ಸುದ್ದಿ

ಬೆಂಗಳೂರಿನ ಸಿಟಿ ಇಂಜಿನಿಯರಿಂಗ್ ಕಾಲೇಜಿನ NSS ವಾರ್ಷಿಕ ವಿಶೇಷ ಶಿಬಿರ

ಶ್ಯಾನುಭೊಗನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಡಣಾಯನಕನಪುರದಲ್ಲಿ ಬೆಂಗಳೂರಿನ ಸಿಟಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 7 ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀ ಎಸ್. ಜಗದೀಶ್‍ರವರು ಉದ್ಘಾಟಿಸಿದರು.

ಗ್ರಾಮೀಣಾಭಿವೃದ್ಧಿಯತ್ತ ಯುವ ಜನತೆ ಎಂಬ ಸಂದೇಶದೊಂದಿಗೆ ಎನ್.ಎಸ್.ಎಸ್. ಶಿಬಿರವನ್ನು ಹಮ್ಮಿಗೊಂಡಿದ್ದು, ಕುಡಿಯುವ ನೀರನ್ನು ಮಿತವಾಗಿ ಬಳಸಲು ಹಾಗೂ ಸ್ವಚ್ಛತೆಯ ಬಗ್ಗೆ ಅರಿವನ್ನು ರೈತರಲ್ಲಿ ಮೂಡಿಸಲು ಶಿಬಿರಾರ್ಥಿಗಳಿಗೆ ಕರೆನೀಡಿದರು. ಯುವ ಜನತೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಗುರಿಗಳನ್ನು ತಲುಪಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಹೊನ್ನಗಿರಿಗೌಡ(ರವಿ) ಮಾತನಾಡಿ ಈ ಶಿಬಿರದಲ್ಲಿ ಸಪ್ತಗಿರಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಬೆಂಗಳೂರು ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದು, ಇದರಲ್ಲಿ ನೇತ್ರ ತಪಾಸಣೆಯು ಒಳಗೊಂಡಿದ್ದು, ಇದರ ಸದುಪಯೋಗವನ್ನು ಊರಿನ ಗ್ರಾಮಸ್ಥರು ಬಳಸಿಕೊಳ್ಳಲು ತಿಳಿಸಿದರು.

ಚಿಗುರು ಫೌಂಡೇಷನ್ ಅಧ್ಯಕ್ಷೆ ಎಂ. ಜಯಮ್ಮ ಮಾತನಾಡಿ ಮಹಿಳೆಯರು ಪುರುಷರ ಸರಿಸಮಾನವಾಗಿದ್ದು, ಎಲ್ಲಾ ರಂಗದಲ್ಲಿಯೂ ತೊಡಗಿಸಿಕೊಂಡಿರುತ್ತಾರೆ. ವಿದ್ಯಾರ್ಥಿಗಳು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಕುರಿತು ಜಾಗೃತಿ ಮೂಡಿಸುವಂತೆ ಕರೆ ನೀಡಿದರು.


ರಾಮನಗರ ರೋಟರಿ ಅಧ್ಯಕ್ಷ ಡಿ.ಸಿ. ಶಂಕರ್‍ಲಿಂಗೇಗೌಡರವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಮೂಡಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಶ್ಯಾನುಭೋಗನಹಳ್ಳಿ ಗ್ರಾಮಪಂಚಾಯಿತಿಯ ಅಧ್ಯಕ್ಷ ಮಹದೇವಯ್ಯನವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಬಿರಾರ್ಥಿಗಳು ಶಿಸ್ತಿನಿಂದ ಗ್ರಾಮದಲ್ಲಿ ರೈತರಿಗೆ ಜಾಗೃತಿಮೂಡಿಸುವ ಕೆಲಸವನ್ನು ಮಾಡಲು ತಿಳಿಸಿದರು.

ಶ್ಯಾನುಭೋಗನಹಳ್ಳಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಅನಂತು, ರಾಮನಗರ ಗ್ರಾಮಪಂಚಾಯಿತಿ ಸದಸ್ಯೆ ರುಕ್ಮಿಣಮ್ಮನವರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಣ್ಣ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಹೆಡ್‍ಮಾಸ್ಟರ್ ವೀರಣ್ಣ ಪಟ್ಟಣಶೆಟ್ಟಿ, ಮಾಜಿ ಗ್ರಾಮಪಂಚಾಯಿತಿ ಸದಸ್ಯರಾದ ಎಂ. ನಾರಾಯಣ್ ಮುಖಂಡರಾದ ಗೌಡಯ್ಯ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಕೆ.ಎಸ್. ಕೃಷ್ಣ, ಎಂ. ಹೇಮಂತ್ ಲಕ್ಷ್ಮಿ ನರಸಿಂಹ ಸ್ವಾಮಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಗ್ರಾಮದ ಯಜಮಾನರಾದ ಮೋಟಪ್ಪ, ಸುರೇಶ್, ಪಟೇಲ್ ಕುಮಾರ್ ನಾಯಾಯಣಪ್ಪ ದೇವರಾಜ್ ಉಪಸ್ಥಿತರಿದ್ದರು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!