ಅಂದುಕೊಂಡಂತೆ ನಡೆದಿದ್ದರೆ ನಾಳೆ (17.04.2020) ನಿಖಿಲ್-ರೇವತಿ ಮದುವೆ ರಾಮನಗರ ಚನ್ನಪಟ್ಟಣದ ನಡುವೆ ಅತ್ಯಂತ ವಿಜೃಂಭಣೆಯಿಂದ ಲಕ್ಷಾಂತರ ಜನರ ಸಮ್ಮಖದಲ್ಲಿ ನೆರವೆರುತ್ತಿತ್ತು. ಆದರೆ ಕೊರೊನಾ ಅಟ್ಟಹಾಸದಿಂದ ಭಾರತ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ನಿಖಿಲ್ ರೇವತಿಯ ಮದುವೆಯೂ ಒಳಗೊಂಡಂತೆ ಸಾಕಷ್ಟು ಶುಭ ಕಾರ್ಯಗಳು ಸರಳವಾಗಿ ನಡೆಯುತ್ತಿವೆ.
ಹೆಚ್.ಡಿ. ಕುಮಾರಸ್ವಾಮಿ ಅನಿತಾಕುಮಾರಸ್ವಾಮಿ ದಂಪತಿಗಳ ಮಗ ನಿಖಿಲ್ ಚಿತ್ರರಂಗದಲ್ಲಿ ಹೆಸರು ಮಾಡಿದವರು ತಂದೆಯಂತೆ ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಮುಂದಾದವರು ಸದಾ ಲವಲವಿಕೆಯ ನಿಖಿಲ್ ರೇವತಿ ಮದುವೆ ಸುದ್ದಿ ರಾಜ್ಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಅಚಿತಿಮವಾಗಿ ಮದುವೆ ನಡೆಯುತ್ತಿರುವುದು ಹೆಚ್.ಡಿ.ಕುಮಾರಸ್ವಾಮಿಯವರ ಕರ್ಮಭೂಮಿ ರಾಮನಗರ ಜಿಲ್ಲೆಯಲ್ಲೆ ಹೌದು ಹೆಚ್.ಡಿ.ಕೆ ಫಾರಂ ಹೌಸ್‍ನಲ್ಲಿ ಕುಟುಂಬದವರ ಸಮ್ಮಖದಲ್ಲಿ ಅತ್ಯಂತ ಸರಳವಾಗಿ ಮದುವೆ ಕಾರ್ಯ ನಾಳೆ ನಡೆಯಲಿದೆ.
ಹೆಚ್.ಡಿ.ಕುಮಾರ ಸ್ವಾಮಿಯವರು ಅಭಿಮಾನಿ, ಕಾರ್ಯಕರ್ತರಲ್ಲಿ ಮನವಿ ಮಾಡಿದ್ದು, ಎಲ್ಲರೂ ತಮ್ಮ ತಮ್ಮ ಮನೆಯಿಂದಲೇ ನಾಳೆ ವಧು ವರರಿಗೆ ಆಶೀರ್ವಾದ ಮಾಡಬೇಕೆಂದು ಮಾದ್ಯಮದ ಮುಖಂತರ ಕೇಳಿಕೊಂಡಿದ್ದಾರೆ. ಕೊರೊನಾ ಸಮಸ್ಯೆ ಬಗೆ ಹರಿದ ಮೇಲೆ ಆರತಕ್ಷತೆಗೆ ಎಲ್ಲರನ್ನೂ ಆಹ್ವಾನಿಸುವುದಾಗಿಯೂ ತಿಳಿಸಿದ್ದಾರೆ. ಆಗಾಗಿ ದಯಮಾಡಿ ಕಾರ್ಯಕರ್ತರು, ಅಭಿಮಾನಿಗಳು ಮದುವೆ ಸಮಾರಂಭಕ್ಕೆ ಹೋಗದೇ ಮನೆಯಲ್ಲೇ ಇದ್ದು ಕೊರೊನಾ ಹರಡದಂತೆ ತಡೆಯುವ ಮೂಲಕ ದೂರದಿಂದಲೇ ಶುಭ ಹಾರೈಸುವುದು ಒಳ್ಳೆಯದು.