ಏಪ್ರಿಲ್ 14ರ ನಂತರವೂ ಲಾಕ್‍ಡೌನ್ ವಿಸ್ತರಣೆ!? ಸಿ.ಎಂ. ಯಡಿಯೂರಪ್ಪ.ಏಪ್ರಿಲ್ 14ರ ನಂತರ ಲಾಕ್‍ಡೌನ್ ಅವಧಿ ಮುಗಿಯುತ್ತೆ ಕೆಲಸಕ್ಕೆ ಹೋಗಬಹುದು, ದುಡಿಮೆ ಮಾಡಬಹುದು , ಆರಾಮವಾಗಿ ತಿರುಗಾಡಬಹುದು ಎಂದು ಭಾವಿಸಿದ್ದ ಜನತೆಗೆ ಕಹಿ ಸುದ್ದಿಯೊಂದು ಬಂದಿದೆ.
ಇವತ್ತು (09.04.2020) ನಡೆದ ಸಚಿವ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ವಿಸ್ತರಿಸುವಂತೆ ಸಲಹೆ ನೀಡಿರುವ ತಜ್ಞರ ಅಭಿಪ್ರಾಯವನ್ನು ಪಾಲಿಸಲು ಎಲ್ಲ ಸಚಿವರು ಒಪ್ಪಿರುವುದಾಗಿ ಸಿ.ಎಂ. ಯಡಿಯೂರಪ್ಪನವರು ಮಾದ್ಯಮಗಳಿಗೆ ತಿಳಿಸಿದರು. ಆದರೆ ಈ ಬಗ್ಗೆ ತಿರ್ಮಾನವನ್ನು ನಾಳೆ ಪ್ರಧಾನಿ ಮಂತ್ರಿಗಳೊಡನೆ ಚರ್ಚಿಸಿದ ನಂತರ ತಿಳಿಸುವುದಾಗಿ ತಿಳಿಸಿದರು. ಏಪ್ರಿಲ್ 30ರ ವರೆಗೆ ಯಾವುದೇ ಸಾರ್ವಜನಿಕ ಸಾರಿಗೆ, ಮೆಟ್ರೋ, ಓಲಾ. ಆಟೋ ಸಂಚಾರ ವಿರುವುದಿಲ್ಲ. ಈ ತೀರ್ಮಾನವನ್ನು ಈ ದಿನ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸಾರ್ವಜನಿಕರು ಮನೆಯಲ್ಲೇ ಇದ್ದು ಕೊವಿಡ್ 19 ಸೊಂಕು ಹರಡದಂತೆ ತಡೆಯಬೇಕೆಂದು ಮನವಿ ಮಾಡಿದರು.