ನಮ್ಮ ರಾಮನಗರ

ಬೈ  ಶ್ರೀನಿವಾಸ್ ವಿದೇಶ ಪ್ರವಾಸಕ್ಕೆ  ರೋಟರಿ ವತಿಯಿಂದ ಅಭಿನಂದನೆ 

ಚನ್ನಪಟ್ಟಣ :- ದಕ್ಷಿಣ ಆಫ್ರಿಕಾ ದೇಶಕ್ಕೆ ವಿದೇಶ ಪ್ರವಾಸ ಹೊರಟ ಉದ್ಯಮಿ ,ರೋಟರಿ ಟಾಯ್ಸ್ ಸಿಟಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಬೈ ಶ್ರೀನಿವಾಸ್ ರವರಿಗೆ  ಪಟ್ಟಣದ 5ನೇ ಅಡ್ಡರಸ್ತೆಯಲ್ಲಿರುವ  ರೋಟರಿ ಟಾಯ್ಸ್ ಸಿಟಿ ಕ್ಲಬ್  ಕಚೇರಿಯಲ್ಲಿ  ಸಂಸ್ಥೆ  ವತಿಯಿಂದ  ಅಭಿನಂದನೆ ಸಲ್ಲಿಸಿ ಶುಭ ಹಾರೈಸಲಾಯಿತು .

  ಉದ್ಯಮಿ ಶ್ರೀನಿವಾಸ್ ರವರು ರಾಮನಗರ, ಚನ್ನಪಟ್ಟಣ, ಮಾಗಡಿ ತಾಲೂಕಿನಲ್ಲಿ  ಶ್ರೀನಿಧಿ ಫಾರ್ಮ್ ಇಕ್ವಿಪ್ ಮೆಂಟ್ಸ್ ಎಂಬ ಮಹಿಂದ್ರಾ ಕಂಪನಿಯ  ಟ್ರ್ಯಾಕ್ಟರ್ ಮಾರಾಟ ಮಳಿಗೆಗಳನ್ನು ನಡೆಸುತ್ತಿದ್ದು ,ಹೆಸರಾಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕಂಪನಿಯ ವತಿಯಿಂದ ಇದೇ ತಿಂಗಳು 15 ರಿಂದ 23 ನೇ ತಾರೀಖಿನವರೆಗೆ ಸೌತ್ ಆಫ್ರಿಕಾ ದೇಶದ ರಾಜಧಾನಿ ಕೇಪ್ ಟೌನ್ ಸೇರಿದಂತೆ   ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಿದ್ದಾರೆ . ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯ  ನಿರ್ವಹಿಸಿದ್ದಾರೆ . ಸಂಸ್ಥೆಯ ಕ್ರಿಯಾಶೀಲ ವ್ಯಕ್ತಿ  ವಿದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ರೋಟರಿ ಟಾಯ್ಸ್  ಸಿಟಿ ಕ್ಲಬ್ ಅಧ್ಯಕ್ಷ ಶೇಖರ್ ಲಾಡ್, ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಕ್ಲಬ್ ಅಡ್ವೈಸರ್ ನಾಗೇಶ್ ಬಿ .ಎಂ ,ಪದಾಧಿಕಾರಿಗಳಾದ ತೇಜಸ್ ,ಸುಕೃತ್, ಚಂದನ್ ,ಮೋಹನ್, ಅಪ್ಪಾಜಿ,ಚಂದ್ರಶೇಖರ್ ,ಜಯರಾಮು ,ಅರ್ಜುನ್, ಧನುಷ್ ,ರಾಜೇಶ್ ಮೊದಲಾದವರು ಬೈ ಶ್ರೀನಿವಾಸ್ ರವರ ವಿದೇಶ ಪ್ರವಾಸ ಸುಖಮಯವಾಗಿರಲೆಂದು ಶುಭ ಹಾರೈಸಿ ಅಭಿನಂದಿಸಿದ್ದಾರೆ .

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!