ಸುದ್ದಿ

ಗ್ರಾಮೀಣ ಪ್ರತಿಭೆ ಮಂಜುಪಾವಗಡಗೆ ಒಲಿದ ಬಿಗ್‍ಬಾಸ್ 8ನೇ ಸೀಸನ್ ವಿನ್ನರ್ ಕಪ್!

ಕನ್ನಡ ಕಿರುತೆರೆಯ ಸೂಪರ್ ಶೋ ಜೊತೆಗೆ ಅಷ್ಟೇ ಟೀಕೆಗಳಿಗೆ ಒಳಗಾಗಿರೊ ರಿಯಾಲಿಟಿ ಕಾರ್ಯಕ್ರಮ ಬಿಗ್‍ಬಾಸ್ 8ನೇ ಸೀಸನ್ ವಿನ್ನರ್ ಟ್ರೋಪಿಯನ್ನು ಮಜಭಾರತ ಖ್ಯಾತಿಯ ಮಂಜುಪಾವಗಡ ಪಡೆದಿದ್ದಾರೆ. ಅವರಿಗೆ ಸರಿಸಮಾನವಾಗಿ ಸ್ಪರ್ಧೆ ನೀಡಿದ ಬೈಕರ್ ಕೆಪಿ ಅರವಿಂದ್ ರನ್ನರ್ ಆಗಿ ಹೊರಹೊಮ್ಮಿದ್ದಾರೆ.


ಬಿಗ್‍ಬಾಸ್ ಶೋ ಜನಪ್ರಿಯವಾಗಲೂ ಕಾರಣ ಬಹಳ ಮುಖ್ಯವಾಗಿ ಪ್ರತಿ ವಿಕೆಂಡ್ ಬರೋ ಕಿಚ್ಚ ಸುದೀಪ್ ರವರಿಂದ ಅಂತ ಎಲ್ಲರಿಗೂ ಗೊತ್ತಿರೋದೆ. ಕಾರಣ ಸುದೀಪ್ ಈ ಶೋ ಅನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದಾರೆ. ಪ್ರತಿವಾರ ಪಂಚಾಯಿತಿ ನಡೆಸಿ ತಪ್ಪಿದ್ದವರಿಗೆ ತಿದ್ದಿ, ಚೆನ್ನಾಗಿ ಆಡುತ್ತಿದ್ದವರಿಗೆ ಪ್ರೋತ್ಸಾಹಿಸಿ, ಎಲ್ಲರನ್ನೂ ಸಮಾನವಾಗಿ ನೋಡುತ್ತಾ ತಮ್ಮದೇ ಕಡಕ ಶೈಲಿಯ ಮಾತುಗಳಿಂದ ಶೋ ನಡೆಸುತ್ತಾರೆ. ಆಗಾಗಿ ಬಿಗ್‍ಬಾಸ್ ಇಷ್ಟವಾಗುತ್ತೆ ಎಂದರೆ ತಪ್ಪಲ್ಲ.


8ನೇ ಸೀಸನ್ ನಲ್ಲಿ ಕೊನೆಯ 5 ಸ್ಪರ್ಧಿಗಳಿಗೂ ಬಹುಮಾನವನ್ನು ನೀಡಿದ್ದು ವಿಶೇಷವಾಗಿತ್ತು. ಜೊತೆಗೆ ಮೊದಲ ಬಾರಿಗೆ ಯಾರು ಎಷ್ಟು ಮತಗಳನ್ನು ಪಡೆದಿದ್ದಾರೆ ಎಂಬುದನ್ನು ರೀವಿಲ್ ಮಾಡಿದ್ದು ಕೂಡ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಮಿಲಿಯನ್ ಗಟ್ಟಲೇ ಜನ ಮತ ಹಾಕುತ್ತಾರೆ ಎಂಬುದು ನಿಜಕ್ಕೂ ಶಾಕ್ ನೀಡಿದ ವಿಚಾರ. ಅದೇನೆ ಇರಲಿ ಮಂಜುಪಾವಗಡ ಎಂಬ ಗ್ರಾಮೀಣ ಪ್ರತಿಭೆ 53 ಲಕ್ಷ ಬಹುಮಾನ ಪಡೆದಿದ್ದು ಕರ್ನಾಟಕದ ಸಮಸ್ತರಿಗೂ ಸಂತಸ ತಂದಿದೆ. ಅವರ ಅಪ್ಪ ಅಪ್ಪ ಶೋನಲ್ಲಿ ಇದ್ದು ಕಣ್ಣಂಚಲ್ಲಿ ಸಂತÀಸದÀ ಕಣ್ಣಿರು ಹಾಕುತ್ತ ಖುಷಿ ಪಡುತ್ತಿದ್ದರು. ಮನೆ ಒಳಗೆ ಹೆಚ್ಚು ಒಡನಾಡಿಯಾಗಿದ್ದ ದಿವ್ಯಾಸುರೇಶ್ ಕುಣಿದು ಕುಪ್ಪಳಿಸುತ್ತಿದ್ದದ್ದು ಕೂಡ ಎಲ್ಲರ ಗಮನ ಸೆಳೆಯಿತು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!