ಹುಟ್ಟಿದ ಪ್ರತಿಯೊಬ್ಬರೂ ಬದುಕಲು ತಮಗೆ ಸಿಕ್ಕಿದ ಕೆಲಸ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಾ ತಾವಾಯಿತು ತಮ್ಮ ಕುಟುಂಬವಾಯಿತು ಅಂತ ಬದುಕುತ್ತಿರುತ್ತಾರೆ. ಇನ್ನೂ ಕೆಲವರು ಸ್ವಾರ್ಥವಿಲ್ಲದೇ ನಿಶ್ವಾರ್ಥದಿಂದ ವಿಭಿನ್ನವಾಗಿ ಬದುಕಿ ಸಾಧಕರಾಗುತ್ತಾರೆ. ಅಂತವರ ಸಾಲಿಗೆ ಈ ಕಿತ್ತಳೆ ಹಣ್ಣು ಮಾರುವ ಒಂದಕ್ಷರೂ ಕಲಿಯದ ಮಂಗಳೂರಿನ ಹರೇಕಳ ಹಾಜಬ್ಬ ಒಬ್ಬರು.
ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪ್ರಕಟವಾದಾಗ ನಿಜಕ್ಕೂ ಅಚ್ಚರಿಯಾದದ್ದು ಈ ಹರೇಕಳ ಹಾಜಬ್ಬನವರ ಹೆಸರು ಕೇಳಿ, ಏಕೆಂದರೆ ಚಿರಪರಿಚಿತವಿರದ ಈ ಹೆಸರು ಪ್ರತಿಷ್ಠಿತ ಪದ್ಮಶ್ರಿ ಪ್ರಶಸ್ತಿಯ ಪಟ್ಟಿಯಲ್ಲಿ ಕಂಡಾಗ ಕೆಲವರಿಗೆ ಅಚ್ಚರಿಯಾಗಿದೆ. ಏಕೆಂದರೆ ಕಿತ್ತಳೆ ಹಣ್ಣು ಮಾರುತ್ತಾ ಸಾಮಾನ್ಯ ಬದುಕನ್ನು ಬದುಕುತ್ತಿದ್ದ ಈ ಹರೇಕಳ ಹಾಜಬ್ಬನಿಗೆ ಹೇಗೆ ಈ ಪ್ರಶಸ್ತಿ ಬಂತು ಎಂಬ ಯಕ್ಷ ಪ್ರಶ್ನೆಯಿಂದ, ಹೌದು ಇದು ನಿಮ್ಮ ಪ್ರಶ್ನೆಯೂ ಆಗಿರಬಹುದು!
ಹರೇಕಳ ಹಾಜಬ್ಬ ಕಿತ್ತಳೇ ಹಣ್ಣು ಮಾರಬೇಕಾದರೆ ಒಮ್ಮೆ ವಿದೇಶಿಗರು ಇಂಗ್ಲಿóಷ್‍ನಲ್ಲಿ ಕಿತ್ತಳೆ ಹಣ್ಣಿನ ಬೆಲೆ ವಿಚಾರಿಸಿದ್ದಾರೆ. ಆಗ ಹಾಜಬ್ಬನಿಗೆ ಉತ್ತರಿಸಲು ಆಗದೇ ಮುಗುಗರಕ್ಕೆ ಒಳಗಾಗುತ್ತಾರೆ. ಆ ದಿನವೇ. ತನ್ನ ಹಳ್ಳಿಯಲ್ಲಿ ಸರ್ಕಾರಿ ಶಾಲೆ ಕಟ್ಟಿಸಿ ಅಲ್ಲಿ ಮಕ್ಕಳಿಗೆ ಇಂಗ್ಲಿಷ್ ವಿದ್ಯಾಭ್ಯಾಸದ ಜೊತೆಗೆ ಉನ್ನತ ಶಿಕ್ಷಣವನ್ನು ಕಲಿಸಬೇಕೆಂಬ ಕನಸು ಕಾಣುತ್ತಾರೆ. ಬರೀ ಕನಸು ಕಂಡಿದ್ದರೇ ಅವರಿಗೆ ಪದ್ಮಶ್ರಿ ಪ್ರಶಸ್ತಿ ಬರುತ್ತಿರಲಿಲ್ಲ ಕಂಡ ಕನಸಿಗೆ ನೀರೆದು ಹಗಲು ರಾತ್ರಿ ಪರಿತಪಿಸಿ ಪ್ರತಿದಿನ ಕಿತ್ತಳೆ ಹಣ್ಣನ್ನು ಮಾರಿ ಬಂದ ಹಣವನ್ನೂ ಒಟ್ಟುಗೂಡಿಸಿ ಸ್ಥಳಿಯರ ಸಹಾಯ ಪಡೆದು ಸರ್ಕಾರಿ ಅಧಿಕಾರಿಗಳ ಕಛೇರಿಗಳಿಗೆ ಅಲೆದು ಕೊನೆಗೂ ಸರ್ಕಾರಿ ಶಾಲೆ ಪ್ರಾರಂಭಿಸಿ ಅದಕ್ಕೆ ಸ್ವಂತ ಕಟ್ಟಡ ಕಲ್ಪಿಸಿ ಅಕ್ಷರ ಸಂತನಾಗಿ ಹೆಸರು ಮಾಡಿದ್ದಾರೆ ಈ ಹಾಜಬ್ಬ!
ಪ್ರತಿಯೊಬ್ಬರಿಗೂ ಈ ರೀತಿ ಕನಸು, ಛಲವಿದ್ದರೆ ಬದುಕಿನಲ್ಲಿ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಓದಿ ಕೆಲಸ ಸಿಗಲಿಲ್ಲವೆಂಬ ಕೊರಗಿನೊಂದಿಗೆ ಉತ್ಸಾಹ ಕಳೆದುಕೊಂಡು ತಿರುಗುವ ಇಂದಿನ ಯುವ ಜನತೆಗೆ ಹಾಜಬ್ಬ ಸ್ಪೂರ್ತಿಯಾಗಲಿ.
ಓದಿ ಸುಮ್ಮನಾಗಬೇಡಿ ನಿಮ್ಮ ಗೆಳೆಯರ ಗುಂಪಿಗೆ ಶೇರ್ ಮಾಡುವ ಮೂಲಕ ಈ ಹಾಜಬ್ಬನಿಗೊಂದು ಗೌರವ ಸಲ್ಲಿಸಿ.
-Naveen Ramanagara