ಸುದ್ದಿ

ಯುಪಿಎಸ್‍ಸಿ ಫಲಿತಾಂಶ ಪ್ರಕಟ : ಕರ್ನಾಟಕದ 24 ಮಂದಿ ಆಯ್ಕೆ

ಕಳೆದ 2018ರಲ್ಲಿ ನಡೆದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ಒಟ್ಟು 24 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಧಾರವಾಡದ ರಾಹುಲ್ ಶರಣಪ್ಪ ಸಂಕನೂರು 17ನೇ Rank ಪಡೆದಿದ್ದಾರೆ. ಯುಪಿಎಸ್‍ಸಿ 2018ರ ಮೊದಲ Rankನ್ನು ಕನಿಷ್ಕ್ ಕಟಾರಿಯ್ ಪಡೆದುಕೊಂಡಿದ್ದಾರೆ.

ಈ ಭಾರಿ 795 ಅಭ್ಯರ್ಥಿಗಳು ಐಎಎಸ್ ಮತ್ತು ಐಪಿಎಸ್ ಶ್ರೇಣಿಗೆ ಆಯ್ಕೆಯಾಗಿದ್ದು, ಇವರಲ್ಲಿ 182 ಮಹಿಳೆಯರು ಇರುವುದು ವಿಶೇಷವಾಗಿದೆ. ಅದರಲ್ಲಿ ನಕ್ಷಲ್ ಪೀಡಿತ ದಂತೇವಾಡ ನಮ್ರತಾ ಜೈನ್ 12ನೇ Rankಪಡೆದಿದ್ದಾರೆ.

ಕರ್ನಾಟಕ ಅಭ್ಯರ್ಥಿಗಳು: ಎನ್. ಲಕ್ಷ್ಮೀ, ಎಸ್. ಆಕಾಶ್, ಕೃತಿಕಾ, ಎಚ್.ಆರ್. ಕೌಶಿಕ್, ಎಚ್. ಬಇ. ವಿವೇಕ್, ನಿವೇದಿತಾ, ಗಿರೀಶ್ ಧವ್ರ್ಮರಾಜ್, ಮಿರ್ಜಾ ಕದರ್ ಬೇಗ್, ಯು.ಪಿ. ತೇಜಸ್, ಬಿ.ಜೆ.ಹರ್ಷವರ್ಧನ್, ಪಕೀರೇಶ್ ಕಲ್ಲಪ್ಪ ಬಾದಾಮಿ, ಡಾ. ನಾಗಾರ್ಜುನ ಗೌಡ, ಬಿ.ವಿ. ಅಶ್ವಿಜಾ ಆರ್. ಮಂಜುನಾಥ್ ಎಸ್. ಬೃಂದಾ, ಹೇಮಂತ್, ಎಂ.ಕೆ. ಶೃತಿ, ವೆಂಕಟರಾಮ್, ಸಂತೋಷ್ ಎಚ್. ಎಸ್, ಅಶೋಕ್ ಕುಮಾರ್ , ಎನ್. ರಾಘವೇಂದ್ರ ಮತ್ತು ಶಶಿಕಿರಣ್ Rank ಪಡೆದ ಅಭ್ಯರ್ಥಿಗಳಾಗಿದ್ದಾರೆ.

24 ಮಂದಿ ರ್ಯಾಂಕ್ ವಿಜೇತರಲ್ಲಿ 17 ಮಂದಿ ಡಾ. ರಾಜ್ ಕುಮಾರ್ ಐಎಎಸ್ ಅಕಾಡಮಿಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ಅಕಾಡಮಿ ತಿಳಿಸಿದೆ. ಒಟ್ಟಾರೆ ಯುಗಾದಿ ಸಂಭ್ರಮದಲ್ಲಿ ರಾಜ್ಯದ ಜನತೆಗೆ ಇದು ಸಿಹಿ ಸುದ್ಧಿಯಾಗಿದೆ.

ಈ ಪ್ರತಿಭೆಗಳಿಗೆ ನಿಮ್ಮದೊಂದು ಶುಭಾಶಯವಿರಲಿ. ಲೈಕ್ ಮಾಡಿ ಶೇರ್ ಮಾಡಿ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!