ದೇಶದ ಹೆಮ್ಮೆಯ ಕನ್ನಡಿಗ ಏಕೈಕ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಮೊಮ್ಮಗ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್ ಸ್ವಾಮಿಯವರ ಸುಪುತ್ರ ನಿಖಿಲ್ ಮದುವೆ ಅದ್ದೂರಿಯಾಗಿ ಮಾಡಲು ಚನ್ನಪಟ್ಟಣ-ರಾಮನಗರ ಮಧ್ಯೆ ಸ್ಥಳ ಗುರುತಿಸಿ ಸೆಟ್ ನಿರ್ಮಾಣದ ಕಾರ್ಯವೂ ಕೂಡ ನಡೆಯುತ್ತಿತ್ತು,
ವಿಶ್ವವ್ಯಾಪಿ ಸದ್ದು ಮಾಡುತ್ತಿರುವ ಕಣ್ಣಿಗೆ ಕಾಣದ ಕೊರೊನಾ ಕರ್ನಾಟಕಕ್ಕೂ ಕಾಲಿಟ್ಟೂ ದೇಶದ ಜೊತೆ ರಾಜ್ಯವೂ ಲಾಕ್‍ಡೌನ್ ಆಗಿರುವ ಹಿನ್ನಲೆಯಲ್ಲಿ ಸಾಕಷ್ಟು ಮನೆಯಗಳ ಶುಭ ಕಾರ್ಯಗಳು ಮುಂದಕ್ಕೆ ಹೋಗಿವೆ ಆದರೆ ನಿಖಿಲ್ ಮದುವೆ ನಿಗಧಿಯಂತೆ ಏಪ್ರಿಲ್ 17ಕ್ಕೆ ನಡೆಯಲಿದೆ ಅದು ಬಿಡದಿಯ ಬಳಿರುವ ಹೆಚ್‍ಡಿಕೆ ತೋಟದ ಮನೆಯಲ್ಲಿ ವರ ಮತ್ತು ವಧುವಿನ ಮನೆಯವರು ಮಾತ್ರ ಭಾಗವಹಿಸುವ ಮೂಲಕ ಸರಳವಾಗಿ ಮದುವೆ ನಡೆಸಲು ಹೆಚ್.ಡಿ. ದೇವೆಗೌಡರವರ ಸಮ್ಮಖದಲ್ಲಿ ತಿರ್ಮಾನಿಸಲಾಗಿದೆಯಂತೆ. ಕಾರ್ಯಕರ್ತರು, ಅಭಿಮಾನಿಗಳನ್ನು ಒಳಗೊಂಡಂತೆ ಯಾರಿಗೂ ಆಹ್ವಾನವಿಲ್ಲ ಈ ಮದುವೆಗೆ ವಧು ಮತ್ತು ವರನ ಮನೆಯವರಿಗಷ್ಟೇ ಆಹ್ವಾನವಿದ್ದು. ಸಹಕರಿಸಲು ಹೆಚ್.ಡಿ. ಕುಮಾರ ಸ್ವಾಮಿಯವರು ಕೋರಿದ್ದಾರೆ. ಕೊರೊನಾ ಸಾಂಕ್ರಮಿಕ ರೋಗ ತಣ್ಣಗಾದ ಮೇಲೆ ಅದ್ದೂರಿಯಾಗಿ ಎಲ್ಲರ ಸಮ್ಮಖದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಸಲು ಕೂಡ ಯೋಜಿಸಲಾಗಿದೆ. ದೂರದಿಂದಲೇ ವಧು-ವರರಿಗೆ ಶುಭ ಹಾರೈಸೋಣ.