ನಮ್ಮ ರಾಮನಗರ

ಸದೃಢ ದೇಶ ನಿರ್ಮಾಣಕ್ಕೆ ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳಿ  :- ಯೋಗೇಶ್ ಚಕ್ಕೆರೆ

ಚನ್ನಪಟ್ಟಣ :- ಸ್ವಾಮಿ ವಿವೇಕಾನಂದರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ  ಮಹಾನ್ ದಾರ್ಶನಿಕ ದೇಶಭಕ್ತರಾಗಿದ್ದರು. ಅವರ  ತತ್ವಾದರ್ಶಗಳನ್ನು ಇಂದಿನ ವಿದ್ಯಾರ್ಥಿ ಸಮೂಹ ಮತ್ತು ಯುವಜನತೆ  ಮೈಗೂಡಿಸಿಕೊಂಡಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದೆ ಎಂದು  ಶಿಕ್ಷಣ ಸಂಯೋಜಕ  ಯೋಗೇಶ್ ಚಕ್ಕೆರೆ ವಿದ್ಯಾರ್ಥಿಗಳಿಗೆ ತಿಳಿಸಿದರು.

   ಪಟ್ಟಣದ  ಸಾತನೂರು ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ  ವಸತಿ   ಶಾಲೆಯಲ್ಲಿ ಅಗಸ್ತ್ಯ ಫೌಂಡೇಶನ್ ಮತ್ತು ಎಲ್ ಎಸ್ ಐ ಇಂಡಿಯಾ ವಿಜ್ಞಾನ ಕೇಂದ್ರ ಇವರ  ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು .ಸ್ವಾಮಿ ವಿವೇಕಾಂದರು ಭಾರತೀಯರ ಬಗ್ಗೆ ವಿದೇಶಿಗರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ, ವಿಶ್ವಕ್ಕೆ ಸಹೋರತೆಯ ಸಂದೇಶವನ್ನು ಸಾರಿದ ಮಹಾಪುರುಷ.ಅಮೆರಿಕದಾ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಐತಿಹಾಸಿಕವಾಗಿದೆ. ಭಾರತವನ್ನು ಪ್ರತಿನಿಧಿಸಿದ್ದ ಅವರು ತಮ್ಮ ಉದಾತ್ತ ಮಾತುಗಳಿಂದಲೇ ದೇಶದ ಘನತೆ ಎತ್ತಿ ಹಿಡಿದವರು. ಸ್ಮಾಮಿ ವಿವೇಕಾನಂದರ ದಿವ್ಯವಾಣಿಗಳು ಯುವಜನತೆಗೆ ಸ್ಪೂರ್ತಿ ನೀಡುತ್ತವೆ. ಅವರು ಕೇವಲ 39 ವರ್ಷ ಮಾತ್ರ ಬದುಕಿದರೂ ಕೂಡಾ ವಿಶ್ವ ಮಾನವ, ವೀರ ಸನ್ಯಾಸಿ, ವಿಶ್ವ ವಿಜೇತರೆನಿಸಿಕೊಂಡವರು. ವಿವೇಕಾನಂದರ ತತ್ವಗಳನ್ನು ಯುವ ಜನತೆ ಅನುಸರಿಸಿದರೆ ತಮ್ಮ ವ್ಯಕ್ತಿತ್ವವನ್ನು ಅತ್ಯುತ್ತಮ ಮಾಡಿಕೊಳ್ಳಲು ಸಾದ್ಯವಾಗುತ್ತದೆ ಎಂದು ಹೇಳಿದರು.
ಶಾಲೆಯ   ಸಮಾಜ ವಿಜ್ಞಾನ ಶಿಕ್ಷಕ ಸತೀಶ್ ಮಾತನಾಡಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ದೊಡ್ಡದು, ಸಿದ್ಧಾಂತ ವಿಶಾಲವಾದದ್ದು, ಪ್ರತಿಯೊಬ್ಬರು ಸಹೋದರತೆ, ಸಮನ್ವಯತೆ, ಸಮಗ್ರತೆ ಹಾಗೂ ಭಾತೃತ್ವದಿಂದ ಬದುಕು ನಡೆಸಬೇಕು ಎಂದು ಸಾರಿದ್ದರು.ವಿಶ್ವಕಂಡ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದ  ವಿವೇಕಾನಂದರು ಯುವ ಜನರಿಗೆ ಪ್ರೇರಕ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇವರ ಆದರ್ಶ ಗುಣಗಳು ಯುವಜನರಿಗೆ ಮಾದರಿ ಎಂದರು .
    ಶಾಲೆಯ ಪ್ರಾಂಶುಪಾಲರಾದ  ಕಮಲಮ್ಮ ಮಾತನಾಡಿ ತ್ಯಾಗ ಮತ್ತು ಸೇವೆ, ಇವರೆಡೂ ಸ್ವಾಮಿ ವಿವೇಕಾನಂದರ ಪ್ರಮುಖ ಆದರ್ಶ ತತ್ವಗಳಾಗಿದ್ದವು.  ವಿವೇಕಾನಂದರ ತತ್ವ ಆದರ್ಶ ಸಿದ್ಧಾಂತಗಳನ್ನು ಅಳವಡಿಸಿಕೊಂಡಲ್ಲಿ, ಪ್ರತಿಯೊಬ್ಬ  ವ್ಯಕ್ತಿಯು ದೇಶಕ್ಕೆ ಆದರ್ಶಪ್ರಾಯರಾಗಲು ಸಾಧ್ಯವಿದ್ದು, ಯುವ ಜನತೆಯನ್ನು ಸನ್ಮಾರ್ಗದಲ್ಲಿ ನಡೆಸಲು ವಿವೇಕಾನಂದರ ಜೀವನ ಮಾರ್ಗದರ್ಶಕವಾಗಿ ಸ್ಪೂರ್ತಿ ನೀಡಲಿದೆ, ಆ ದಿಸೆಯಲ್ಲಿ ವಿದ್ಯಾರ್ಥಿಗಳು ಇರುವ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ರಾಷ್ಟ್ರಕ್ಕೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
        ಅಗಸ್ತ್ಯ ಫೌಂಡೇಶನ್ ಮತ್ತು ಎಲ್.ಎಸ್ ಐ  ಇಂಡಿಯಾ ವಿಜ್ಞಾನ  ಕೇಂದ್ರದ   ಸಂಯೋಜಕರಾದ ಮನು , ಶಶಿಧರ್, ಶಾಲೆಯ ಶಿಕ್ಷಕರಾದ ಮಹೇಂದ್ರ ,ವರಲಕ್ಷ್ಮಿ, ಸುವರ್ಣ, ಕಾವ್ಯ ,ವೆಂಕಟೇಶ್ ,ರಶ್ಮಿ ,ಮೊದಲಾದವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು.ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರಾದ  ಯಶಸ್ವಿನಿ ,ಅಶ್ವಿನಿ ,ಕಾವ್ಯಶ್ರೀ, ಖುಷಿ, ವರಲಕ್ಷ್ಮಿ ,ಮೊದಲಾದವರು  ಸ್ವಾಮಿ ವಿವೇಕಾನಂದರನ್ನು ಕುರಿತು ಭಾಷಣ ಮಾಡಿದರು . ಶಾಲಾ  ವಿದ್ಯಾರ್ಥಿಗಳು ವಿವೇಕಾನಂದರ ದಿವ್ಯವಾಣಿಗಳನ್ನು  ವಾಚಿಸಿದರು .

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!