ಸುದ್ದಿ

ಅಂಗನವಾಡಿ ಕಾರ್ಯಕರ್ತೆ ಇದೀಗ ಲೋಕಸಭಾ ಸದಸ್ಯೆ ಓದಿ.

ಇತ್ತಿಚೇಗೆ ಒಡಿಸಾದ ಗುಡಿಸಲಿನ ಫಕೀರ ಮೋದಿ ಸಚಿವ ಸಂಪುಟದಲ್ಲಿ ರಾಜ್ಯ ಖಾತೆ ಸಚಿವನಾದದ್ದು ಎಲ್ಲರೂ ಓದಿದ್ದಿರಿ. ಅದೇ ಒಡಿಸಾದ ಅಸ್ಕಾ ಕ್ಷೇತ್ರದಿಂದ ಮತ್ತೊಬ್ಬ ಸಾಮಾನ್ಯ ಬಡ ಮಹಿಳೆ ಸಂಸದೆ ಆಗಿ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ. ಸಾಮಾನ್ಯ ಬಡ ಕುಟುಂಬದ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಪ್ರಮೀಳಾ ಬಿಸೋಯಿ (70) ಇಂದು ಲೋಕಸಭಾ ಸದಸ್ಯೆ. ಅಚ್ಚರಿ ಅನ್ಸುದ್ರು ಸತ್ಯ.


ರಾಜ್ಯ ಸರ್ಕಾರದ ಸ್ವಸಹಾಯ ಸಂಘಗಳ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಪ್ರಿಯವಾಗಿದ್ದ ಒಡಿಸಾದ ಪ್ರಮೀಳಾ ಬಿಸೋಯಿ ಅವರಿಗೆ ನವೀನ್ ಪಟ್ನಾಯಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಕರೆ ಮಾಡುತ್ತಾರೆ. ಆದರೆ ಭುವನೇಶ್ವರಗೆ ಕಾರಿನಲ್ಲೂ ಬರಲು ಸಹ ಹಣವಿಲ್ಲದ ಪ್ರಮೀಳಾ ಬಿಸೋಯಿ ಸುಮ್ಮನಾಗಿದ್ದರು. ಆದರೆ ನವೀನ್ ಪಟ್ನಾಯಕ್ ಸ್ವತ: ಅವರೇ ಕಾರನ್ನು ಕರೆಯಿಸಿ ಪ್ರಮೀಳಾ ಬಿಸೋಯಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ವಿನಂತಿಸುತ್ತಾರೆ. ಇದಕ್ಕೆ ಪ್ರಮೀಳಾ ಬಿಸೋಯಿ ವಿನಯದಿಂದಲೇ ನಿರಾಕರಿಸುತ್ತಾರೆ. ಆದರೂ ನವೀನ್ ಪಟ್ನಾಯಕ್ ಒತ್ಥಾಯಪೂರ್ವಕವಾಗಿ ಇವರನ್ನು ಚುನಾವಣೆಗೆ ಸ್ಪರ್ಧಿಸಲು ಮನವೊಲಿಸುತ್ಥಾರೆ. ನಂತರ ನಡೆದದ್ದು ಇತಿಹಾಸ ಇವರು ಭಾರಿ ಬಹುಮತದಿಂದ ಜಯಶೀಲರಾಗಿ ಇಂದು ಸಂಸದೆಯಾಗಿದ್ದಾರೆ.

ಬಡ ರೈತ ಕುಟುಂಬದವರಾದ ಪ್ರಮೀಳಾ ಬಿಸೋಯಿ ಹಾಗೂ ಅವರ ಪತಿ ಸರ್ಕಾರಿ ನೌಕರರು. ಆಕೆಯ ಹಿರಿಯ ಪುತ್ರ ಕೂಡ ಗ್ರಾಮದಲ್ಲೇ ಚಹಾ ಅಂಗಡಿ ತೆರೆದಿದ್ದಾರೆ. ಕಿರಿಯ ಮಗ ಬೈಕ್‍ಗ್ಯಾರೇಜ್ ಅಂಗಡಿ ನಡೆಸುತ್ತಾನೆ. ನಿರುದ್ಯೋಗದ ಬಗ್ಗೆ ಅತೀವ ಆಸಕ್ತಿ ಇರುವ ಪ್ರಮೀಳಾ ಸಣ್ಣ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಯೋಜನೆ ಹೊಂದಿದ್ದಾರೆ. ಪ್ರಜಾಪ್ರಭುತ್ವ ನಿಜವಾಗಿ ಕಂಗೊಳಿಸುವುದು ಇಂತವರು ಸಾರ್ವತ್ರಿಕ ಚುನಾವಣೆಗಳಲ್ಲಿ ಜಯಶೀಲರಾದಗಲೇ.

 

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!