .ತುಮಕೂರಿನ ಶಿವರಾಜಕುಮಾರ್ ಮತ್ತು ಪುನಿತ್ ಅಭಿಮಾನಿಗಳ ಸಂಘದ ಶಿವರಾಜ್ ಮತ್ತು ಸ್ನೇಹಿತರು. ತುಮಕೂರಿನ ಹೊಟೆಲ್ ಉಧ್ಯಮಿ ಶಿವಕುಮಾರ್, ಭಾರತದ ಅತಿದೊಡ್ಡ ಪುಸ್ತಕ ಭಂಡಾರ ಸಪ್ನ ಬುಕ್ ಹೌಸ್ ನಲ್ಲಿ ಪುಸ್ತಕ ಪ್ರಾಧಿಕಾರ ದ ಮಾಜಿ ಸದಸ್ಯರು ಆಪ್ತರಾದ ಶ್ರೀಯುತ ದೊಡ್ಡೆಗೌಡರ ಸಾರಥ್ಯದಲ್ಲಿ, ಕರ್ನಾಟಕದಲ್ಲಿ ಅತಿದೊಡ್ಡ ಪುಸ್ತಕ ಮಾರಾಟ ಜಾಲವನ್ನು ಹೊಂದಿರುವ ನವಕರ್ನಾಟಕ ಪ್ರಕಾಶನ ದಲ್ಲಿ ಅಣ್ಣಾವ್ರ ಅಪ್ಪಟ ಅಭಿಮಾನಿ ಸದಾ ಪುಸ್ತಕಗಳ ಜೊತೆ ಒಡನಾಟ ಹೊಂದಿರುವ ಶಿವಕುಮಾರ್ ಮತ್ತು ಸ್ನೇಹಿತರು, ಜನದನಿ ಬಳಗದ ನಮ್ಮ ರಾಮಲಿಂಗ ಹಂಚಿಕೊಳ್ಳುತ್ತೇನೆ, ೇಹಿತರು ಶ್ರೀನಗರದಲ್ಲಿ ರಾಜಣ್ಣನ ಪ್ರತಿಮೆಯ ಮುಂಭಾಗದಲ್ಲಿ, ಕನ್ನಡವನ್ನು ರಕ್ತಗತ ಮಾಡಿಕೊಂಡಿರುವ ರೇಣುಕಾ ವೈಕುಂಠಯ್ಯ ಅವರು ಒಉ ರಸ್ತೆ ಯಲ್ಲಿ ವಿನೂತನ ವಾಗಿ ರಾಜಣ್ಣನ ಕೃತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.ನಾಡಿನ ಖ್ಯಾತ ಕವಿ ಜರಗನಹಳ್ಳಿ ಶಿವಶಂಕರ್ ಅವರು ತಮ್ಮ ಸ್ವ ಗೃಹದಲ್ಲಿ ಲೋಕಾರ್ಪಣೆ ಮಾಡುತ್ತಿದ್ದಾರೆ,

ಜಯನಗರದ ಖ್ಯಾತ ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ , ಖ್ಯಾತ ಪ್ರಕಾಶನ ಸಂಸ್ಥೆ ಅಬ್ದುಲ್ ಕಲಾಂ ಅವರ ಸಾಕಷ್ಟು ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸಿರುವ ವಸಂತ ಪ್ರಕಾಶನದ ಮುರಳಿ ಅವರು, ಕೋಲಾರದಲ್ಲಿ ರಾಮ್ ಪ್ರಸಾದ್ ಮತ್ತು ಸ್ನೇಹಿತರು, ತಿಪಟೂರಿನಲ್ಲಿ ವೆಂಕಟೇಶ ಅವರು ರಾಮಪ್ರಸಾದ್ ಅವರ ಸಮ್ಮುಖದಲ್ಲಿ, ಬೆಂಗಳೂರಿನಲ್ಲಿ ಮಾಜಿ ಮಹಾಪೌರ ರಾದ Sಏ ನಟರಾಜ್ ಮತ್ತು ಗೌತಮ್ ಕುಮಾರ್ ಅವರು, ನಗರಪಾಲಿಕೆ ಮಾಜಿ ಸದಸ್ಯರಾದ ಪೂರ್ಣಿಮಾ ರಮೇಶ್ ಅವರು, ಚಂದ್ರ ಶೇಖರ್, ಎಲ್.ಶ್ರೀನಿವಾಸ್, ಎ.ಎಚ್. ಬಸವರಾಜ್, ನಾಗರಾಜ್, ಗೋಪಿ,ಕೇಶವಮೂರ್ತಿ ಮತ್ತು ಇತರರು, ಇನ್ನೂ ಹಲವಾರು ಗಣ್ಯರು ಲೋಕಾರ್ಪಣೆ ಮಾಡುತ್ತಿದ್ದಾರೆ ಅವರು ಹೆಸರುಗಳನ್ನು ಮತ್ತೆ ಹಂಚಿಕೊಳ್ಳುತ್ತೇನೆ, ಬಿಡುಗಡೆ ಗೆ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿರುವ ಕನ್ನಡದ ಈ ಅಮೂಲ್ಯ ಕೃತಿಗೆ ನಿಮ್ಮ ಇರಲಿ ಎಂದು ವಿನಂತಿ ಸುತ್ತೇನೆ, ಲೇಖಕ ಮಂಜುನಾಥ್ ಹಾಲುವಾಗಿಲು ಅವರಿಗೆ ನಿಮ್ಮೆಲ್ಲರ ಪ್ರೀತಿ ಹಾರೈಕೆ ಇರಲಿ,ಈ ಬೃಹತ್ ಯೋಜನೆ ಗೆ ನಮಗೆ ಬೆನ್ನೆಲುಬಾಗಿ ನಿಂತಿರುವವರು ನಾಡಿನ ಶ್ರೇಷ್ಠ ಚಿಂತಕ, ಮಾಜಿ ವಿರೋಧ ಪಕ್ಷದ ನಾಯಕರಾದ  ರಮೇಶ್ ಅವರಿಗೆ ಸ್ನೇಹ ಯಾವಾಗಲೂ ಅಭಾರಿಯಾಗಿರುತ್ತದೆ

 

 

 

-K.B.PARASHIVAPPA, SNEHA BOOK HOUSE  (MOB: 9845031335)

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!