ನಮ್ಮ ರಾಮನಗರ

ಜಿಲ್ಲಾಡಳಿತಕ್ಕೆ ಬಿಡದಿ ಕೈಗಾರಿಕಾ ಸಂಘದಿಂದ 500 ಆಹಾರ ಪದಾರ್ಥ ಕಿಟ್

ರಾಮನಗರ ಏ. ೦೭ (ಕರ್ನಾಟಕ ವಾರ್ತೆ):- ಬಿಡದಿ ಕೈಗಾರಿಕಾ ಸಂಘದಿಂದ ಆಹಾರ ಪದಾರ್ಥಗಳುಳ್ಳ ೫೦೦ ಕಿಟ್‌ಗಳನ್ನು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರಿಗೆ ನೀಡಿದರು.ಆಹಾರ ಕಿಟ್‌ನಲ್ಲಿ ಅಕ್ಕಿ-೧೦ಕೆಜಿ, ಗೋಧಿ ಹಿಟ್ಟು-೩ ಕೆ.ಜಿ. ಸಕ್ಕರೆ-೧.೫ ಕೆ.ಜಿ, ತೊಗರಿ ಬೇಳೆ-೨ ಕೆ.ಜಿ, ರಾಗಿ ಹಿಟ್ಟು-೧ ಕೆ.ಜಿ., ಈರುಳ್ಳಿ-೧ ಕೆ.ಜಿ., ಉಪ್ಪು-೧ ಕೆ.ಜಿ., ಅಡುಗೆ ಎಣ್ಣೆ-೧ ಲೀ., ಸಾಂಬಾರ್ ಪುಡಿ-೨೦೦ ಗ್ರಾಂ., ಒಳಗೊಂಡಿರುತ್ತದೆ.೫೦೦ ಆಹಾರ ಕಿಟ್ ಜೊತೆಯಲ್ಲಿ ಅಕ್ಕಿ-೩೦೦ ಕೆ.ಜಿ., ಗೋಧಿ ಹಿಟ್ಟು-೧೦೦ ಕೆ.ಜಿ. ತೊಗರಿ ಬೇಳೆ-೫೦ ಕೆ.ಜಿ, ಅಡುಗೆ ಎಣ್ಣೆ-೧೦ ಲೀ., ಆಲುಗೆಡ್ಡೆ ೧ ಮೂಟೆ ಹಾಗೂ ಈರುಳ್ಳಿ-೧ ಮೂಟೆಯನ್ನು ಸಹ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಬಿಡದಿ ಕೈಗಾರಿಕಾ ಸಂಘದ ಭದ್ರತಾ ವಿಭಾಗದ ಮೇಜರ್ ಶಿವಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜು ಎಲ್., ಉಪನಿರ್ದೇಶಕ ಶಿವಲಿಂಗಯ್ಯ ಕೆ. ಉಪಸ್ಥಿತರಿದ್ದರು.

-Credit: dipr ramangara

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!