ನಮ್ಮ ರಾಮನಗರ

ರಾಮನಗರದಲ್ಲಿ ದಿನಸಿ ಕಿಟ್ (ಅನ್ನಂ ಪರಬ್ರಹ್ಮ )ನೀಡುವ ಕಾರ್ಯಕ್ಕೆ ಹೆಚ್ಡಿಕೆ ಕುಟುಂಬದಿಂದ ಚಾಲನೆ.

ಅನ್ನ ಸೃಷ್ಟಿಕರ್ತ ಬ್ರಹ್ಮನಿಗೆ ಸಮಾನ. ಆದ್ದರಿಂದ ಕಷ್ಟದಲ್ಲಿರುವ ಜನರಿಗೆ ಆಹಾರದ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತು ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿಯವರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ನಿಖಿಲ್ ಕುಮಾರ್ ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಸುಮಾರು ಒಂದು ಲಕ್ಷ ಕುಟುಂಬಕ್ಕೆ “ಅನ್ನಂ ಪರಬ್ರಹ್ಮ” ದಿನಸಿ ವಸ್ತುಗಳ ಕಿಟ್ ವಿತರಣೆಗೆ ರಾಮನಗರದಲ್ಲಿ ಆರಂಭಿಕವಾಗಿ ಸಾಂಕೇತಿಕವಾಗಿ ಚಾಲನೆ ನೀಡಿದರು.

ಈಗಾಗ್ಲೇ ತೀರಾ ಬಡತನದಲ್ಲಿರುವ, ಊಟದ ಸಮಸ್ಯೆ ಇರೋ‌ ಜನರಿಗೂ ಕೂಡ ಬೆಳಿಗ್ಗೆ ಸಂಜೆ ಎರಡೂ ಸಮಯ ರಾಮನಗರ & ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ 10 ಸಾವಿರ ಜನರಿಗೆ ಉಚಿತ ಉಪಹಾರ ವ್ಯವಸ್ಥೆಯನ್ನ ಮಾಡಲಾಗುತ್ತಿದೆ.

ಕೊರೋನಾದಿಂದ ಸಂಕಷ್ಟದಲ್ಲಿರುವ ಸಂಧರ್ಭದಲ್ಲಿ ಬಡಜನರಿಗೆ ಮಾಜಿ ಸಿಎಂ ಕುಮಾರಸ್ವಾಮಿಯವರು ಮತ್ತು ಶಾಸಕರಾದ ಅನಿತಾ ಕುಮಾರಸ್ವಾಮಿಯವರು ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳ ನಗರಸಭಾ ವ್ಯಾಪ್ತಿಯ ಪ್ರತಿ ವಾರ್ಡಗಳಲ್ಲಿ ಬಡವರಿಗೆ ಮತ್ತು ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿರುವ ಬಡ ಜನರಿಗೂ *ಅನ್ನಂ ಪರಬ್ರಹ್ಮ* ದಿನಸಿ ಕಿಟ್ ಗಳನ್ನ ಸಾಂಕೇತಿಕವಾಗಿ ನೀಡುವ ಮೂಲಕ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರೇವತಿ ನಿಖಿಲ್ ಕುಮಾರ್ ರವರು ವಿವಾಹವಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!